ನೆಲೋಗಿಯಲ್ಲಿ ಇಬ್ಬರು, ಸೊನ್ನದಲ್ಲಿ ಮೂರು ಜನ, ನೇದಲಗಿಯಲ್ಲಿ ಇಬ್ಬರು, ಜೇರಟಗಿಯಲ್ಲಿ ಇಬ್ಬರು ಸೇರಿದಂತೆ 8ಜನ ನಕಲಿ ವೈದ್ಯರ ಆಸ್ಪತ್ರೆಗಳನ್ನು ಮುಚ್ಚಿಸಿ ಓರ್ವನನ್ನು ಬಂಧಿಸಲಾಗಿದ್ದು, 7 ಜನ ನಕಲಿ ವೈದ್ಯರು ಪರಾರಿಯಾಗಿದ್ದಾರೆ.ಸೆರೆ ಸಿಕ್ಕ ಒಬ್ಬ ವೈದ್ಯನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಜೇವರ್ಗಿ(ಡಿ.09): ನಕಲಿ ವೈದ್ಯರ ಹಾವಳಿ ಅಧಿಕವಾಗಿದೆ. ಎನ್ನುವ ದೂರುಗಳ ಆದಾರದ ಮೇಲೆ ತಾಲ್ಲೂಕು ತಹಶೀಲ್ದಾರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿ ಒರ್ವ ನಕಲಿ ವೈದ್ಯನನ್ನು ಬಂಧಿಸಿ ೮ ನಕಲಿ ಆಸ್ಪತ್ರೆಗಳನ್ನು ಬಂಧ ಮಾಡಿಸಿದ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ನೆಲೋಗಿಯಲ್ಲಿ ಇಬ್ಬರು, ಸೊನ್ನದಲ್ಲಿ ಮೂರು ಜನ, ನೇದಲಗಿಯಲ್ಲಿ ಇಬ್ಬರು, ಜೇರಟಗಿಯಲ್ಲಿ ಇಬ್ಬರು ಸೇರಿದಂತೆ 8ಜನ ನಕಲಿ ವೈದ್ಯರ ಆಸ್ಪತ್ರೆಗಳನ್ನು ಮುಚ್ಚಿಸಿ ಓರ್ವನನ್ನು ಬಂಧಿಸಲಾಗಿದ್ದು, 7 ಜನ ನಕಲಿ ವೈದ್ಯರು ಪರಾರಿಯಾಗಿದ್ದಾರೆ.ಸೆರೆ ಸಿಕ್ಕ ಒಬ್ಬ ವೈದ್ಯನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿರುವ ನಕಲಿ ವೈದ್ಯರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ತಿಳಿಸಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಿದ್ದ ಇನ್ಸ್‌ಪೆಕ್ಟರ್ ಮಹಮದ್ ರಫೀಕ್‌ಗೆ ಕಡ್ಡಾಯ ರಜೆ ಶಿಕ್ಷೆ!
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಜೇವರ್ಗಿ ಸಿ.ಪಿಐ ರಾಜೇಸಾಹೇಬ್ ನದಾಫ್, ನೆಲೋಗಿ ಪಿ.ಎಸ್.ಐ. ಅಶೋಕ ಪಾಟೀಲ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಕಲಿ ವೈದ್ಯರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.