
ಬೆಂಗಳೂರು(ಮಾ.13): ನಗರಕ್ಕೆ ಟ್ರಕ್ ಖರೀದಿಗಾಗಿ ಬಂದಿದ್ದ ರೈತನಿಗೆ(Farmer) ಪೊಲೀಸರ ಸೋಗಿನಲ್ಲಿ ಬೆದರಿಸಿ 8 ಲಕ್ಷ ದೋಚಿದ್ದ ನಾಲ್ವರು ಕಿಡಿಗೇಡಿಗಳು ಕೆ.ಜಿ.ಹಳ್ಳಿ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ. ತಮಿಳುನಾಡು(Tamil Nadu) ರಾಜ್ಯದ ವೆಲ್ಲೂರಿನ ನಟರಾಜ್ ಅಲಿಯಾಸ್ ರಾಜೇಶ್ ರೆಡ್ಡಿ, ಚಿತ್ರದುರ್ಗದ ಸದಾಶಿವ ನಾಯಕ್ ಅಲಿಯಾಸ್ ಪ್ರಶಾಂತ್, ಕೋಲಾರದ ಶಿವರಾಜ್ ಅಲಿಯಾಸ್ ಕೋಳಿ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) .8 ಲಕ್ಷ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಕಡಿಮೆ ಬೆಲೆಗೆ ಟ್ರಕ್ ಕೊಡಿಸುವುದಾಗಿ ಆರೋಪಿಗಳು ನಾಗಮಂಗಲದ ಎಚ್.ಜಿ.ರಂಗಸ್ವಾಮಿ ಅವರನ್ನು ನಂಬಿಸಿ ನಗರಕ್ಕೆ ಕರೆಸಿಕೊಂಡು ಬಳಿಕ ಬೆದರಿಸಿ ಹಣ ದೋಚಿದ್ದರು. ಈ ಬಗ್ಗೆ ಅವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
Bengaluru: ರಾತ್ರಿ ವೇಳೆ ಬಾಗಿಲು, ಕಿಟಕಿ ತೆರೆದಿರುವ ಮನೆಗಳೇ ಈತನ ಟಾರ್ಗೆಟ್..!
ಮಂಡ್ಯ(Mandya) ಜಿಲ್ಲೆ ನಾಗಮಂಗಲ ತಾಲೂಕಿನ ಎಚ್.ಜಿ.ರಂಗಸ್ವಾಮಿ ಅವರು, ಕೃಷಿ ಕಾರ್ಯದ ಸಲುವಾಗಿ ಟ್ರಕ್ ಖರೀದಿಗೆ ಮುಂದಾಗಿದ್ದರು. ಆಗ ರಂಗಸ್ವಾಮಿ ಅವರಿಗೆ ಸೊಸೆ ಸರೋಜಾ ಅವರು ‘ಮಾಧ್ಯಮದಲ್ಲಿ ಸೆಕೆಂಡ್ ಹ್ಯಾಂಡಲ್ ಟ್ರಕ್ ಮಾರಾಟದ ಬಗ್ಗೆ ಜಾಹೀರಾತು ನೋಡಿದೆ. ಮೊಬೈಲ್ ನಂಬರ್ ಇದೆ’ ಎಂದು ಹೇಳಿದ್ದರು. ನಂತರ ಜಾಹೀರಾತಿನಲ್ಲಿದ್ದ ಮೊಬೈಲ್ ಕರೆ ಮಾಡಿದ್ದಾರೆ.
