ಮುಂದುವರಿದ ಮಹಿಳೆಯರ 'ಶಕ್ತಿ' ಪ್ರದರ್ಶನ; ಕಂಡಕ್ಟರ್, ಡ್ರೈವರ್ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

By Ravi JanekalFirst Published Dec 30, 2023, 1:13 PM IST
Highlights

ಬಸ್‌ ನಿಲ್ಲಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕಡೆಯ ಯುವಕರ ಗುಂಪೊಂದು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆಯ  ಕೆಎಸ್‌ಆರ್‌ಟಿಸಿ ಎರಡನೇ ಘಟಕದಲ್ಲಿ ತಡರಾತ್ರಿ ನಡೆದಿದೆ.

ಬಳ್ಳಾರಿ (ಡಿ.30): ಬಸ್‌ ನಿಲ್ಲಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕಡೆಯ ಯುವಕರ ಗುಂಪೊಂದು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆಯ  ಕೆಎಸ್‌ಆರ್‌ಟಿಸಿ ಎರಡನೇ ಘಟಕದಲ್ಲಿ ತಡರಾತ್ರಿ ನಡೆದಿದೆ.

ಮಲ್ಲಿಕಾರ್ಜುನಗೆ ಹಲ್ಲೆಗೊಳಗಾದ ನಿರ್ವಾಹಕ, ಚಾಲಕ ಪಂಪಣ್ಣನಿಗೆ ಸಹ ಗಾಯ. ತಲೆ ಮುಖ, ಬೆನ್ನಿನ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಪ್ರಕರಣ ಸಂಬಂಧ ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯು ಲ್ಲಿ ದೂರು ದಾಖಲಾಗಿದೆ.

ಸೀಟ್ ಗಾಗಿ ಮಹಿಳೆಯರ ಹೊಡೆದಾಟ: ಶಕ್ತಿ ಯೋಜನೆಯ ಶಕ್ತಿ ಪ್ರದರ್ಶನ!

ಘಟನೆ ಹಿನ್ನೆಲೆ:

ನಿನ್ನೆ ತಡರಾತ್ರಿ ಸಂಡೂರಿನಿಂದ ಬಳ್ಳಾರಿಗೆ ಹೊರಟಿದ್ದ ಕೆಎ 35 ಎಪ್ 350 ಬಸ್. ಸಂಡೂರು ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಬಳ್ಳಾರಿಗೆ ಹೋಗಲೆಂದು ಬಸ್ ಹತ್ತಿದ್ದರು. ಆದರೆ ನಮ್ಮ ಕಡೆಯವರು ಇನ್ನಿಬ್ಬರು ಬರ್ತಿದ್ದಾರೆ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಅದರಂತೆ ಐದು ನಿಮಿಷಗಳ ಕಾಲ ಬಸ್ ನಿಲ್ಲಿಸಿ ಕಾದು ನೋಡಿದ್ದಾರೆ. ಇತ್ತ ಬಸ್ ನಲ್ಲಿದ್ದ ಪ್ರಯಾಣಿಕರು ಬಸ್ ಚಲಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಬಸ್ ಹೊರಟಿದೆ. 'ಬಸ್ ನಿಮ್ಮಂದಾ?' ಎಂದು ಚಾಲಕ, ನಿರ್ವಾಹಕರ ಅವಾಚ್ಯ ಪದಳಿಂದ ನಿಂದಿಸಿದ್ದ ಮಹಿಳೆಯರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಷ್ಟಕ್ಕೆ ಸುಮ್ಮನಾಗದ ಮಹಿಳೆಯರು. ನಿಮ್ಮನ್ನ ನಮ್ಮ ಕಡೆ ಜನ ನೋಡಿಕೊಳ್ತಾರೆ ಎಂದು ಅವಾಜ್ ಹಾಕಿದ್ದಾರೆ.

 

ಹೆಸರಿಗಷ್ಟೇ ರಾಜಹಂಸ ಒಳಗಡೆ ಕುಳಿತರೆ ಡಗಡಗ ಅಂತಾ ಪರಮಹಿಂಸೆ ಕೊಡುತ್ತೆ ಬಸ್!

ಬಸ್ ಬಳ್ಳಾರಿಗೆ ಬರುತ್ತಿದ್ದಂತೆ ದಾಳಿ ಮಾಡಿದ ಗುಂಪು!

ಮಹಿಳೆಯರು ಅವಾಜ್ ಹಾಕಿದಂತೆ ಬಸ್ ಹೊರಡುತ್ತಲೇ ಬಳ್ಳಾರಿಯಲ್ಲಿ ತಮ್ಮ ಕಡೆಯವರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಬಳ್ಳಾರಿಗೆ ಬಂದ ಬಸ್ ಡಿಪೋದೊಳಗೆ ಹೋಗುತ್ತಿದ್ದಂತೆ ಬಸ್ ಫಾಲೋ ಮಾಡಿಕೊಂಡು ಬಂದಿರೋ ಗುಂಪು. ಸುಮಾರು 30 ರಿಂದ 40 ಜನರ ಗುಂಪು ಏಕಾಏಕಿ ಬಸ್ ಡಿಪೋಗೆ ನುಗ್ಗಿ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮುಂಚೇರಿ ಗ್ರಾಮದವರು ನಮ್ಮನ್ನ ಕೆಣಕಿದ್ರೆ ಹಿಂಗೆ ಆಗೋದು ಎಂದು ಅವಾಜ್ ಹಾಕಿದ ಯುವಕರ ಗುಂಪು. ಅವಾಚ್ಯ ಪದಗಳಿಂದ ನಿಂದಿಸುತ್ತಲೇ ಬಾಬು ಮತ್ತು ಇತರೆ ಹತ್ತು ಜನರಿಂದ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಪ್ರಕರಣದ ಬಗ್ಗೆ ಈಗಾಗಲೆ ದೂರು ದಾಖಲಾಗಿದ್ದು. ಪೊಲೀಸರು ವಿಚಾರಣೆ ಮುಂದವುರಿಸಿದ್ದಾರೆ. 

click me!