ವಿದೇಶಿಗರು 45 ಸಾವಿರ ಕೊಟ್ರೆ ಭಾರತೀಯ ನಕಲಿ ದಾಖಲೆ ಸೃಷ್ಟಿ: ಅಕ್ರಮ ನುಸುಳುಕೋರರಿಗೆ ರಹದಾರಿ

By Sathish Kumar KHFirst Published Feb 2, 2023, 5:33 PM IST
Highlights

ಅಂತಾರಾಷ್ಟ್ರೀಯ ನಕಲಿ ಪಾಸ್‌ಪೋರ್ಟ್‌ ಜಾಲ ಪತ್ತೆ
ವಿದೇಶಿಗರಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ಗೆ ನೆರವು
ನಕಲಿ ದಾಖಲೆ ಸೃಷ್ಠಿಸಿ ಅಸಲಿ ಪಾಸ್ ಪೋರ್ಟ್ ದಂಧೆ

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಫೆ.02): ರಾಜ್ಯದಲ್ಲಿ ನಕಲಿ ದಾಖಲೆ ಬಳಸಿ ಅಸಲಿ ಪಾಸ್ ಪೋರ್ಟ್ ತಯಾರಿಸುವ ಗ್ಯಾಂಗ್ ಬಿಡು ಬಿಟ್ಟಿದೆ. ಪಾಸ್ ಪೋರ್ಟ್ ಕಳ್ಳಾಟದ ಗ್ಯಾಂಗ್ ನ ಮತ್ತಷ್ಟು ಸ್ಪೋಟಕ ಸಂಗತಿಗಳು ಬಸವನಗುಡಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ಸಿಕ್ಕಿ ಬಿದಿದ್ದ ಗ್ಯಾಂಗ್ ಅಸಲಿ ಕಹಾನಿ ಕಂಡು ಪೊಲೀಸರೇ ಶಾಕ್ ಆಗಿದ್ದರು. ಸದ್ಯ 23 ಪಾಸ್ ಪೋರ್ಟ್ ಪತ್ತೆಯಾಗಿದ್ದು, ಈ ಸಂಬಂಧ ಹೆಣ್ಣೂರು, ಕೆ.ಜೆ.ಹಳ್ಳಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿವೆ. ನಕಲಿ ಪಾಸ್ ಪೋರ್ಟ್ ಪಡೆದವರಿಗೆ  ಸಂಕಷ್ಟ ಎದುರಾಗಿದೆ. ಸದ್ಯ ವಿದೇಶಕ್ಕೆ ಹೋಗಿರುವವರ ವಿವರ ಪಡೆದಿರುವ ಪೊಲೀಸರು ಅವರೆಲ್ಲರಿಗೂ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದಾರೆ.. ಬಸವನಗುಡಿ ಪೊಲೀಸರು ಇಂಡಿಯಾಗೆ ವಾಪಸ್ ಬಂದ್ರೆ ಅರೆಸ್ಟ್ ಮಾಡಲು ತಯಾರಿ ನಡೆಸಿದ್ದಾರೆ.

ನಕಲಿ ಪಾಸ್‌ ಪೋರ್ಟ್‌ ಮೂಲಕ ಶ್ರೀಲಂಕಾ ಪ್ರಜೆಗಳ ಎಂಟ್ರಿ: ಸ್ಫೋಟಕ ಸತ್ಯ ಬಯಲು

ಭಾರತೀಯ ಪಾಸ್ ಪೊರ್ಟ್ ನೀಡಿದ್ದ ಕಿಂಗ್ ಪಿನ್ ಲಾಕ್:  ಕಳೆದ ವರ್ಷ ನವೆಂಬರ್ ನಲ್ಲಿ ಬಸವನಗುಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅದೊಂದು ಜಾಲ ಪತ್ತೆಯಾಗಿತ್ತು. ಯಾವುದೇ ದಾಖಲೆ ಇಲ್ಲದ, ಅಪರಾಧ ಕೃತ್ಯದಲ್ಲಿ ತೊಡಗಿದವರಿಗೆ ನಕಲಿ ದಾಖಲೆ ಸೃಷ್ಟಿಸಿ ಅಸಲಿ ಪಾಸ್ ಪೊರ್ಟ್ ನೀಡುತಿದ್ದ ಜಾಲವದು. ಆ ಗ್ಯಾಂಗ್ ಹೆಡೆಮುರಿ ಕಟ್ಟಿದ ಖಾಕಿ ಪಾಸ್ ಪೊರ್ಟ್ ಕಚೇರಿಯ ಇಬ್ಬರು ಅಧಿಕಾರಿಗಳು ಸಹಿತ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆ ಬಳಿಕ ತನಿಖೆಯ ಆಳಕ್ಕೆ ಇಳಿದ ಪೊಲೀಸರಿಗೆ ಹೊಸ ಶಾಕ್ ನೀಡಿದ್ದು, ವಿದೇಶಿಗರಿಗೆ ನಕಲಿ ಸ್ಥಳೀಯ ದಾಖಲೆಗಳ ಮುಖಾಂತರ ಭಾರತೀಯ ಪಾಸ್ ಪೊರ್ಟ್ ನೀಡಿದ್ದ ಕಿಂಗ್ ಪಿನ್ ಲಾಕ್ ಆಗಿದ್ದಾನೆ.