ಆಗ ಕರೆ ಸ್ವೀಕರಿಸಿದ ನಟರಾಜ್, ತನ್ನನ್ನು ರವಿ ಎಂದು ಪರಿಚಯಿಸಿಕೊಂಡಿದ್ದಾನೆ. ಆಗ ನಿಮಗೆ ಕಡಿಮೆ ಬೆಲೆ ಟ್ರಕ್ ಕೊಡಿಸುತ್ತೇನೆ. ಮೆಜೆಸ್ಟಿಕ್ ಸಮೀಪ ಕಚೇರಿ ಇದೆ. ಅಲ್ಲಿಗೆ ಬರುವಂತೆ ಆತ ತಿಳಿಸಿದ್ದ. ಅಂತೆಯೇ ಫೆ.18ರಂದು ಮಾವ-ಸೊಸೆ ತೆರಳಿದ್ದರು. ಆ ವೇಳೆ ಮತ್ತೆ ಕರೆ ಮಾಡಿದ ಆರೋಪಿ, ಹೆಬ್ಬಾಳ ಮೇಲ್ಸೇತುವೆ ಬಳಿಗೆ ಬರುವಂತೆ ಸರೋಜಾ ಅವರಿಗೆ ತಿಳಿಸಿದ್ದ. ಅಲ್ಲಿಗೆ ಹೋದಾಗ ಕೊನೆಗೆ ನಾನೇ ಕ್ಯಾಬ್ ಕಳುಹಿಸುತ್ತೇನೆ. ನೀವು ಕೆ.ಜಿ.ಹಳ್ಳಿಗೆ ಬಂದು ಬಿಡಿ ಎಂದಿದ್ದ. ಆದರೆ ಕೆ.ಜಿ.ಹಳ್ಳಿಗೆ ತೆರಳಿದಾಗ ರಸ್ತೆಯಲ್ಲಿ ಅಡ್ಡಗಟ್ಟಿದ ಆರೋಪಿಗಳು, ತಮ್ಮನ್ನು ಪೊಲೀಸರೆಂದು ಪರಿಚಯಿಸಿಕೊಂಡು ರಂಗಸ್ವಾಮಿ ಅವರಿದ್ದ ಕಾರನ್ನು ತಪಾಸಣೆ ನಡೆಸಿದ್ದಾರೆ.
ಆಗ ಬ್ಯಾಗ್‌ನಲ್ಲಿ ಹಣ ನೋಡಿದ ದರೋಡೆಕೋರರು, ನಿಮ್ಮ ಬಳಿ ಇಷ್ಟುದೊಡ್ಡ ಮೊತ್ತದ ಇದೆ. ಹೀಗಾಗಿ ನಿಮ್ಮ ವಿರುದ್ಧ ಕಾನೂನುಬಾಹಿರ ಕೃತ್ಯದ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸುತ್ತೇವೆ ಎಂದು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಕೆ.ಜಿ.ಹಳ್ಳಿ ಠಾಣೆಗೆ ತೆರಳಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ರಂಗಸ್ವಾಮಿ ಅವರಿಗೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime; ಅಡವಿಟ್ಟ ಒಡವೆ ಕಡಿಮೆ ಬೆಲೆಗೆ ಬಿಡಿಸಿಕೊಡುವುದಾಗಿ ಧೋಖಾ..!
ಈ ನಾಲ್ವರು ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಜೈಲಿನಲ್ಲಿ ಅವರಿಗೆ ಪರಸ್ಪರ ಸ್ನೇಹವಾಗಿದೆ. ಕೆಲ ತಿಂಗಳ ಹಿಂದಷ್ಟೇ ಇದೇ ರೀತಿ ಪೊಲೀಸರ ಸೋಗಿನಲ್ಲಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ನಟರಾಜ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಜಾಮೀನು(Bail) ಪಡೆದು ಜೈಲಿನಿಂದ(Jail) ಹೊರ ಬಂದ ಬಳಿಕ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತರ್‌ಜಿಲ್ಲಾ ಕಳ್ಳರ ಬಂಧನ: ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ವಶ
ಹಾಸನ: ದೇವಸ್ಥಾನದ (Temple) ಹುಂಡಿ, ಮನೆ , ಮೊಬೈಲ್ ಕಳ್ಳತನ(Theft), ಪ್ರಕರಣಗಳಲ್ಲಿ ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು(Accused) ಬಂಧಿಸಿದ್ದು(Arrest) ಸುಮಾರು 18 ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳು, ಚಿನ್ನಾಭರಣ ಮತ್ತು 30 ಸಾವಿರ ರು. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ತಿಳಿಸಿದರು.
ನಗರದ(Hassan) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣ ಸಂಬಂಧ ಬೆಂಗಳೂರು(Bengaluru) ನಗರದ ಹೊಸಕೋಟೆ ನಿವಾಸಿಗಳಾದ ಆನಂದ್ (35 )ಬಿಡದಿ ರೈಲ್ವೆ ಸ್ಟೇಷನ್ ಸಮೀಪದ ನಿವಾಸಿ ಚಂದ್ರು(35) ಎಂಬುವರನ್ನು ಬಂಧಿಸಿ ಆರೋಪಿಗಳಿಂದ 18 ಲಕ್ಷ ಮೌಲ್ಯ90 ಮೊಬೈಲ್‌ಗಳು, ಚಿನ್ನಾಭರಣ ಹಾಗೂ 30 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