"ಡ್ರೈ ಫ್ರೂಟ್ಸ್ ತಿನ್ನಲಾರೆ, ಅವಲಕ್ಕಿಯೇ ಬೇಕು" ಗಂಡ ಪೋಹಾ ಬೇಡ ಅಂದಿದ್ದಕ್ಕೆ ನೇಣಿಗೆ ಶರಣಾದ ನವವಿವಾಹಿತೆ

ಮಧ್ಯಪ್ರದೇಶದಲ್ಲಿ ನವವಿವಾಹಿತೆಯೊಬ್ಬಳು ಪತಿ ಅವಲಕ್ಕಿ ತಿನ್ನಲು ಬೇಡ ಅಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಪೋಹಾ ಮಾಡಲು ನಿರಾಕರಿಸಿ ಡ್ರೈ ಫ್ರೂಟ್ಸ್ ತಿನ್ನುವಂತೆ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.


ಭೋಪಾಲ್: ಮದುವೆ ಬಳಿಕ ಪತಿ-ಪತ್ನಿ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬೇಕು. ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ. ತನ್ನ ಪತ್ನಿಯ ಬೇಕು-ಬೇಡಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ಅದೇ ರೀತಿ ಗಂಡನಿಗೆ ಏನು ಇಷ್ಟ ಎಂದು ತಿಳಿಯಲು ಪ್ರಯತ್ನಿಸುತ್ತಿರುತ್ತಾಳೆ. ಆದ್ರೆ ಕೆಲವೊಮ್ಮೆ ಸಣ್ಣ ವಿಷಯಕ್ಕೆ ಶುರುವಾಗುವ ಜಗಳಗಳು ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತವೆ. ಮಧ್ಯಪ್ರದೇಶದಲ್ಲಿ ನವವಿವಾಹಿತೆ ಅವಲಕ್ಕಿಗಾಗಿ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. 

ಬಾಲಕಿಶನ್ ಮತ್ತು ಕವಿತಾ ಮದುವೆಯಾಗಿ ಕೆಲವೇ ದಿನಗಳಾಗಿತ್ತು. ಇಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಸಂಸಾರದ ಒಂದೊಂದೆ ಹೆಜ್ಜೆಗಳನ್ನು ಬಾಲಕಿಶನ್ ಮತ್ತು ಕವಿತಾ ಜೊತೆಯಾಗಿ ಇರಿಸುತ್ತಿದ್ದರು. ಆದ್ರೆ ಗಂಡ ಅವಲಕ್ಕಿ (ಪೋಹಾ) ತಿನ್ನಲು ಬೇಡ ಅಂದಿದ್ದಕ್ಕೆ ಕವಿತಾ ಕೋಪಗೊಂಡಿದ್ದಳು. ಕವಿತಾ ಪೋಹಾ ತಯಾರಿಸಲು ಮುಂದಾಗಿದ್ದಕ್ಕೆ ಬೇಡ ಅಂತ ಹೇಳಿದ್ದಾನೆ. ಮನೆಯಲ್ಲಿರುವ ಡ್ರೈ ಫ್ರೂಟ್ಸ್ ತಿನ್ನುವಂತೆ ಸಲಹೆ ನೀಡಿದ್ದಾನೆ. ಇದೇ ವಿಚಾರವಾಗಿ ಬಾಲಕಿಶನ್ ಮತ್ತು ಕವಿತಾ ನಡುವೆ ಜಗಳ ನಡೆದಿದೆ. 

Latest Videos

ಹೊರಗೆ ಪಿಜಿ, ಒಳಗೆ ಮಾಂಸ ದಂಧೆ... ವಾಟ್ಸಪ್‌ನಲ್ಲಿ ಡೀಲ್, ಯುವತಿಯರು ಈ ಜಾಲದಲ್ಲಿ ಸಿಲುಕಿದ್ದೇಗೆ?

ಬಾಲಕಿಶನ್ ಪೋಹಾ ಮಾಡಲು ತಡೆದಿದ್ದಕ್ಕೆ ಮುನಿಸಿಕೊಂಡ ಕವಿತಾ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಕೋಪದಲ್ಲಿದ್ದಾಳೆ ಎಂದು ಬಾಲಕಿಶನ್ ಪತ್ನಿಯ ಮನವೊಲಿಸಲು ಮುಂದಾಗಿಲ್ಲ. ಕೆಲ ಸಮಯದ ಬಳಿಕ ಪತ್ನಿಯನ್ನು ಕೂಗಿದ್ದಾನೆ. ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಬಾಗಿಲು ತಟ್ಟಿದ್ದಾನೆ. ಕೊನೆಗೆ ಬಾಗಿಲು ಮುರಿದು ಒಳಗೆ ಹೋದಾಗ ಕವಿತಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು.  

ನಂತರ ಬಾಲಕಿಶನ್ ಪೊಲೀಸರು ಮತ್ತು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು, ಫ್ಯಾನ್‌ನಲ್ಲಿ ನೇತಾಡುತ್ತಿದ್ದ ಶವ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಘಟನೆ ಸಂಬಂಧ  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಶನ್‌ನಿಂದ ಹೇಳಿಕೆ ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲಿಯೂ ತನಿಖೆ ಆರಂಭಿಸಿದ್ದಾರೆ.

Sorry ಅಮ್ಮಾ ನಿನ್ನನ್ನು ಕೊಂದು ಬಿಟ್ಟೆ.. ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಕ್ಕೊಂಡ ಮಗ!

click me!