ಬೆಂಗಳೂರಿನಲ್ಲಿ ನಡೆಯುತ್ತಿದೆ ವಿದೇಶಿ ಹುಡುಗಿಯರ ವೇಶ್ಯಾವಾಟಿಕೆ ದಂಧೆ!

By Sathish Kumar KH  |  First Published Jan 9, 2024, 2:00 PM IST

ಬೆಂಗಳೂರಿನಲ್ಲಿ ಐಟಿ ಕಂನಿಗಳು ಕೇಂದ್ರೀಕೃತವಾಗಿರುವ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ವಿದೇಶಿ ಯುವತಿಯರಿಂದ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ.


ಬೆಂಗಳೂರು (ಜ.09): ಸಿಲಿಕಾನ್‌ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಂತೆಲ್ಲಾ ಜಾಗತಿಕ ಮಟ್ಟದ ಸಮಸ್ಯೆ ಹಾಗೂ ಅಪರಾಧಗಳು ಇಲ್ಲಿ ಕಂಡುಬರುತ್ತಿವೆ. ನಮ್ಮ ದೇಶದಲ್ಇ ವೇಶ್ಯಾವಾಟಿಕೆ ಅಕ್ರಮ ನಡೆಸುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಯುವತಿಯರನ್ನು ಬೆಂಗಳೂರಿಗೆ ಕರೆಸಿ ವೇಶ್ಯಾವಾಟಿಕೆ ದಂಧೆಗೆ ಬಳಕೆ ಮಾಡಲಾಗುತ್ತಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ಗಳಲ್ಲಿ ಅಕ್ರಮವಾಗಿ ವಿದೇಶಿ ಯುವತಿಯರ ವೇಶ್ಯಾವಾಟಿಕೆ ದಂದಧೆಯನ್ನು ನಡೆಸಲಾಗುತ್ತಿದೆ. ಇನ್ನು ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದು ಸ್ವತಃ ಹೋಟೆಲ್ ಮಾಲೀಕರಿಗೂ ತಿಳಿಯುತ್ತಿರಲಿಲ್ಲ. ಅಷ್ಟೊಂದು ಲೀಲಾಜಾಲವಾಗಿ ಹಾಗೂ ಯೋಜನಾಬದ್ಧವಾಗಿ ವಿದೇಶಿ ಹುಡುಗಿಯರಿಂದ ವೇಶ್ಯಾವಾಟಿಕೆ ದಂಧೆ ಹಲವು ವರ್ಷಗಳಿಂದಲೂ ನಡೆಯುತ್ತಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯನ್ನು ತಿಳಿದುಕೊಂಡ ಬೆಂಗಳೂರು ನಗರ ಪೊಲೀಸರು ವಿದೇಶಿ ಮಹಿಳೆ, ಯುವತಿಯರು ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸಲು ಸಹಕಾರ ನೀಡುತ್ತಿದ್ದ ಸ್ಥಳೀಯ ವ್ಯಕ್ತಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

Tap to resize

Latest Videos

ಬೆಂಗಳೂರಿನ ಜನರೇ ಹುಷಾರ್, ಕಿಲ್ಲರ್ ಬಿಎಂಟಿಸಿ ನಿಮ್ಮ ಪ್ರಾಣವನ್ನೂ ಹೊತ್ತೊಯ್ಯಬಹುದು!

ಹಲಸೂರು ಹಾಗೂ ಬೈಯಪ್ಪನಹಳ್ಳಿ ಪೊಲೀಸರಿಂದ ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಖಾಸಗಿ ಹೋಟೆಲ್‌ಗಳಲ್ಲಿ ವಿದೇಶಿ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ಮಾಡಲಾಗುತ್ತಿದೆ. ಮೂವರು ವಿದೇಶಿ ಮೂಲದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ವಿದೇಶಗಳಿಂದ ವೇಶ್ಯಾವಾಟಿಕೆಗೆ ಕರೆತಂದಿದ್ದ 5 ಮಂದಿ ವಿದೇಶಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಇನ್ನು ರಕ್ಷಣೆ ಮಾಡಿದ ಯುವತಿಯರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (Foreigners Regional Registration Office-FRRO) ಅಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿದೆ.

