ಚಿಕ್ಕಮಗಳೂರು: ಯೋಗ ಕಲಿಯಲು ಬಂದ ವಿದೇಶಿ ವೈದ್ಯೆಯ ಮೇಲೆ ಯೋಗಗುರು ಅತ್ಯಾಚಾರ!

By Gowthami K  |  First Published Sep 2, 2024, 5:23 PM IST

ಚಿಕ್ಕಮಗಳೂರಿನ ಯೋಗ ಆಶ್ರಮವೊಂದರಲ್ಲಿ ವಿದೇಶಿ ವೈದ್ಯೆಯೊಬ್ಬರ ಮೇಲೆ ಯೋಗ ಗುರುವೊಬ್ಬರು ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ವಿದೇಶಿ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಯೋಗ ಗುರುವನ್ನು ಬಂಧಿಸಲಾಗಿದೆ. ವಿದೇಶಿ ಮಹಿಳೆಯಿಂದ 20 ಲಕ್ಷ ರೂಪಾಯಿಗಳನ್ನು ಪಡೆದಿರುವ ಆರೋಪವೂ ಆರೋಪಿಯ ಮೇಲಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಸೆ.2): ಯೋಗ ಕಲಿಯಲು ಬಂದ ವೈದ್ಯೆಯ ಮೇಲೆ ಯೋಗ ಗುರುವೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ  ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ  ಯೋಗ ಆಶ್ರಮದಲ್ಲಿ ಈ ಕೃತ್ಯ ನಡೆದಿದೆ.  ಯೋಗಗುರುವಿನಿಂದ ಅತ್ಯಾಚಾರಕ್ಕೊಳಪಟ್ಟ ವಿದೇಶಿ ವೈದ್ಯೆಯ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

Tap to resize

Latest Videos

undefined

ಬಂಧಿತ ಆರೋಪಿಯನ್ನು ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ ಪ್ರದೀಪ್ ಉಲ್ಲಾಳ್ (53)  ಎಂದು ಗುರುತಿಸಲಾಗಿದೆ.  ಯೋಗ ತರಬೇತಿಗೆಂದು ಕ್ಯಾಲಿಫೋರ್ನಿಯಾದಿಂದ  ಮಹಿಳೆ ಬಂದಿದ್ದಳು. 4 ವರ್ಷದಿಂದಲೂ ಯೋಗ ಗುರುವಿನ ಆಶ್ರಮದಲ್ಲಿದ್ದು,  ಆತ್ಮೀಯವಾಗಿದ್ದರು. ಬೇರೆ ಮಹಿಳೆಯರ ಜೊತೆಯೂ ಗುರುವಿನ ಸಂಬಂಧ ತಿಳಿದು ವೈದ್ಯೆ ಗಲಾಟೆ ಮಾಡಿದ್ದಾಳೆ.

ಮಕ್ಕಳಾಗದ್ದಕ್ಕೆ ರೈಲಿನಲ್ಲಿ ಮಗು ಕದ್ದು ಕೇಶ ಮುಂಡನ ಮಾಡಿಸಿ ಪರಾರಿ: ರಾಯಚೂರಿನಲ್ಲಿ ಬೆಚ್ಚಿ ಬೀಳಿಸಿದ ಅಪಹರಣ!

ವಿದೇಶಿ ಮಹಿಳೆಯಿಂದ ಯೋಗ ಗುರು 20 ಲಕ್ಷ ಹಣ ಕಿತ್ತಿದ್ದ ಆರೋಪವಿದೆ. ಇದೇ ವಿಚಾರವಾಗಿ ಯೋಗ ಗುರು-ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿದೆ. ಹೀಗಾಗಿ ವಿದೇಶಿ ವೈದ್ಯೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಹಿಳೆಯ ದೂರಿನ ಹಿನ್ನೆಲೆ ಯೋಗ ಗುರುವನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

