ಬೆಂಗಳೂರಿನಲ್ಲಿ ಕ್ಷುಲಕ ಕಾರಣಕ್ಕೆ ಏರ್ ಫೈರಿಂಗ್!

Suvarna News   | Asianet News
Published : Mar 13, 2022, 12:23 AM IST
ಬೆಂಗಳೂರಿನಲ್ಲಿ ಕ್ಷುಲಕ ಕಾರಣಕ್ಕೆ ಏರ್ ಫೈರಿಂಗ್!

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಏರ್ ಫೈರಿಂಗ್ ಘಟನೆ ಎಚ್ಎಎಲ್ ಪೊಲೀಸರಿಂದ ಮಾಜಿ ಸೈನಿಕನ ಬಂಧನ ಪಿಸ್ತೂಲ್ ನಿಂದ ಒಂದು ಸುತ್ತು ಗುಂಡು ಹಾರಿಸಿದ ವ್ಯಕ್ತಿ

ಬೆಂಗಳೂರು (ಮಾ. 12):  ನೆರೆಹೊರೆಯವರೊಂದಿಗೆ ಹೊಡೆದಾಟದ ಸಂದರ್ಭದಲ್ಲಿ ಪಿಸ್ತೂಲ್‌ನಿಂದ (Pistol) ಗಾಳಿಯಲ್ಲಿ ಗುಂಡು ಹಾರಿಸಿದ ಮಾಜಿ ಸೈನಿಕನನ್ನು (Ex-serviceman)  ಎಚ್‌ಎಎಲ್ ಪೊಲೀಸರು (HAL Police) ಶುಕ್ರವಾರ ಬಂಧಿಸಿದ್ದಾರೆ. ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ (security guard )  ಆಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕ ರಾಜೇಶ್ ಕುಮಾರ್ ಪಾಂಡೆ (Rajesh Kumar Pandey) ಅವರನ್ನು ಆನಂದ ರೆಡ್ಡಿ ಲೇಔಟ್‌ನ (Ananda Reddy Layout) ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕುಮಾರ್ ಇತ್ತೀಚೆಗೆ ಒಂದು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಜೋರಾಗಿ ಸಂಗೀತ ಹಾಕಿಕೊಂಡಿದ್ದು ಅಕ್ಕಪಕ್ಕದವರಿಗೆ ಕಿರಿಕಿರಿ ಎನಿಸಿತ್ತು. ಈ ಶಬ್ದಿಂದ ಕೆರಳಿದ ಅವರ ನೆರೆಹೊರೆಯವರಲ್ಲಿ ಒಬ್ಬರು ಇದನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇವರಿಬ್ಬರು ನಡುವೆ ಜಗಳವಾಗಿದ್ದು, ಮದ್ಯದ ಅಮಲಿನಲ್ಲಿದ್ದ ರಾಜೇಶ್ ಕುಮಾರ್ ಪಾಂಡೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಯು 0.39 ಪಿಸ್ತೂಲ್ ನಿಂದ ಒಂದು ರೌಂಡ್ ಏರ್ ಫೈರ್ ಮಾಡಿದ್ದಾನೆ. ಇದರ ಬೆನ್ನಲ್ಲಿಯೇ ಆತನ ಬಂಧನವಾಗಿದೆ ಎಂದು ತಿಳಿಸಲಾಗಿದೆ. ವಿದೇಶಿ ಲೀಕರ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಕಂಪನಿಗೆ  ಬ್ಯುಸಿನೆಸ್ ಎಕ್ಸ್ ಚೇಂಜ್ ಗ್ರೂಪ್ ನಿಂದ ಸೆಕ್ಯೂರಿಟಿಗಾಗಿ ನಿವೃತ್ತ ಯೋಧ ರಾಜೇಶ್ ಕುಮಾರ್ ಪಾಂಡೆ ಅವರನ್ನು ನೇಮಕ ಮಾಡಲಾಗಿತ್ತು. ಶುಕ್ರವಾರ ರಾತ್ರಿ ದೊಡ್ಡ ಪಾರ್ಟಿ ನಡೆಸಿದ್ದ ರಾಜೇಶ್ ಕುಮಾರ್ ಪಾಂಡೆ ಮ್ಯೂಸಿಕ್ ಸಿಸ್ಟಮ್ ನಲ್ಲಿ ದೊಡ್ಡದಾಗಿ ಸೌಂಡ್ ನೀಡಿ ಅಕ್ಕಪಕ್ಕದವರಿಗೆ ಕಿರಿಕಿರಿ ಮಾಡಿದ್ದ. ಈ ವೇಳೆ ಅಪಾರ್ಟ್ ಮೆಂಟ್ ನ ನಿವಾಸಿಯಾಗಿದ್ದ ಸತೀಶ್ ರೆಡ್ಡಿ ಸೌಂಡ್ ಕಡಿಮೆ ಮಾಡುವಂತೆ ಕೇಳಲು ಹೋಗಿದ್ದ. ಆದರೆ, ತನ್ನೊಂದಿಗೆ ಗಲಾಟೆ ಮಾಡಲು ಬಂದಿದ್ದಾರೆ ಎಂದು ಭಾವಿಸಿದ್ದ ರಾಜೇಶ್ ಕುಮಾರ್ ಪಾಂಡೆ ಫೈರಿಂಗ್ ಮಾಡಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ಸತೀಶ್ ರೆಡ್ಡಿ ದಿಕ್ಕಾಪಾಲಾಗಿ ಓಡಿ ಹೋಗಿದ್ದರು. ಮರುದಿನ ಪೊಲೀಸ್ ಗೆ ದೂರು ನೀಡಿದ್ದರಿಂದ ರಾಜೇಶ್ ಕುಮಾರ್ ಪಾಂಡೆಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡೇಟಿನ ಶಬ್ದ ಕೇಳಿದ ಇತರ ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಬಂದು ತನಿಖೆ ನಡೆಸಿದರು. ಈ ವೇಳೆ ರಾಜೇಶ್ ಕುಮಾರ್ ಪಾಂಡೆ ಓಡಿ ಹೋಗಿದ್ದಾನೆ. ಪೊಲೀಸರಿಗೆ ಈ ಕುರಿತಾಗಿ ದೂರು ನೀಡಿದ ಬಳಿಕ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದರು.

