ಕಿಲ ಕಿಲ ಕೋಮಲ ಆಂಟಿ ಕಣ್ಸನ್ನೆಗೆ ಅಂಕಲ್‌ಗಳೆಲ್ಲಾ ಫ್ಲ್ಯಾಟ್: ಲಕ್ಷ ಲಕ್ಷ ವಂಚಿಸಿ ಸಿಕ್ಕಿಬಿದ್ದಳು!

By Sathish Kumar KHFirst Published Sep 1, 2024, 6:12 PM IST
Highlights

ಮದುವೆಯಾಗಿ 20 ವರ್ಷದ ಮಕ್ಕಳಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡುತ್ತಾ ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ (ಸೆ.01): ಮದುವೆಯಾಗಿ 20 ವರ್ಷದ ಮಕ್ಕಳಿರುವ ಕೋಮಲಾ ಅಂಟಿಯ ಕಣ್ಸನ್ನೆ ಹಾಗೂ ಮೆಸೇಜ್‌ಗಳಿಗೆ ಫಿದಾ ಆಗದ ಅಂಕಲ್‌ಗಳೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಣ್ಣ ಬಣ್ಣದ ರೀಲ್ಸ್ ಮಾಡುತ್ತಾ ಪೋಸ್ಟ್ ಹಂಚಿಕೊಳ್ಳುವ ಈ ಆಂಟಿ ಆನ್‌ಲೈನ್‌ನಲ್ಲಿ ತನಗೆ ಸಂದೇಶ ಕಳಿಸುವ ಅಂಕಲ್‌ಗಳೇ ಈಕೆಯ ಟಾರ್ಗೆಟ್ ಆಗಿದ್ದಾರೆ. ನಾನು ವಿಧವೆ ಗಂಡನಿಲ್ಲ, ಮಕ್ಕಳಿಲ್ಲ ಎಂದೆಲ್ಲಾ ಹೇಳಿಕೊಳ್ಳುವ ಈ ಕೋಮಲಾ ಆಂಟಿ ಮದುವೆ ಪ್ರಸ್ತಾಪ ಮಾಡಿ ಅಂಕಲ್‌ಗಳಿಂದ ಲಕ್ಷ ಲಕ್ಷ ಹಣ, ಆಭರಣ ದುಬಾರಿ ಉಡುಗೊರೆಗಳನ್ನು ಪಂಗನಾಮ ಹಾಕುತ್ತಿದ್ದಾಳೆ.

ಮದುವೆ ಮಾಡಿಕೊಳ್ಳುವ ನೆಪದಲ್ಲಿ ರಾಜ್ಯದ ಅನೇಕ ಪುರುಷರಿಗೆ ವಂಚನೆ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಮಹಿಳೆ ಕೋಮಲ ಎಂಬಾಕೆ ಆಗಿದ್ದಾಳೆ. ಸುಮಾರು 38ರಿಂದ 40 ವರ್ಷದ ಈ ಮಹಿಳೆಗೆ ಈಗಾಗಲೇ ಮದುವೆ ಆಗಿ 21 ವರ್ಷವಾಗಿದೆ. ಈಕೆಗೆ 20 ವರ್ಷದ ಮಗ ಹಾಗೂ 16 ವರ್ಷದ ಮಗಳಿದ್ದಾಳೆ. ತಾನಾಯ್ತು, ತನ್ನ ಸಂಸಾರವಾಯ್ತು ಎಂದು ಯಾವುದಾದರೂ ದುಡಿಮೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವುದನ್ನು ಬಿಟ್ಟು ರೀಲ್ಸ್ ಮಾಡುತ್ತಾ ಅಂಕಲ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗಿದ್ದಾಳೆ. ಹೀಗೆ, ನಾಲ್ಕೈದು ಅಂಕಲ್‌ಗಳನ್ನು ಬುಟ್ಟಿಗೆ ಬೀಳಿಸಿಕೊಂಡು ಲಕ್ಷಾಂತರ ರೂ. ಹಣ ವಂಚನೆ ಮಾಡಿದ ನಂತರ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Latest Videos

ಹುಡುಗರು ಲವ್ ಪ್ರಪೋಸ್ ಮಾಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ 15ರ ಬಾಲಕಿ!

