Bengaluru: ಮಗುವಿಗೆ ಮದ್ಯ ಕುಡಿಸಿ ವಿಕೃತಿ: ತಾಯಿಯ ಗುಪ್ತಾಂಗ ಮುಟ್ಟಿ ಅಸಭ್ಯ ವರ್ತನೆ

By Kannadaprabha News  |  First Published Jan 19, 2022, 5:16 AM IST

*  ಪತಿ, ಮಾವ, ಮೈದುನ, ಅತ್ತೆಯಿಂದ ಕೃತ್ಯ
*  ಇಡೀ ಕುಟುಂಬಕ್ಕೆ ಮದ್ಯಪಾನದ ಚಟ
*  3 ವರ್ಷದ ಮಗುವಿಗೆ ಮದ್ಯ ಕುಡಿಸಿ ವಿಕೃತಿ
 


ಬೆಂಗಳೂರು(ಜ.19): ಮೂರು ವರ್ಷದ ಮಗುವಿಗೆ ಮದ್ಯ(Alcohol) ಕುಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು(Woman) ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದಡಿ ಆಕೆಯ ಪತಿ ಸೇರಿ ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ.

ಕುರುಬರಹಳ್ಳಿಯ 26 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಕಮಲಾ ನಗರದ ಸುನೀಲ್‌ ಕುಮಾರ್‌, ಅತ್ತೆ ಮಲ್ಲಿಗಾ, ಮಾವ ಪಳನಿ, ಬಾವ ಶಾಂತ್‌ಕುಮಾರ್‌ ಹಾಗೂ ಈತನ ಪತ್ನಿ ಸರಿತಾ ವಿರುದ್ಧ ಪೊಲೀಸರು(Police) ಎಫ್‌ಐಆರ್‌ ದಾಖಲಿಸಿದ್ದಾರೆ.

Tap to resize

Latest Videos

Kite Manja Slits Throat: ಮೊಪೆಡ್ ನಲ್ಲಿ ಬರುತ್ತಿದ್ದವನ ಪ್ರಾಣ ತೆಗೆದ ಗಾಳಿಪಟದ ದಾರ!

ಸಂತ್ರಸ್ತೆಯು 2018ರಲ್ಲಿ ಸುನೀಲ್‌ ಕುಮಾರ್‌ನನ್ನು ವಿವಾಹವಾಗಿದ್ದು, ದಂಪತಿಗೆ ಮೂರು ವರ್ಷದ ಒಂದು ಗಂಡು ಮಗುವಿದೆ(child). ಪತಿ ಸುನೀಲ್‌ಗೆ ಅತ್ತಿಗೆ ಸರಿತಾ ಜತೆ ಅನೈತಿಕ ಸಂಬಂಧವಿದ್ದು, ಈ ವಿಚಾರವನ್ನು ಬಾವ ಶಾಂತಕುಮಾರ್‌ ಹಾಗೂ ಅತ್ತೆ-ಮಾವನಿಗೆ ಸಂತ್ರಸ್ತೆ ತಿಳಿಸಿದ್ದಾರೆ. ಮಗ ಶಾಂತ್‌ಕುಮಾರ್‌ ದಂಪತಿ ವಿವಾಹವಾಗಿ 10 ವರ್ಷವಾಗಿದ್ದು, ಮಕ್ಕಳಿಲ್ಲ. ಇದೀಗ ನಿನ್ನ ಗಂಡ ಸುನೀಲ್‌ ಅತ್ತಿಗೆ ಸರೀತಾಗೆ ಮಗು ಕೊಡುತ್ತಾನೆ. ಸುಮ್ಮನೆ ಹೊಂದಾಣಿಕೆ ಮಾಡಿಕೊಂಡು ಹೋಗು ಎಂದು ಹೇಳಿದ್ದಾರೆ.

ಬಳಿಕ ಸಂತ್ರಸ್ತೆ ಈ ವಿಚಾರವನ್ನು ತನ್ನ ಪೋಷಕರ ಗಮನಕ್ಕೆ ತಂದಿದಾಗ, ಅಳಿಯ ಸುನೀಲ್‌ಗೆ ಬುದ್ಧಿವಾದ ಹೇಳಿ ಕೆ.ಆರ್‌.ಪುರಂನಲ್ಲಿ ಪ್ರತ್ಯೇಕ ಮನೆ ಮಾಡಿಸಿ ಇರಿಸಿದ್ದರು. ಈ ನಡುವೆ ಸುನೀಲ್‌ ಮನೆಗೆ ಸ್ನೇಹಿತರನ್ನು ಕರೆತಂದು ಮದ್ಯದ ಪಾರ್ಟಿ ಮಾಡುತ್ತಿದ್ದ. ಈ ಬಗ್ಗೆ ಸಂತ್ರಸ್ತೆ ಪ್ರಶ್ನಿಸಿದ್ದಕ್ಕೆ ಆಕೆಯನ್ನು ನಿಂದಿಸಿ ತವರು ಮನೆಗೆ ಬಿಟ್ಟು ಬಿಂದಿದ್ದ. .6 ಲಕ್ಷ ವರದಕ್ಷಿಣೆ(Dowry) ಕೊಟ್ಟರಷ್ಟೇ ಪತ್ನಿಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಈ ವೇಳೆ ಹಣ ಕೊಡಲು ಆರು ತಿಂಗಳು ಕಾಲಾವಕಾಶ ಕೇಳಿದ್ದಕ್ಕೆ ಒಪ್ಪಿ ಪತ್ನಿಯನ್ನು ಮನೆಗೆ ಕರೆತಂದಿದ್ದ.