ಕೇರಳ ಮೂಲದ ಶಿಬು ಮುಖ್ಯ ಆರೋಪಿ: ಈತನೇ ನೋಡಿ ಆ ವ್ಯಕ್ತಿ ಹೆಸರು ಶಿಬು. ಮೂಲತಃ ಕೆರಳದವನಾದ ಈತನ ಮುಖ್ಯ ಕಸುಬು ಶೆಫ್. ಕಳೆದ ಕೆಲ ವರ್ಷಗಳ ಹಿಂದೆ ಫ್ರಾನ್ಸ್ ನಲ್ಲಿ ಕೆಲಸ ಮಾಡುತಿದ್ದ ಈತನಿಗೆ ಶ್ರೀಲಂಕದ ಬ್ರೋಕರ್ ಪರಿಚಯವಾಗಿತ್ತು. ಬಳಿಕ ಆತನ ಮೂಲಕ ಕೆಲವರು ಶ್ರೀಲಂಕದಿಂದ ಅಕ್ರಮವಾಗಿ ಭಾರತಕ್ಕೆ ಬಂದವರಿಗೆ ಇಲ್ಲಿನ ಸ್ಥಳೀಯ ನಕಲಿ ದಾಖಲೆಗಳನ್ನು ತಯಾರಿಸಿ ವಿದೇಶಕ್ಕೆ ಕಳುಹಿಸಿರೋ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧರಿಸಿದ ಖಾಕಿ ಗುಜರಾತ್ ನಲ್ಲಿ ಶಿಬುವನ್ನು ಬಂಧಿಸಿ ಕರೆತಂದಿದೆ.

45 ಸಾವಿರ ರೂ.ಗೆ ಭಾರತೀಯ ನಕಲಿ ದಾಖಲೆ: ಇನ್ನು ಇದಷ್ಟೇ ಅಲ್ಲಾ, ಜಸ್ಟ್ 45 ಸಾವಿರ ರೂ.ಗೆ ಇವರೆ ನಕಲಿ ದಾಖಲೆ ಸೃಷ್ಟಿಸುವದರ ಜೊತೆಗೆ ಅದರಿಂದಲೇ ಓರಿಜಿನಲ್ ಪಾಸ್ ಪೊರ್ಟ್ ಕೊಡಿಸುತಿದ್ದ ದಂಧೆಯ ಮಾಸ್ಟರ್ ಮೈಂಡ್ ಓರ್ವನ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಆತ ದೂರದ ಫ್ರಾನ್ಸ್ ನಲ್ಲಿದ್ದಾನೆ. ಆತ ಪ್ರತಿವರ್ಷ ಶಬರಿ ಮಲೆಗೆ ಜನವರಿ 14ರಂದು ಬರುವ ಮಾಹಿತಿ ಇತ್ತು. ಇದೇ ಮಾಹಿತಿ ಆಧರಿಸಿ ಒಂದು ತಂಡ ಜನವರಿ 14ರಂದು ಶಬರಿ ಮಲೈನಲ್ಲಿ ಬೀಡು ಬಿಟ್ಟಿತ್ತು. ಆದರೆ ಈ ಬಾರಿ ನಿಗದಿತ ದಿನಾಂಕದಂದು ಆತ ಬಾರದ ಕಾರಣ ಪೊಲೀಸರ ಆಪರೇಶನ್‌ ಫೇಲ್ ಆಗಿತ್ತು.

CBSE ಶಾಲೆ ಕುರಿತು ಸುಳ್ಳು ಆರೋಪ: ನನ್ನ ಬಂಧನವಾಗಿಲ್ಲ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸ್ಪಷ್ಟನೆ

ಬಂಧಿತರ ಸಂಖ್ಯೆ 18ಕ್ಕೆ ಏರಿಕೆ:  ಮೊದಲಿಗೆ ನಕಲಿ ದಾಖಲೆಗಳ ಬೆನ್ನು ಬಿದ್ದ ಖಾಕಿಗೆ ಬಳಿಕ ಅದೇ ನಕಲಿ ದಾಖಲೆ ನೀಡಿ ಅಸಲಿ ಪಾಸ್ ಪೊರ್ಟ್ ನೀಡುತಿದ್ದ ಸಂಗತಿ ಬಯಲಾಗಿತ್ತು. ಈಗ ತನಿಖೆಯ ಆಳಕ್ಕೆ ಇಳಿದ ಖಾಕಿಗೆ ವಿದೇಶಿಗರಿಗೆ ನಮ್ಮ ದೇಶದ ಪಾಸ್ ಪೊರ್ಟ್ ನೀಡಿರೋ ಸಂಗತಿಗಳು ಬಯಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಲಂಕಾದ ಐವರನ್ನು ಸಹ ಬಂಧಿಸಲಾಗಿದೆ. ಸದ್ಯ ಬಂಧಿತರ ಸಂಖ್ಯೆ 18 ಕ್ಕೇರಿದೆ. ಇನ್ನು ಹೆಚ್ಚಾಗಲಿದೆ. ಆದರೆ ಈ ದಂಧೆಯಲ್ಲಿರುವ ಕಾಣದ ಮತ್ತಷ್ಟು ಮಂದಿ ಇದ್ದು, ಶೀಘ್ರದಲ್ಲಿ ಬಂಧನವಾಗೋ ಸಾಧ್ಯತೆ ಇದೆ. ಬಸವನಗುಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

click me!