ಬೆಂಗಳೂರು ಮಾತ್ರವಲ್ಲದೇ ಜೈಪುರ, ಚೆನ್ನೈ, ಮೈಸೂರು, ದೆಹಲಿ, ಉದಯ್ ಪುರ, ಮುಂಬೈ ಮುಂತಾದ ಕಡೆಗಳಲ್ಲಿ ಏಜೆಂಟ್‌ಗಳನ್ನು ಇಟ್ಟುಕೊಂಡು ವಿದೇಶಿ ಯುವತಿಯರಿಂದ ವೇಶ್ಯಾವಾಟಿಕೆ ದಂಧೆ ಮಾಡಲಾಗುತ್ತಿದೆ. ಇನ್ನು ಏಜೆಂಟ್ ಗಳ ಮೂಲಕ ವಿದೇಶಿ ಮಹಿಳೆಯರಿಗೆ ಗಾಳ ಹಾಕ್ತಾ ಇದ್ದರು. ಹೆಚ್ಚಿನ ಹಣದ ಆಮೀಷವನ್ನು ತೋರಿಸಿ ದಂಧೆಗೆ ಕರೆಸಿಕೊಳ್ತಾ ಇದ್ದರು. ಅವರನ್ನು ಮೊದಲು ತಾವು ಉಪಯೋಗಿಸಿಕೊಂಡು ನಂತರ ವೇಶ್ಯಾವಾಟಿಕೆ ದಂಧೆಯಲ್ಲಿ ಗ್ರಾಹಕರೊಂದಿಗೆ ಸಹಕರಿಸಲು ಕಳುಹಿಸುತ್ತಿದ್ದರು.

ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

ಆನ್‌ಲೈನ್‌ ಮೂಲಕವೇಗ್ರಾಹಕರಿಗೆ ಗಾಳ: ಇನ್ನು ವಿದೇಶಿ ಯುವತಿಯರನ್ನು ಇಲ್ಲಿಗೆ ಕರೆಸಿದ ನಂತರ ಅವರಿಗೆ ಗ್ರಾಹಕರನ್ನು ಕಳುಹಿಸುವುದು ಕೂಡ ಮುಖ್ಯವಾಗಿದೆ. ಆದರೆ, ಈ ದಂಧೆ ಅಕ್ರಮದ ಹಾದಿಯಲ್ಲಿಯೇ ನಡೆಯುತ್ತಿದ್ದರಿಂದ ಪೊಲೀಸರ ಕಣ್ತಪ್ಪಿಸಿ ಇಂತಹ ವೆಬ್‌ಸೈಟ್‌ಗಳನ್ನು ಹುಡುಕಾಡುವವರಿಗೆ ಲಭ್ಯವಾಗುವಂತೆ ವಿದೇಶಿ ಹುಡುಗಿಯರ ಸಂಪರ್ಕದ ಲಿಂಕ್‌ ಕಳಿಸಿ ಕಸ್ಟಮರ್‌ಗಳನ್ನು ಹುಡುಕುತ್ತಿದ್ದರು. ಆನ್‌ಲೈನ್‌ ಟೆಲಿಗ್ರಾಂ ಹಾಗೂ ವಾಟ್ಸಪ್ ಮೂಲಕ ಆನ್ ಲೈನ್ ನಲ್ಲಿ ಕಸ್ಟಮರ್ ಗಳ ಸೆಳೆಯುತ್ತಿದ್ದರು. ನಂತರ, ಖಾಸಗಿ ಹೋಟೆಲ್‌ಗಳನ್ನು ಬುಕ್‌ ಮಾಡಿ ಅಲ್ಲಿ ದಂಧೆಯನ್ನು ನಡೆಸುತ್ತಿದ್ದರು. ಇನ್ನು ವಿದೇಶದಿಂದ ಬಂದು ಇಲ್ಲಿ ದಂಧೆ ಮಾಡುತ್ತಿದ್ದ ಮೂವರು ವಿದೇಶಿ ಮಹಿಳೆಯರನ್ನು ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.

click me!