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಿವಾಸಿ ರಾಘವೇಂದ್ರ ಎಂಬುವರ ಜೊತೆಯಲ್ಲಿ ಚಾಟಿಂಗ್ ಮಾಡುತ್ತಾ ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಾ ಪೋಸ್ಟ್ ಮಾಡುತ್ತುದ್ದ ಕೋಮಲಾ ಆಂಟಿಗೆ ಯಾರಾದರೂ ಲೈಕ್ ಮಾಡಿದರೆ, ಕಾಮೆಂಟ್ ಮಾಡಿದರೆ ಅವರೊಂದಿಗೆ ಚಾಟಿಂಗ್ ಮಾಡುತ್ತಾರೆ. ನಂತರ, ಕಾಮೆಂಟ್‌ ಮಾಡಿದವರ ಪೂರ್ವಾಪರ ತಿಳಿದುಕೊಂಡು ಅಲುಗೆ ಬೆಳೆಸಿಕೊಳ್ಳುತ್ತಾರೆ. ನಂತರ, ಮದುವೆ ಆಗದಿರುವ ಪುರುಷರು, ಹೆಂಡತಿಗೆ ಡಿವೋರ್ಸ್ ನೀಡಿ ಒಬ್ಬಂಟಿಯಾಗಿರುವ ಪುರುಷರಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸುತ್ತಾಳೆ. ತನಗೆ ಈಗಾಗಲೇ ಮದುವೆ ಆಗಿದ್ದು, ಗಂಡ ತೀರಿ ಹೋಗಿದ್ದಾರೆ. ನನಗೆ ಮಕ್ಕಳಿಲ್ಲ, ಮದುವೆ ಮಾಡಿಕೊಂಡು ಬಾಳು ಕೊಡುತ್ತೀರಾ? ಎಂದು ಕೇಳುತ್ತಾಳೆ. ಇನ್ನು ಮೊದಲೇ ಹೆಣ್ಣು ಸಿಗದೇ ಪರಿತಪಿಸುವವರು ಈಕೆಯ ಬುಟ್ಟಿಗೆ ಸುಲಭವಾಗಿ ಬೀಳುತ್ತಾರೆ.

ತನ್ನ ಮೋಸಲ ಜಾಲಕ್ಕೆ ಬಿದ್ದ ಅಂಕಲ್‌ಗಳೊಂದಿಗೆ ಸ್ವಲ್ಪ ಸಲುಗೆಯಿಂದಲೇ ಚಾಟಿಂಗ್ ಮಾಡುವ ಕೋಮಲಾ ಆಂಟಿ, ತೀರಾ ಪರ್ಸನಲ್ ಎನ್ನುವಂತೆ ಅವರೊಂದಿಗೆ ಮಾತನಾಡುತ್ತಾಳೆ. ನಂತರ, ಮನೆ ನಿರ್ವಹಣೆ, ಇತ್ಯಾದಿ ಎಂದು ಹೇಳಿ ಲಕ್ಷ ಲಕ್ಷ ರೂ. ಹಣವನ್ನು ಪೀಕುತ್ತಾಳೆ. ನಂತರ ಅವರ ಸಂಪರ್ಕಕ್ಕೆ ಸಿಗದೇ ವಂಚನೆ ಮಾಡಿ ಚಾಟಿಂಗ್ ಮಾಡುತ್ತಿದ್ದವರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುತ್ತಾಳೆ. ಹೀಗೆ, ರಾಘವೇಂದ್ರ ಎಂಬುವವರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಬರೋಬ್ಬರಿ 7.40 ಲಕ್ಷ  ರೂಪಾಯಿ ಪಡೆದು ವಂಚನೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಅವರು ವಂಚನೆಗೊಳಗಾದ ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ನಿಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಸಿಗದ ಗಂಡಸರೇ ಈಕೆಯ ಟಾರ್ಗೆಟ್; ಒಂದೇ ಮದುಮಗಳು, ಮೂರು ವರ್ಷಕ್ಕೆ ನಾಲ್ಕು ಮದುವೆ

ರಾಘವೇಂದ್ರ ಅವರ ದೂರು ಆಧರಿಸಿ ಚಿಕ್ಕಬಳ್ಳಾಪುರ ಕೇಂದ್ರೀಯ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ, ಬೆಂಗಳೂರಿನ ಮಹಿಳೆಯನ್ನು ಬಂಧಿಸಿದ್ದಾರೆ. ವಂಚನೆ ಮಾಡುತ್ತಿದ್ದ ಮಹಿಳೆಯಿಂದ ಒಂದು ಐಷಾರಾಮಿ ಐಪೋನ್, ಲಕ್ಷಾಂತರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಈ ಮಹಿಳೆ ಉತ್ತಮವಾಗಿ ಹಿಂದಿ ಮಾತನಾಡುವವಳಾಗಿದ್ದು, ಬೆಂಗಳೂರು, ಗುಜರಾತ್ ಸೇರಿದಂತೆ ಹಲವು ರಾಜ್ಯದ ಪುರುಷರಿಗೆ ಆನ್‌ಲೈನ್‌ಲ್ಲಿ ವಂಚನೆ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ಮಾಡುತ್ತಿದ್ದಳು ಎಂಬು ತಿಳಿದುಬಂದಿದೆ.

click me!