ಉತ್ತರಕನ್ನಡ: ಕಪ್ಪು ಅರಿಶಿನ ವ್ಯಾಪಾರದ ಹೆಸರಲ್ಲಿ ದಂಪತಿಗೆ ದೋಖಾ, ನಾಲ್ವರ ಬಂಧನ

By Girish GoudarFirst Published Jul 30, 2022, 11:58 AM IST
Highlights

ಮುಂಬೈ ಮೂಲದ ದಂಪತಿಯನ್ನು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಕರೆಯುಸಿ ದರೋಡೆ ಮಾಡಿದ್ದ ಆರೋಪಿಗಳು

ಉತ್ತರಕನ್ನಡ(ಜು.30): ಬೆಳೆಬಾಳುವ ಕಪ್ಪು ಅರಿಶಿನ ನೀಡುವುದಾಗಿ ಮುಂಬೈ ಮೂಲದ ದಂಪತಿಯನ್ನು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಕರೆಯುಸಿ ದರೋಡೆ ಮಾಡಿದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. 
ದಂಪತಿಯಿಂದ ಆಭರಣ, ಹಣ ಸೇರಿ ಬರೋಬ್ಬರಿ 14.30,000ರೂ. ಮೌಲ್ಯದ ಸೊತ್ತುಗಳನ್ನು ಆರೋಪಿಗಳು ದರೋಡೆ ಮಾಡಿದ್ದಾರೆ. ಬಂಧಿತರನ್ನು ಯಲ್ಲಾಪುರ ತಾಲೂಕಿನ ಶಿರನಾಳ ಗ್ರಾಮದ  ಮೂತೇಶ್ ಸಿದ್ದಿ(35), ಬಿಳಕಿ ಗ್ರಾಮದ ಹುಲಿಯಾ ಸಿದ್ದಿ(35), ಬಡಗಿನ ಕೊಪ್ಪದ ಪ್ರಕಾಶ ಸಿದ್ದಿ (22), ಬಡಗಿನ ಕೊಪ್ಪದ ಬಿಟ್ಟಗ್ರಾಮದ ಪಿಲೀಪ್ ಸಿದ್ದಿ(25) ಎಂದು ಗುರುತಿಸಲಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ ಬಜಾಜ್ ಪ್ಲಾಟಿನಾ ಮೋಟಾರ್ ಸೈಕಲ್ ಹಾಗೂ ದರೋಡೆ ಮಾಡಿದ ಮೋಬೈಲ್‌ ಜಪ್ತಿ ಮಾಡಿ, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕಳೆದ ತಿಂಗಳು 14ರಂದು ಮುಂಬೈ ಮೂಲದ ವಿದ್ಯಾಶ್ರೀ ಅಂಥೋನಿ ಹಾಗೂ ದಿವ್ಯಕುಮಾರ ಫ್ರಾನ್ಸಿಸ್ ದಂಪತಿಗೆ ಬೆಲೆಬಾಳುವ ಕಪ್ಪು ಅರಶಿನ ನೀಡುವುದಾಗಿ ಯಲ್ಲಾಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಸಿದ್ದಗುಂಡಿಗೆ ಕರೆಯಿಸಿಕೊಂಡಿದ್ದಾರೆ. ದರೋಡೆಕೋರರ ಮಾತನ್ನು ನಂಬಿ ಕಪ್ಪು ಅರಶಿನ ವ್ಯಾಪಾರ ಮಾಡಲು ಬಂದಿದ್ದ ಇವರ ಮೇಲೆ ಐದು ಜನರ ತಂಡ ದಾಳಿ ನಡೆಸಿ ವ್ಯಾಪಾರಕ್ಕೆ ತಂದಿದ್ದ ಹಣ, ಇವರ ಮೈಮೇಲಿದ್ದ ಚಿನ್ನಾಭರಣ, ಮೊಬೈಲ್ ಸೇರಿದಂತೆ ಒಟ್ಟು 14, 30,000ರೂ. ಬೆಲೆಯ ಸೊತ್ತನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ದಂಪತಿಗಳು ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದರು.

ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ

ದೂರಿನ ಹಿನ್ನೆಲೆ ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಠಾಣೆ ಪಿ.ಐ ಸುರೇಶ ಯಳ್ಳೂರ ಅವರ ನೇತೃತ್ವದಲ್ಲಿ  ತಂಡ ರಚಿಸಿದ್ದು , ಪಿ.ಎಸ್.ಐ ಅಮೀನಸಾಬ್ ಎಂ. ಅತ್ತಾರ, ಎ.ಎಸ್.ಐ ವಿಠಲ ಮಾಲವಾಡಕರ ಹಾಗೂ ಸಿಬ್ಬಂದಿ ಬಸವರಾಜ ಹಗರಿ, ಮಹ್ಮದ್ ಶಫೀ, ಗಜಾನನ, ಬಸವರಾಜ ಮಳಗನಕೊಪ್ಪ, ಚನ್ನಕೇಶವ, ಪರಶುರಾಮ ಕಾಳೆ, ಅಮರ, ಪರಶುರಾಮ ದೊಡ್ಡನಿ, ನಂದೀಶ, ಸುರೇಶ ಕಂಟ್ರಾಕ್ಟರ್, ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ, ಸೀಮಾ ಗೌಡ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

click me!