Bengaluru Crime: ಸ್ಪಾ ಓನರ್‌ಗೆ ಬೆದರಿಸಿ ಹಣ ಸುಲಿದ ಗೃಹರಕ್ಷಕರು, ಪತ್ರಕರ್ತ ಸೆರೆ

Kannadaprabha News   | Asianet News
Published : Mar 03, 2022, 04:30 AM IST
Bengaluru Crime: ಸ್ಪಾ ಓನರ್‌ಗೆ ಬೆದರಿಸಿ ಹಣ ಸುಲಿದ ಗೃಹರಕ್ಷಕರು, ಪತ್ರಕರ್ತ ಸೆರೆ

ಸಾರಾಂಶ

*   ಕೆ.ಜಿ.ಹಳ್ಳಿ ಎಸಿಪಿ ಕಚೇರಿಯ ಗೃಹ ರಕ್ಷಕ ಸಂಪಂಗಿರಾಮ್‌ ಮಾಸ್ಟರ್‌ ಮೈಂಡ್‌ *   ಪತ್ರಿಕೆ ವರದಿಗಾರ ಸಾಥ್‌ *   ಅನೈತಿಕ ಚುಟುವಟಿಕೆ ಎಂದು ಬೆದರಿಕೆ  

ಬೆಂಗಳೂರು(ಮಾ.03):  ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಪ್ರಕರಣ ದಾಖಲಿಸುವುದಾಗಿ ಪೊಲೀಸರ(Police) ಸೋಗಿನಲ್ಲಿ ‘ಸ್ಪಾ’ ಮಾಲಿಕರೊಬ್ಬರಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಪತ್ರಕರ್ತ(Journalist) ಹಾಗೂ ನಾಲ್ವರು ಗೃಹ ರಕ್ಷಕ ಸಿಬ್ಬಂದಿಯನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರದ ಕಾವಲ್‌ಭೈರಸಂದ್ರದ ಸೈಯದ್‌ ಖಲೀಂ, ಗೃಹ ರಕ್ಷಕ ಸಿಬ್ಬಂದಿ ಡಿ.ಜೆ.ಹಳ್ಳಿಯ ಸಂಪಂಗಿರಾಮ್‌, ಆಸೀಫ್‌, ಲಿಂಗರಾಜಪುರದ ಆನಂದರಾಜ್‌ ಹಾಗೂ ವಿನಾಯಕ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ಹಣ ಜಪ್ತಿ ಮಾಡಲಾಗಿದೆ.

ರಾಮಮೂರ್ತಿ ನಗರ ಸಮೀಪದ ಜಯಂತಿ ನಗರದ ಮುಖ್ಯರಸ್ತೆಯ ‘ಆಲಯ್ಯಾ ಸೆಲೂನ್‌ ಆ್ಯಂಡ್‌ ಸ್ಪಾ’ ಒಡತಿ ಪ್ರಭಾ ಅವರಿಗೆ ಬೆದರಿಸಿ 1.60 ಲಕ್ಷ ಸುಲಿಗೆ ಮಾಡಿದ್ದರು. ಈ ಬಗ್ಗೆ ಪ್ರಭಾ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Dowry Harassment: ಗರ್ಭಿಣಿ ಪತ್ನಿಯನ್ನು ಸಿಗರೇಟ್‌ನಿಂದ ಸುಡ್ತಿದ್ದ ಕುಂದಾಪುರದ ಗಂಡ

ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಕಚೇರಿಯಲ್ಲಿ ಗೃಹ ರಕ್ಷಕ ಸಂಪಂಗಿರಾಮ್‌, ಹೆಣ್ಣೂರು ಠಾಣೆಯಲ್ಲಿ ಆಸೀಫ್‌ ಹಾಗೂ ಆನಂದ್‌ ರಾಜ್‌ ಮತ್ತು ವಿನಾಯಕ್‌ ಅವರು ಹಲಸೂರು ಸಮೀಪದ ಗೃಹ ರಕ್ಷಕ ದಳ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ದಿನಗಳಿಂದ ಸಂಪಂಗಿರಾಮ್‌ಗೆ ‘ಕಸ್ಟಮ್ಸ್‌ ಮತ್ತು ಎಕ್ಸೈಸ್‌ ವಾಯ್ಸ್‌’ ಎಂಬ ಹೆಸರಿನ ಪತ್ರಿಕೆ ವರದಿಗಾರ ಖಲೀಂ ಪರಿಚಯ ಇದ್ದ. ಹಣದಾಸೆಗೆ ಮಸಾಲ್‌ ಪಾರ್ಲರ್‌ಗೆ ಪೊಲೀಸರ ಹೆಸರಿನಲ್ಲಿ ಬೆದರಿಸಿ ಸುಲಿಗೆಗೆ ಸಂಪಂಗಿರಾಮ್‌ ಯೋಜಿಸಿದ್ದ, ಇದಕ್ಕೆ ಇನ್ನುಳಿದ ಆರೋಪಿಗಳು ಸಾಥ್‌ ಕೊಟ್ಟಿದ್ದಾರೆ.

