ಯಾದಗಿರಿಯಲ್ಲಿ 1 ಸ್ಫೋಟ, 9 ಸಾವು, ಶುಭ ಸಮಾರಂಭದ ಮನೆಯಲ್ಲಿ ಸೂತಕದ ಛಾಯೆ

By Suvarna News  |  First Published Mar 2, 2022, 10:25 PM IST

* ಯಾದಗಿರಿ ಸಿಲಿಂಡರ್ ಸ್ಫೋಟ ಪ್ರಕರಣ
* ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ದಿನೇದಿನೆ ಏರಿಕೆ
* ಶುಭ ಸಮಾರಂಭದ ಮನೆಯಲ್ಲಿ ಸೂತಕದ ಛಾಯೆ


ಯಾದಗಿರಿ, (ಮಾ.02): ಕಳೆದ ಶುಕ್ರವಾರ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್‌ನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ(Cylinder Blast) ಪ್ರಕರಣದಲ್ಲಿ ಸಾವಿನ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದ್ದು, ಬುಧವಾರ ಒಂದೇ ದಿನ ಐವರು ಗಾಯಾಳುಗಳು ಚಿಕಿತ್ಸೆ ಫಲಿಸದೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಂಭ್ರಮದಲ್ಲಿದ್ದ ಕುಟುಂಬಸ್ಥರು ನಡೆಸಿದ ಶುಭ ಸಮಾರಂಭದ ಸಂದರ್ಭದಲ್ಲಿ ನಡೆದ ಒಂದೇ ಒಂದು ಸ್ಫೋಟ ಒಟ್ಟು ಒಂಬತ್ತು ಮಂದಿಯನ್ನು ಬಲಿ ಪಡೆದಿದ್ದು, ಆ ಮನೆಯಲ್ಲಿನ ಸೂತಕದ ಕಾವು ದಿನೇದಿನೆ ಹೆಚ್ಚಾಗಿದೆ.

Latest Videos

undefined

ಹೊರಗೆ ಹೋಟೆಲ್..ಒಳಗೆ ವೇಶ್ಯಾವಾಟಿಕೆ.. ಹುಬ್ಬಳ್ಳಿ ಕರಾಮತ್ತು!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಫೆ.25ರಂದು ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್​ಎಲ್​) ನಿವೃತ್ತ ನೌಕರನ ಮನೆಯಲ್ಲಿ ಸೀಮಂತ ನಡೆಯುತ್ತಿದ್ದ ಸಂದರ್ಭದಲ್ಲಿ ಅಡುಗೆ ಅನಿಲ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದರಲ್ಲಿ 8 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ನಡೆದ ದಿನವೇ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ (15 ತಿಂಗಳ ಮಗು), ಆದ್ಯಾ (3) ಹಾಗೂ ನಿಂಗಮ್ಮ (85) ಅದೇ ದಿನ ಮತ್ತು ಮರುದಿನ ಗಂಗಮ್ಮ (51) ಮೃತಪಟ್ಟಿದ್ದರು. ನಾಲ್ಕನೇ ದಿನ 6 ವರ್ಷದ ಶ್ವೇತಾ ಸಾವಿಗೀಡಾಗಿದ್ದಳು.

ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳಿದ ಗಾಯಾಳುಗಳ ಪೈಕಿ ಐವರು ಸಾವಿಗೀಡಾಗಿದ್ದು, ಒಂದು ಸಿಲಿಂಡರ್​ ಸ್ಫೋಟದಿಂದ ಸತ್ತವರ ಸಂಖ್ಯೆ ಹತ್ತಕ್ಕೆ ಏರಿದೆ. ಕಲ್ಲಪ್ಪ ಶರಣಪ್ಪ ಲಕ್ಕಶೆಟ್ಟಿ (48), ಭೀಮರಾಯ ಶಿವಪ್ಪ (78) ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ವೀರಬಸಪ್ಪ ಮಲ್ಲಣ್ಣ (25), ಚನ್ನವೀರ ಸಂಗಣ್ಣ ಮ್ಯಾಳಗಿ (30) ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಉಳಿದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಇತ್ತ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಗಾಯಾಳುಗಳು ಕಲಬುರಗಿ ಜಿಲ್ಲಾಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ರಾಸಲೀಲೆ ನೋಡಿದನೆಂದು ರಾಡ್​​​ನಿಂದ ಹಲ್ಲೆ
ಸೆಕ್ಸ್ ವಿಡಿಯೋ ನೋಡಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ರಾಡ್​​ನಿಂದ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಇಂದಿರಾ ಕಾಲೋನಿ ನಿವಾಸಿಗಳಾದ ಸತ್ಯರಾಜು ಹಾಗೂ ಯುವತಿ ಬಂಧಿತರು. ಶೋಭರಾಜು ಎಂಬಾತ ಸತ್ಯರಾಜು ಮತ್ತು ಯುವತಿ ರಾಸಲೀಲೆಯಲ್ಲಿ ತೊಡಗಿದ್ದನ್ನು ನೋಡಿದ್ದನಂತೆ. ತಮ್ಮ ಅನೈತಿಕ ಸಂಬಂಧವನ್ನು ಬೇರೆಯವರಿಗೆ ಹೇಳುತ್ತಾನೆ ಎಂಬ ಭಯದಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.  ಸದ್ಯ, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೋಳ್ಳೆಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!