ಬೆಂಗಳೂರು: ಐವರು ಶಂಕಿತ ಉಗ್ರರು 10 ದಿನ ಮತ್ತೆ ಸಿಸಿಬಿ ವಶಕ್ಕೆ

By Kannadaprabha NewsFirst Published Jul 27, 2023, 11:07 AM IST
Highlights

ಪ್ರಕರಣ ಸಂಬಂಧ ವಿಚಾರಣೆ ಸಲುವಾಗಿ ಜೈಲಿನಲ್ಲಿರುವ 2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ನಸೀರ್‌ನನ್ನು ವಶಕ್ಕೆ ಪಡೆಯಲು ಬಾಡಿ ವಾರೆಂಟ್‌ ಕೋರಿ ನ್ಯಾಯಾಲಯಕ್ಕೆ ಸಿಸಿಬಿ ಮನವಿ ಮಾಡಿತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ನಸೀರ್‌ನನ್ನು ಹಾಜರುಪಡಿಸಲು ಸೂಚಿಸಿತು.

ಬೆಂಗಳೂರು(ಜು.27):  ಇತ್ತೀಚಿಗೆ ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್‌-ಇ-ತೋಯ್ಬಾ ಭಯೋತ್ಪಾದಕ ಸಂಘಟನೆ ಐವರು ಶಂಕಿತ ಉಗ್ರರಿಗೆ ಮತ್ತೆ 10 ದಿನಗಳು ಪೊಲೀಸ್‌ ಕಸ್ಟಡಿಗೆ ವಹಿಸಿ ಎನ್‌ಎಐ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ.

ಜು.19 ರಂದು ಹೆಬ್ಬಾಳ ಸಮೀಪದ ಸುಲ್ತಾನ್‌ ಪಾಳ್ಯದ ಸೈಯದ್‌ ಸುಹೇಲ್‌ಖಾನ್‌ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಸುಹೇಲ್‌, ಪುಲಿಕೇಶಿ ನಗರದ ಮೊಹಮದ್‌ ಫೈಜಲ್‌ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್‌ ಉಮರ್‌, ಜಾಹೀದ್‌ ತಬ್ರೇಜ್‌ ಹಾಗೂ ಆರ್‌.ಟಿ.ನಗರದ ಸೈಯದ್‌ ಮುದಾಸೀರ್‌ ಪಾಷ ಬಂಧಿಸಿದ ಸಿಸಿಬಿ ಪೊಲೀಸರು, ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಆರೋಪಿಗಳು ಸಜ್ಜಾಗಿ ಆತಂಕಕಾರಿ ಸಂಗತಿ ಬಯಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 7 ದಿನಗಳು ಪೊಲೀಸ್‌ ಕಸ್ಟಡಿಗೆ ಸಿಸಿಬಿ ಅಧಿಕಾರಿಗಳು ಪಡೆದಿದ್ದರು.

ಬೆಂಗಳೂರು: ಶಂಕಿತ ಉಗ್ರರ ಬಂಧನ ಬೆನ್ನಲ್ಲೇ ಪರಪ್ಪನ ಜೈಲಲ್ಲಿ ದಿಢೀರ್‌ ರೇಡ್‌

ಇಂದು ವಿಚಾರಣೆಗೆ ನಸೀರ್‌ ಹಾಜರು

ಈ ಪ್ರಕರಣ ಸಂಬಂಧ ವಿಚಾರಣೆ ಸಲುವಾಗಿ ಜೈಲಿನಲ್ಲಿರುವ 2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ನಸೀರ್‌ನನ್ನು ವಶಕ್ಕೆ ಪಡೆಯಲು ಬಾಡಿ ವಾರೆಂಟ್‌ ಕೋರಿ ನ್ಯಾಯಾಲಯಕ್ಕೆ ಸಿಸಿಬಿ ಮನವಿ ಮಾಡಿತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ನಸೀರ್‌ನನ್ನು ಹಾಜರುಪಡಿಸಲು ಸೂಚಿಸಿತು.

click me!