ಅತ್ತೆ ಮನೆಯಲ್ಲಿ ಗೌರವ ಸಿಗುತ್ತಿಲ್ಲ: ಜನ್ಮದಿನದಂದೇ ಷಡ್ಕನಿಗೆ ಚಾಕು ಇರಿದು ಹತ್ಯೆಗೆ ಯತ್ನ!

ವಿವಸ್ತ್ರಗೊಳಿಸಿ ಹಲ್ಲೆ

ಸುನೀಲ್‌ ಹಾಗೂ ಆತನ ಕುಟುಂಬದವರು ಮದ್ಯಪಾನ ಚಟಕ್ಕೆ ಬಿದ್ದಿದ್ದು, ಮನೆಯಲ್ಲಿಯೇ ಎಲ್ಲರೂ ಒಟ್ಟಾಗಿ ಮದ್ಯ ಸೇವಿಸುತ್ತಾರೆ. ಇತ್ತೀಚೆಗೆ ಸಂತ್ರಸ್ತೆಯ ಮೂರು ವರ್ಷದ ಮಗುವಿಗೂ ಮದ್ಯ ಕುಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಂತ್ರಸ್ತೆಯನ್ನು(victim) ವಿವಸ್ತ್ರಗೊಳಿಸಿ ಪತಿ ಸುನೀಲ್‌ ಹಾಗೂ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮಾವ ಪಳನಿ ಹಾಗೂ ಬಾವ ಶಾಂತ್‌ಕುಮಾರ್‌ ಸಂತ್ರಸ್ತೆಯ ಗುಪ್ತಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಮಂಚ ಏರುವಂತೆ ಬಲವಂತ ಮಾಡಿದ್ದಾರೆ. ಈ ಬಗ್ಗೆ ಪತಿ ಸುನೀಲ್‌ ಗಮನಕ್ಕೆ ತಂದಾಗ ಸುಮ್ಮನೆ ಹೊಂದಾಣಿಕೆ ಮಾಡಿಕೊಂಡು ಅವರು ಹೇಳಿದಂತೆ ಕೆಲಸ ಮಾಡಿಕೊಂಡಿರು. ಇಲ್ಲವೇ ತವರು ಮನೆಗೆ ಹೋಗು ಎಂದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಮದುವೆಯಾದ ಮಹಿಳೆಯ ಸ್ನಾನದ ವಿಡಿಯೋ ಮಾಡಿಕೊಂಡ ಸಂಬಂಧಿ ಮಾಡಿದ ಕೆಲಸ!

ಮಹಿಳೆಯೊಬ್ಬರು (Woman) ಮಹಾರಾಷ್ಟ್ರದ ಪುಣೆಯ ಹಿಂಜೆವಾಡಿ ಪೊಲೀಸರಿಗೆ  ದೂರು ನೀಡಿದ್ದು, ತನ್ನ 25 ವರ್ಷದ ಸೋದರ ಸಂಬಂಧಿ ಮೇಲೆ ಆರೋಪ ಮಾಡಿದ್ದಾರೆ. ತಾನು ಸ್ನಾನ ಮಾಡುತ್ತಿರುವ ವಿಡಿಯೋವನ್ನು (videro) ಕದ್ದು ಮಾಡಿಕೊಂಡಿರುವ ಸೋದರ ಸಂಬಂಧಿ  ಬ್ಲಾಕ್ ಮೇಲ್ (Blackmail)ಮಾಡಿದ್ದು ಅದನ್ನೇ ಇಟ್ಟುಕೊಂಡು  ಅತ್ಯಾಚಾರ (Rape) ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ತನಗೆ ಸಹಕಾರ ಕೊಡದೇ ಇದ್ದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ಥೇನೆ ಎಂದು ಬೆದರಿಕೆ ಹಾಕಿದ್ದ. ಮಹಿಳೆ ಮೊದಲಿಗೆ ಆತನ ಮಾತಿಗೆ  ಭಯಗೊಂಡಿಲ್ಲ. ಆಕೆಯ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ.  ತನ್ನ ಕಾಮದ ಆಸೆಯನ್ನು ಪೂರೈಸಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ನಿರಂತರ ದೌರ್ಜನ್ಯದಿಂದ ಕಂಗೆಟ್ಟ ಮಹಿಳೆ ಗಂಡನಿಗೆ ಘೋರ ಸಂಗತಿ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. 
 

click me!