ಉಡುಪಿಯ ಪ್ರಸಿದ್ಧ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಫೈರಿಂಗ್, ಓರ್ವನಿಗೆ ಗಾಯ!

By Gowthami KFirst Published Dec 30, 2023, 2:56 PM IST
Highlights

ಉಡುಪಿಯ ಪ್ರಸಿದ್ಧ ಬಟ್ಟೆ‌ಮಳಿಗೆಯಲ್ಲಿ ಫೈರಿಂಗ್ ಆಗಿದೆ. ಮಳಿಗೆ ಒಳಗಿದ್ದ ಓರ್ವನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಡುಪಿ (ಡಿ.30): ಉಡುಪಿಯ ಪ್ರಸಿದ್ಧ ಬಟ್ಟೆ‌ಮಳಿಗೆಯಲ್ಲಿ ಫೈರಿಂಗ್ ಆಗಿದೆ. ಮಳಿಗೆ ಒಳಗಿದ್ದ ಓರ್ವನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬನ್ನಂಜೆಯಲ್ಲಿರುವ ಜಯಲಕ್ಷ್ಮಿ ಬಟ್ಟೆ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ಮಳಿಗೆಯೊಳಗೆ ವಾರಸುದಾರರಿಲ್ಲದ ಗನ್  ಪತ್ತೆಯಾಗಿದೆ. ಗನ್ ನೋಡಿ‌  ಸಿಬ್ಬಂದಿಗಳು ಆಶ್ಚರ್ಯ ಚಕಿತರಾಗಿದ್ದಾರೆ. ಈ ವೇಳೆ ಅಕಸ್ಮಾತ್ ಗುಂಡು ಸಿಡಿದು ಗಾಯವಾಗಿದೆ. ಘಟನಾ ಸ್ಥಳಕ್ಕೆ  ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಉಡುಪಿ ಬನ್ನಂಜೆಯ ರಾಷ್ಟ್ರೀಯ ಹೆದ್ದಾರಿ 169ಎ ಸಮೀಪದಲ್ಲೇ ಇರುವ ಜಯಲಕ್ಷ್ಮೀ ಸಿಲ್ಕ್ಸ್ ಸಮುಚ್ಛಯ ಒಟ್ಟು 1.10 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, 7 ಅಂತಸ್ತಿನ ಮಹಡಿಯ ಕಟ್ಟಡವಾಗಿದೆ. ಇಡೀ ಜಿಲ್ಲೆಯ ಗ್ರಾಹಕರನ್ನು ಸೆಳೆದು ವಿಶೇಷ ಜನಮನ್ನಣೆಗೆ ಪಾತ್ರವಾಗಿದೆ.

ಮೂರು ಬಾರಿ ಪ್ರೀತಿಸಿ ವಿವಾಹವಾದ ಬಾಲಿವುಡ್‌ನ ಮೊದಲ ಮಹಿಳಾ ಹಾಡುಗಾರ್ತಿ ...

ತಿರುಮಲ ಆಸ್ಪತ್ರೆ, ಸಹನಾ ಆಸ್ಪತ್ರೆ, ಡಾ.ಬಸನಗೌಡ ಕಣ್ಣಿನ ಆಸ್ಪತ್ರೆ, ತನ್ಮಯಿ ಆಸ್ಪತ್ರೆಯಲ್ಲಿ ಕಳವು
ಸಿಂಧನೂರು: ನಗರದ ಆದರ್ಶ ಕಾಲೋನಿಯಲ್ಲಿರುವ ತಿರುಮಲ ಆಸ್ಪತ್ರೆಗೆ ಕೆಲ ದುಷ್ಕರ್ಮಿಗಳು ನುಗ್ಗಿ ಕಳ್ಳತನ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾತ್ರಿ 9 ಗಂಟೆ ಸುಮಾರು ಆಸ್ಪತ್ರೆಗೆ ಬಂದ ನಾಲ್ಕು ಜನ ಕಳ್ಳರು ಆಸ್ಪತ್ರೆಯಲ್ಲಿ ಅಳವಡಿಸಿರುವ 5 ಸಾವಿರ ಬೆಲೆ ಬಾಳುವ ಎರಡು ಸಿಸಿ ಕ್ಯಾಮೆರಾ ಮತ್ತು ಮೆಡಿಕಲ್ ಶಾಪ್ ಕ್ಯಾಶ್ ಕೌಂಟರ್‌ನಲ್ಲಿದ್ದ ರು.15 ಸಾವಿರ ನಗದು ಸೇರಿ ಒಟ್ಟು ರು.20 ಸಾವಿರ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಆಸ್ಪತ್ರೆಯ ಮಕ್ಕಳ ವೈದ್ಯ ವಿಜಯಕುಮಾರ ದೂರು ನೀಡಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹನಾ ಆಸ್ಪತ್ರೆಗೆ ದಾಳಿ:
ಎರಡು ಬೈಕ್‌ಗಳಲ್ಲಿ ಸಹನಾ ಆಸ್ಪತ್ರೆಗೆ ದಾಳಿ ಮಾಡಿದ 4 ಜನ ಕಳ್ಳರು ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಒಳಗೆ ಬಿಡದೆ ಗೇಟ್ ಹಾಕಿದ ಕಾವಲುಗಾರನ ಮೇಲೆ ಮಾರಾಣಾಂತಿಕ ಹಲ್ಲೆ ಎಸಗಿದ್ದಾರೆ ಎಂದು ಆಸ್ಪತ್ರೆಯ ಮಕ್ಕಳ ವೈದ್ಯ ಕೆ.ಶಿವರಾಜ ಶಹರ ಠಾಣೆಗೆ ದೂರು ನೀಡಿದ್ದಾರೆ.

ಸಚಿನ್, ದ್ರಾವಿಡ್, ಗಂಗೂಲಿ ಜತೆ ತಂಡದಲ್ಲಿದ್ದ ಕ್ರಿಕೆಟಿಗ ಆಟವಾಡಲಾಗದೆ ... 

ಒಂದೇ ದಿನ 4 ಆಸ್ಪತ್ರೆ ಕಳ್ಳತನ:
ಗುರುವಾರ ರಾತ್ರಿ ಒಂದೇ ದಿನ ಡಾ.ಬಸನಗೌಡ ಕಣ್ಣಿನ ಆಸ್ಪತ್ರೆಯಲ್ಲಿ ರು.5 ಸಾವಿರ, ತನ್ಮಯಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ಆಗಿದೆ. ಇದರಿಂದ ರಾತ್ರಿ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿರುವ ವೈದ್ಯರು, ಸಿಬ್ಬಂದಿ ಮತ್ತು ಕಾವಲುಗಾರರು ಭಯಭೀತರಾಗಿದ್ದಾರೆ.

ಕೆಲ ಆಸ್ಪತ್ರೆಗಳಲ್ಲಿ ಕಾವಲುಗಾರರೇ ಇರುವುದಿಲ್ಲ. ಕಾರಣ ಆಸ್ಪತ್ರೆಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ.ಕೆ.ಶಿವರಾಜ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.

click me!