ಜೋಗ ಜಲಪಾತ ವೀಕ್ಷಣೆ ಮತ್ತಷ್ಟು ದುಬಾರಿ, ಪ್ರವಾಸಿಗರಿಂದ ಆಕ್ರೋಶ

ಇನ್ನು ಗೂಗಲ್‌ ರಿವ್ಯೂನಲ್ಲಿ ಕೂಡ ಈ ಯೋಗ ಶಾಲೆ ಸುರಕ್ಷಿತವಲ್ಲ ಎಂದು ಮಹಿಳೆಯೊಬ್ಬರು ಬರೆದಿದ್ದಾರೆ. ಪ್ರದೀಪ್ ಉಲ್ಲಾಳ್ ಯೋಗ ಶಾಲೆಗೆ ಹ;ವಾರು ವಿದೇಶಿಗರು ಬಂದು ಯೋಗ ಕಲಿತು ಹೋಗಿದ್ದಾರೆ. ಮತ್ತು ವಿದೇಶದಿಂದ ಹೆಚ್ಚು ಮಂದಿ ಯೋಗ ಕಲಿಯಲು ಬರುತ್ತಾರೆ.

ಯೋಗ ಗುರು ವಿರುದ್ದ ಕೇಸ್ : ಪಂಜಾಬ್ ಮೂಲದ ವೈದ್ಯರೊಬ್ಬರು ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುವ ವೇಳೆ ಕೇವಲ ಯೋಗ ಕೇಂದ್ರದ ಬಗ್ಗೆ ಮಾಹಿತಿ ಪಡೆದು, ಸ್ವಲ್ಪ ಹಣ ನೀಡಿ ಆನ್‍ಲೈನ್ ಮೂಲಕ ಯೋಗಾಭ್ಯಾಸಕ್ಕೆ ಸೇರಿಕೊಂಡಿದ್ದರು. ನಂತರ ಪ್ರದೀಪ್ ಉಲ್ಲಾಳ್ ಇಲ್ಲಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದರಂತೆ. ಆಗ ಆ ಮಹಿಳೆ ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಕೇವಲ ಯೋಗಕೇಂದ್ರಕ್ಕೆ ಭೇಟಿ ನೀಡಿದ್ದರು. 2020ರಿಂದಲೂ ಇಲ್ಲಿಗೆ ಬಂದು ಹೋಗುತ್ತಿದ್ದರು. ಪ್ರತಿ ಸಲ ಬಂದಾಗಲೂ 15-20 ದಿನ ಯೋಗ ಕ್ಲಾಸ್‍ನಲ್ಲಿ ಪಾಲ್ಗೊಂಡು ಹೋಗುತ್ತಿದ್ದರು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದ್ದು ಯೋಗ ಗುರು ಪ್ರದೀಪ್ ಆಕೆಯನ್ನ ಲೈಂಗಿಕವಾಗಿಯೂ ಬಳಸಿಕೊಂಡಿದ್ದನಂತೆ. ಜೊತೆಗೆ ಆಕೆಯಿಂದ ಸಾಕಷ್ಟು ಹಣವನ್ನ ಪಡೆದುಕೊಂಡ ಆರೋಪವೂ ಪ್ರದೀಪ್ ಮೇಲಿದೆ.

ನಂಬಿಕೆ‌ ಮೋಸ‌ : ಈ ಮಧ್ಯೆ ಪ್ರದೀಪ್ ಬೇರೆ ಮಹಿಳೆಯರ ಜೊತೆಯೂ ಇದೇ ರೀತಿ ಲೈಂಗಿಕ ಸಂಪರ್ಕ ಇರೋದು ಕ್ಯಾಲಿಫೋರ್ನಿಯಾದ ಮಹಿಳೆಗೆ ತಿಳಿದು ಆತನೊಂದಿಗೆ ಜಗಳವಾಡುತ್ತಾಳೆ. ಇದೇ ವಿಷಯವಾಗಿ ಹಲವು ಬಾರಿ ಜಗಳವಾಗಿತ್ತು. ಇದೀಗ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿರುವ ಮಹಿಳೆ ಆತ ನನ್ನನ್ನ ಬಳಸಿಕೊಂಡು ನನ್ನ ನಂಬಿಕೆಗೆ ಮೋಸ ಮಾಡಿದ್ದಾನೆ. ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಕ್ಯಾಲಿಫೋರ್ನಿಯಾ ಮಹಿಳೆಯ ದೂರಿನನ್ವಯ ಗ್ರಾಮಾಂತರ ಪೊಲೀಸರು ಆತನನ್ನ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ‌. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!