ಬೆಂಗಳೂರಲ್ಲಿ ಕುಡುಕರ ರಿವೇಂಜ್, ಬಾರ್‌ ಸುಡಲು ಬಂದು ಕಿರಾಣಿ ಅಂಗಡಿಗೆ ಬೆಂಕಿ!

By Suvarna News  |  First Published Dec 21, 2021, 6:26 PM IST

* ಕುಮಾರಸ್ವಾಮಿ ಲೇಔಟ್ ನಲ್ಲಿ ಮುಚ್ಚಿದ ಅಂಗಿಡಿಗೆ ಬೆಂಕಿ ಹಚ್ಚಿದ ಪ್ರಕರಣ

* ರಾತ್ರಿ ವೇಳೆ ಬಂದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಕಿರಾತಕರು

* ಡಿ.15 ರ ಮಧ್ಯರಾತ್ರಿ ನಡೆದಿದ್ದ ಘಟನೆ ಸಂಬಂಧ ಇಬ್ಬರ ಬಂಧನ

* ಕುಮರಸ್ವಾಮಿ ಲೇಔಟ್ ಠಾಣೆ ಪೊಲೀಸರ ಕಾರ್ಯಾಚರಣೆ


ಬೆಂಗಳೂರು(ಡಿ. 21)  ಕುಮಾರಸ್ವಾಮಿ(Bengaluru) ಲೇಔಟ್ ನ (Vasanthapura) ವಸಂತಪುರದಲ್ಲಿ ಕಿರಾಣಿ ಅಂಗಡಿಗೆ ಬೆಂಕಿ (Fire) ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಾರ್ ಗೆ (Bar) ಬೆಂಕಿ ಹಚ್ಚುವ ಬದಲು ಕಿರಾಣಿ ಅಂಗಡಿಗೆ (Provision Store) ಬೆಂಕಿ ಇಟ್ಟಿದ್ದರು ಆರೋಪಿಗಳು.

ಡಿಸೆಂಬರ್ 16 ರ ಮದ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕಿಡಿಗೇಡಿಗಳ ಬಂಧನವಾಗಿದೆ  ಬೈಕ್ ನಲ್ಲಿ ಬಂದು ಕೃತ್ಯವೆಸಗಿ ಪರಾರಿಯಾಗಿದ್ದರು. ಆರೋಪಿಗಳ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು.

Latest Videos

undefined

ಘಟನೆ ಹಿನ್ನೆಲೆ: ಸಂಜೆ ಬಾರ್ ನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಬಾರ್ ಸಿಬ್ಬಂದಿ ಗಲಾಟೆ ಮಾಡಿದವರಿಂದ1500 ರೂಪಾಯಿ ದಂಡ ಕಟ್ಟಿಸಿ ಕೊಂಡಿದ್ದರು. ಎಲ್ಲರೆದುರು ಮಾನ ಹೋಯ್ತು ಅಂತ ಕುಪಿತಗೊಂಡಿದ್ದ ಆರೋಪಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.

ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದ ಕಿಡಿಗೇಡಿಗಳು ಬಾರ್ ಗೆ ಬೆಂಕಿ ಇಡುವ ತೀರ್ಮಾನ ಮಾಡಿದ್ದಾರೆ.  ಅದರಂತೆ  ರಾತ್ರಿ 1.30 ರ ಸುಮಾರಿಗೆ ಪೆಟ್ರೋಲ್ ತಂದು ಸುರಿದು ಬೆಂಕಿ ಇಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ಬಾರ್ ಬದಲು ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿ ಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು  ಮೌನೇಶ್  ಸೇರಿ ಇಬ್ಬರನ್ನು ಬಂಧಿಸಿದ್ದಾರೆ. 

ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ದರು

ಪ್ರೀತಿ ಒಪ್ಪದವಳ ಮೇಲೆ ಬೆಂಕಿ:   ಆಂಧ್ರಪ್ರದೇಶದ (Andhra Pradesh) ವೈಜಾಗ್‌ನ ಖಾಸಗಿ ಲಾಡ್ಜ್‌ನಲ್ಲಿ ಯುವಕನೊಬ್ಬ  ತನ್ನ ಪ್ರಿಯತಮೆಗೆ (Lover) ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಇಟ್ಟು ತಾನು  ಸುಟ್ಟುಕೊಂಡಿದ್ದ.