ಕಂಟೈನರ್ ವಾಹನ ಕೊಡಿಸೋದಾಗಿ ಹೇಳಿ ದರೋಡೆ ಮಾಡಿದ್ದ ಗ್ಯಾಂಗ್ ಅರೆಸ್ಟ್
ಬೆಂಗಳೂರು (ಮಾ.12):
ಕಂಟೈನರ್ ವಾಹನ ಕೊಡಿಸೋದಾಗಿ ಹೇಳಿ ದರೋಡೆ ಮಾಡಿದ್ದ ಗ್ಯಾಂಗ್ ಅನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ನಟರಾಜನ್ ಅಲಿಯಾಸ್ ರಾಜಾರೆಡ್ಡಿ, ಸದಾಶಿವ ನಾಯಕ ಅಲಿಯಾಸ್ ರವಿ, ಶಿವರಾಜ್ ಅಲಿಯಾಸ್ ಕೋಳಿ, ದಿಲ್ಲುಬೋನ್, ನಿರ್ಮಲಾ ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳು ರಂಗಸ್ವಾಮಯ್ಯ ಎಂಬವರಿಗೆ ಸೆಕೆಂಡ್ ಹ್ಯಾಂಡ್ ಕಂಟೈನರ್ ಕೊಡಿಸೋದಾಗಿ ನಂಬಿಸಿದ್ದರು. ಎಂಟು ಲಕ್ಷ ರೂ ತನ್ನಿ ಅಂತ ಎಚ್ ಬಿ ಆರ್ ಲೇಔಟ್ ಗೆ ಕರೆಸಿಕೊಂಡಿದ್ದ ಆರೋಪಿಗಳು ಬಳಿಕ ರಂಗಸ್ವಾಮಯ್ಯರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಕಾರು ಒಂದು ಕಿಲೋಮೀಟರ್ ಹೋಗುತ್ತಿದ್ದತೆ ಕಾರನ್ನು ಅಡ್ಡಗಟ್ಟಿ ಅವರನ್ನು ಥಳಿಸಿದ್ದಾರೆ. ಪೊಲೀಸ್ ಎಂದು ಹೇಳಿಕೊಂಡು ಕಾರಿನಲ್ಲಿದ್ದ ರಂಗಸ್ವಾಮಯ್ಯರನ್ನ ಕಾರಿಂದ ಇಳಿಸಿದ್ದ ಆರೋಪಿಗಳು ಬಳಿಕ ಹಣವಿದ್ದ ಕಾರಿನ ಸಮೇತ ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಕುರತಾಗಿ ಕೆಜಿ ಹಳ್ಳಿ ಠಾಣೆಗೆ ರಂಗಸ್ವಾಮಯ್ಯ ದೂರು ನೀಡಿದ್ದರು. ಪ್ರಕರಣ ಸಂಬಂದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!