ಹೊಸಪೇಟೆಯ ವೃದ್ಧೆ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

By Kannadaprabha NewsFirst Published Oct 31, 2021, 11:40 AM IST
Highlights

*  ತನಿಖಾ ತಂಡಕ್ಕೆ ಬಹುಮಾನ ಘೋಷಣೆ
*  ಎಂಟು ದಿನಗಳ ಅಂತರದಲ್ಲೇ ಪ್ರಕರಣ ಭೇದಿಸಿದ ಪೊಲೀಸರು
*  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್‌ ಇಲಾಖೆ 
 

ಹೊಸಪೇಟೆ(ಅ.31):  ನಗರದ ರಾಣಿಪೇಟೆಯಲ್ಲಿ ಬಟ್ಟೆ ಖರೀದಿಸುವ ನೆಪದಲ್ಲಿ ವೃದ್ಧೆ ಕೊಲೆ(Murder) ಮಾಡಿ ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ವಿಜಯನಗರ(Vijayanagara) ಜಿಲ್ಲೆ ಪೊಲೀಸರು ಕ್ಷಿಪ್ರ ತನಿಖೆ ಮಾಡಿ ಎಂಟು ದಿನಗಳ ಅಂತರದಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ರಾಣಿಪೇಟೆಯಲ್ಲೇ ಕೊಲೆ, ದರೋಡೆ ನಡೆದಿದ್ದರಿಂದ ಈ ಪ್ರಕರಣ ಜಿಲ್ಲಾದ್ಯಂತ ತಲ್ಲಣವನ್ನುಂಟು ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌(Police) ಇಲಾಖೆ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ(Case) ಹಿನ್ನೆಲೆಯನ್ನು ಭೇದಿಸುವ ಕಾರ್ಯ ಮಾಡುತ್ತಿದ್ದಾರೆ.

ನಗರದ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ಎಸ್ಪಿ ಅರುಣ್‌ ಕೆ.(Arun K) ಪ್ರಕರಣದ ತನಿಖೆಗಾಗಿ(Investigation) ಮೂರು ತಂಡ ರಚಿಸಲಾಗಿತ್ತು. ಹಗಲಿರುಳು ಶ್ರಮವಹಿಸಿ ಪೊಲೀಸರು ಆರೋಪಿಗಳನ್ನು(Accused) ಬಂಧಿಸಿದ್ದಾರೆ(Arrest)ಎಂದು ಮಾಹಿತಿ ನೀಡಿದರು.

ಗದಗ: ಡಬಲ್‌ ಮರ್ಡರ್‌ ಕೇಸ್‌, ಇಬ್ಬರು ಆರೋಪಿಗಳ ಬಂಧನ

ಐವರ ಬಂಧನ:

ಹಾವೇರಿ(Haveri) ಜಿಲ್ಲೆಯ ಹಾನಗಲ್‌ನ ತೈಬುಜುಲ್ಲಾ ಮನ್ನಣ್ಣನವರ (25), ದಾವಣಗೆರೆಯ(Davanagere) ಎ.ಎಸ್‌. ನಾಗರಾಜ (26), ಕೆ. ಬಿರೇಶ್‌ (24) ಮತ್ತು ಹರಿಹರದ ಗೀತಾ (38) ಮತ್ತು ಭದ್ರಾವತಿಯ ಪ್ರಮೀಳಾ ಜಿ.ಎಲ್‌. (33) ಬಂಧಿತ ಆರೋಪಿಗಳು.

ಘಟನೆ ವಿವರ:

ನಗರದ ರಾಣಿಪೇಟೆಯಲ್ಲಿ ಭುವನೇಶ್ವರಿ ಮತ್ತು ಶಿವಭೂಷಣಮ್ಮ ಅವರು ಮನೆಯಲ್ಲೇ ಹಲವು ವರ್ಷಗಳಿಂದ ಬಟ್ಟೆವ್ಯಾಪಾರ ಮಾಡುತ್ತಿದ್ದರು. ಅ. 22ರ ಸಂಜೆ 5ರಿಂದ 6 ಗಂಟೆ ಸುಮಾರಿಗೆ ಬಟ್ಟೆ ಖರೀದಿಸುವ ನೆಪದಲ್ಲಿ ಬಂದ ಆರೋಪಿಗಳು ಕೈ ಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಭುವನೇಶ್ವರಿ (68) ಅವರನ್ನು ಕೊಲೆ ಮಾಡಿದ್ದರು. ಜತೆಗಿದ್ದ ಅವರ ಸಹೋದರಿ ಶಿವಭೂಷಣಮ್ಮ ಅವರ ಕೈಕಾಲು ಕೂಡ ಕಟ್ಟಿಹಾಕಿದ್ದರು. ದರೋಡೆಕೋರರು(Gangsters) 3 ಲಕ್ಷ ನಗದು ಮತ್ತು 3.30 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು.

ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು. ಪಟ್ಟಣ ಠಾಣೆ ಪಿಐ ಶ್ರೀನಿವಾಸರಾವ್‌, ಚಿತ್ತವಾಡ್ಗಿ ಪಿಐ ಜಯಪ್ರಕಾಶ ಮತ್ತು ಗ್ರಾಮೀಣ ಠಾಣೆಯ ಸಿಬ್ಬಂದಿ ರಾಘವೇಂದ್ರ, ಕೊಟ್ರೇಶ್‌, ಪಟ್ಟಣ ಠಾಣೆಯ ತಿಮ್ಮಪ್ಪ, ಅಡಿವೆಪ್ಪ, ಗಾಳೆಪ್ಪ, ಲಿಂಗರಾಜ, ಎಚ್‌.ಸಿ. ನಾಗರಾಜ, ಮಂಜುನಾಥ, ಶ್ರೀರಾಮರೆಡ್ಡಿ, ನಾಗರಾಜ, ಶ್ರೀನಿವಾಸ್‌, ಮರಿಯಮ್ಮನಹಳ್ಳಿ ಠಾಣೆಯ ಶ್ರೀನಿವಾಸ್‌ ಅವರನ್ನೊಳಗೊಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾ ತಂಡಕ್ಕೆ ಡಿಜಿ ಮತ್ತು ಐಜಿಪಿ ಪ್ರವೀಣ್‌ ಸೂದ್‌ ಅವರು ಒಂದು ಲಕ್ಷ ರು. ಬಹುಮಾನ(Prize) ಘೋಷಿಸಿದ್ದಾರೆ.
 

click me!