ಬೆಂಕಿ ಇಟ್ಟ ಯುವಕನನ್ನು  (Telangana) ಭೂಪಾಲಪಲ್ಲೆ ಮೂಲದ ಹರ್ಷವರ್ಧನ್ ಪಿ ಎಂದು ಗುರುತಿಸಲಾಗಿತ್ತು.. ಯುವತಿ ವಿಶಾಖಪಟ್ಟಣ ಮೂಲದವರು. ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು.  ಗಾಯಗೊಂಡಿರುವ ಯುವತಿ ಸಹ ಹೇಳಿಕೆ ನೀಡಿದ್ದಾರೆ. ಹರ್ಷವರ್ಧನ್ ಹುಡುಗಿ ಮುಂದೆ ಪ್ರಪೋಸಲ್  ಇಟ್ಟಿದ್ದು ಈಕೆ ತಿರಸ್ಕರಿಸಿದ್ದಳು.  ಇದೇ ಕಾರಣಕ್ಕೆ  ಕೋಪಗೊಂಡ ಯುವಕ ವೈಜಾಗ್ ಗೆ ಬಂದಿದ್ದಾನೆ.  ಇಬ್ಬರು ಭೇಟಿಯಾದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನು ಸುಟ್ಟುಕೊಂಡಿದ್ದ.

ಬೆಂಕಿ ಪೊಟ್ಟಣ ಗಲಾಟೆ:   ಬೆಂಕಿ ಪೊಟ್ಟಣಕ್ಕಾಗಿ ಕೊಲೆಯೇ(Murder) ನಡೆದು ಹೋಗಿತ್ತು.  ಇಬ್ಬರು ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಬಿಹಾರ ಮೂಲದ ಜ್ಯೂಸ್ ಸೆಂಟರ್ ಮಾಲೀಕನ ಹತ್ಯೆ ಮಾಡಿದ್ದಾರೆ.   ಚಂಡೀಘಡದ ಸೆಕ್ಟರ್  82  ದಲ್ಲಿ ಸಿಲ್ಲಿ ಮ್ಯಾಟರ್  ಗಾಗಿ ಕೊಲೆ(Crime News) ನಡೆದು ಹೋಗಿದೆ. 

ಆರೋಪಿಗಳನ್ನು ಭೂಪಿಂದರ್ ಸಿಂಗ್ ಮತ್ತು ರಿಂಕು ಎಂದು ಗುರುತಿಸಲಾಗಿದೆ. ಬಟಿಂಡಾದ ಧನ್ ಸಿಂಗ್ ಗ್ರಾಮದ ನಿವಾಸಿಯಾ ಭೂಪಿಂದರ್ ಆದರೆ , ರಿಂಕು ಮೊಹಾಲಿಯ ಜಗತ್ಪುರದಲ್ಲಿ ವಾಸ ಮಾಡುತ್ತಿದ್ದ. ಸಿಗರೇಟ್ ಸೇವನೆಗೆ ಬೆಂಕಿಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೊಲೆಯೇ ನಡೆದುಹೋಗಿತ್ತು. 

ಬೇಕಂತಲೇ ಅರೆಸ್ಟ್ ಆದ:  ಹೆಂಡತಿ ಜತೆ ಬಾಳೋದಕ್ಕಿಂತ ಪೊಲೀಸ್ ಲಾಕಪ್ಪೇ ಬೆಸ್ಟ್ ಎಂದು ಈ ಪುಣ್ಯಾತ್ಮ ತೀರ್ಮಾನ ಮಾಡಿದ್ದಾನೆ. ಹೇಗಾದರೂ ಪೊಲೀಸರಿಂದ ಅರೆಸ್ಟ್ ಆಗಬೇಕು ಎಂದು ಪ್ಲಾನ್ ಮಾಡಿದವ ಪೊಲೀಸ್ ಚೌಕಿಗೆ ಬೆಂಕಿ ಇಟ್ಟಿದ್ದ.

ಮನೆಯಲ್ಲಿನ ವಿಚಾರಕ್ಕೆ ಸಂಬಂಧಿಸಿ ಪತ್ನಿ ಉದ್ದುದ್ದ ಲೆಕ್ಚರ್ ಕೊಡುತ್ತಿದ್ದಳು. ಈ ಕಾಟ ತಾಳಲಾರದೆ  ಗುಜರಾತ್‌ನ ರಾಜ್‌ಕೋಟ್‌ ನ 23 ವರ್ಷದ ಯುವಕ  ಇಂಥ ಕೆಲಸ ಮಾಡಿದ್ದ.  ಬೆಂಕಿ ಇಟ್ಟವನ ಹೆಸರು  ದೇವಜಿ ಚಾವ್ಡಾ, ದಿನಗೂಲಿ ನೌಕರನಾಗಿ ಕೆಲಸ ಮಾಡಿಕೊಂಡಿದ್ದ. 

 

click me!