ಪೇಜಾವರ ಮಠದಲ್ಲಿ ಬೆಂಕಿ ಆಕಸ್ಮಿಕ/ ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ/ ರಥಬೀದಿಯಲ್ಲಿರುವ ಪೇಜಾವರ ಮಠ / ಪೇಜಾವರ ಮಠದಲ್ಲಿ / ಎಸಿಯಲ್ಲಿ ಕಾಣಿಸಿಕೊಂಡ ಬೆಂಕಿ
ಉಡುಪಿ(ಮಾ. 07) ಪೇಜಾವರ ಮಠದಲ್ಲಿ ಭಾನುವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು.
ಉಡುಪಿಯ ರಥಬೀದಿಯಲ್ಲಿ ಇರುವ ಪೇಜಾವರ ಮಠದಲ್ಲಿ ಎಸಿಯಲ್ಲಿನ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪರಿಣಾಮ ಯಾವುದೇ ರೀತಿಯಲ್ಲಿ ಮಠದ ಸೊತ್ತುಗಳಿಗೆ ಹಾನಿಯಾಗಿಲ್ಲ.
ಹಸು ರಕ್ಷಣೆಗೆ ಹೋಗಿ ಬೆಂಕಿಗೆ ಆಹುತಿಯಾದ ಯುವಕ
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದಾಗ, ವೋಲ್ಟೇಜ್ ಪ್ರಮಾಣ ಕಡಿಮೆ ಅಥವಾ ಜಾಸ್ತಿ ಬಂದರೆ, ಹೆವಿ ಮೋಟಾರ್ ಇರುವ ಯಂತ್ರಗಳನ್ನು ಮನೆಯ ವೈರಿಂಗ್ ಗೆ ಹಾಕಿದರೆ ಈ ರೀತಿ ಶಾರ್ಟ್ ಸರ್ಕ್ಯೂಟ್ ಆಗಬಹುದು. ಮಳೆ ಅಥವಾ ಇಬ್ಬನಿ ಕಾರಣಕ್ಕೆ ತುಕ್ಕು ಬಂದಿದ್ದು ವಿದ್ಯುತ್ ಸಂಚಾರ ಆದಾಗಲೂ ಈ ರೀತಿ ಆಗಬಹುದು.
ಕೆಲ ದಿನಗಳ ಹಿಂದೆ ಸಾಗರದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಚಲಿಸುತ್ತಿದ್ದ ಮಾರುತಿ ಓಮ್ನಿ ಗ್ಯಾಸ್ ಕಿಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅವಘಡ ತಪ್ಪಿತ್ತು.