ಅಂತೆಯೇ ಜಯಂತಿನಗರದ ಆಲಯ್ಯಾ ಸ್ಪಾ ಮೇಲೆ ದಾಳಿ ನಡೆಸಿದ ಆರೋಪಿಗಳು, ತಮ್ಮ ಗುರುತಿನ ಚೀಟಿ ತೋರಿಸಿ ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ. ‘ನೀವು ಸ್ಪಾ ಹೆಸರಿನಲ್ಲಿ ಕಾನೂನುಬಾಹಿರವಾಗಿ ಮಸಾಜ್‌ ಪಾರ್ಲರ್‌ ನಡೆಸುತ್ತಿರುವ ಮಾಹಿತಿ ಇದೆ. ಹಣ(Money) ಕೊಡದೆ ಹೋದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಬೆದರಿಸಿದ್ದಾರೆ. ಈ ಮಾತಿಗೆ ಹೆದರಿದ ಪ್ರಭಾ ಅವರಿಂದ .60 ಸಾವಿರ ನಗದು ಹಣ ಹಾಗೂ ಗೂಗಲ್‌ ಮತ್ತು ಪೋನ್‌ ಪೇ ಮೂಲ .1 ಲಕ್ಷವನ್ನು ಆರೋಪಿಗಳು ಪಡೆದಿದ್ದರು. ಇದಾದ ಬಳಿಕ ಮತ್ತೆ .30 ಸಾವಿರಕ್ಕೆ ಪ್ರಭಾ ಅವರಿಗೆ ಆರೋಪಿಗಳು ಬ್ಲ್ಯಾಕ್‌ಮೇಲ್‌(Blackmail) ಮಾಡಿದ್ದರು. ಈ ಕಾಟದಿಂದ ರೋಸಿ ಹೋದ ಅವರು, ಕೊನೆಗೆ ರಾಮಮೂರ್ತಿ ನಗರ ಠಾಣೆಗೆ ಬಂದು ದೂರು ನೀಡಿದರು. ಅಂತೆಯೇ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ

ಸ್ಪಾವೊಂದರ(Spa) ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ(Prostitution) ತೊಡಗಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ.

ಟಿ.ದಾಸರಹಳ್ಳಿ ಸಮೀಪ ಐಶ್ವರ್ಯ ಅಲಿಯಾಸ್‌ ರಿಷಪ್ಸನಿಸ್ಟ್‌ ಬಂಧಿತಳಾಗಿದ್ದು(Arrest), ಟಿ.ದಾಸರಹಳ್ಳಿ ಸಮೀಪದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸ್ಕೈ ಯುನಿಸೆಕ್ಸ್‌ ಸಲೂನ್‌ ಮತ್ತು ಸ್ಪಾ(Sky Unisex Salon and Spa) ಹೆಸರಿನಲ್ಲಿ ಆಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. 

Chikkamagaluru Crime: ಮಗಳ ಮೇಲೆ ಮಲ ತಂದೆಯಿಂದಲೇ ರೇಪ್‌: ವಿಕೃತಕಾಮಿ ಅರೆಸ್ಟ್‌

ಈ ದಾಳಿ ವೇಳೆ(Raid) ಮೂವರು ಮಹಿಳೆಯರನ್ನು(Women) ರಕ್ಷಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಸ್ಪಾ ಪರವಾನಿಗೆ(License) ರದ್ದುಪಡಿಸುವಂತೆ ಬಿಬಿಎಂಪಿಗೆ(BBMP) ವರದಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ಸ್ಪಾ ಮೇಲೆ ಸಿಸಿಬಿ ದಾಳಿ: 13 ಮಹಿಳೆಯರ ರಕ್ಷಣೆ

ಬೆಂಗಳೂರು: ಅನೈತಿಕ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ನಗರದ ಮೂರು ‘ಸ್ಪಾ’ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವಿದೇಶಿಯರು(Foreigners) ಸೇರಿ 13 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ಫೆ.4 ರಂದು ನಡೆದಿತ್ತು 
ಉತ್ತರ ಭಾರತ ಮೂಲದ ದೇವೆಂದರ್‌, ಅಭಿಜಿತ್‌ ಬಂಧಿತರು. ನಗರದ ರಾಯಲ್‌ ಸ್ಪಾ ಆ್ಯಂಡ್‌ ಸಲೂನ್‌, ಅಸ್ತೇಟಿಕ್‌ ಯೂನಿಸೆಕ್ಸ್‌ ಸೆಲೂನ್‌ ಆ್ಯಂಡ್‌ ಸ್ಪಾ, ನಿಸರ್ಗ ಆಯುರ್ವೇದಿಕ್‌ ಕ್ಲಿನಿಕ್‌ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಕೆಲಸದ ನೆಪದಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು