ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ಯಾಂಗ್ ರೇಪ್ ಸಂತ್ರಸ್ತೆಗೆ ಬಟ್ಟೆ ಬಿಚ್ಚಲು ಹೇಳಿದ ಜಡ್ಜ್!

By Suvarna News  |  First Published Apr 4, 2024, 4:28 PM IST

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಧೈರ್ಯ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ನ್ಯಾಯಕ್ಕಾಗಿ ಹೋರಾಟ ಆರಂಭಿಸಿದಾಗಲೇ ಆಘಾತ ಎದುರಾಗಿದೆ. ಜಿಲ್ಲಾ ನ್ಯಾಯಾಲಯದ ಜಡ್ಜ್ ಮುಂದೆ ಹೇಳಿಕೆ ದಾಖಲಿಸುವಾಗ ಬಟ್ಟೆ ಬಿಚ್ಚಲು ಹೇಳಿದ ಘಟನೆ ನಡೆದಿದೆ. ಇದೀಗ ಜಡ್ಜ್ ವಿರುದ್ಧ ಪ್ರಕರಣ ದಾಖಲಾಗಿದೆ.
 


ಜೈಪುರ(ಏ.04) ದಲಿತ ಮಹಿಳೆ ಮೇಲೆ ಸಾಮೂಹಿತ ಅತ್ಯಾಚಾರ ನಡೆದಿದೆ. ರಕ್ಕಸ ಕಾಮುಕರು ಆಕೆಯ ಮೇಲೆರಗಿ ಕಾಮ ತೃಷೆ ತೀರಿಸಿಕೊಂಡಿದ್ದಾರೆ. ಹಲ್ಲೆ, ಬೆದರಿಕೆ ಬಳಿಕ ಮಹಿಳೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಮಾನಸಿಕ, ದೈಹಿಕ ಆಘಾತದಲ್ಲಿರುವ ಈ ದಲಿತ ಮಹಿಳೆ ಧೈರ್ಯ ಮಾಡಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾಳೆ. ಆದರೆ ಜಿಲ್ಲಾ ನ್ಯಾಯಾಲಯದ ಜಡ್ಜ್ ಮುಂದೆ ಹೇಳಿಕೆ ದಾಖಲಿಸಲು ತೆರಳಿದ ಮಹಿಳೆಗೆ ಆಘಾತವಾಗಿದೆ. ದೇಹದ ಗಾಯದ ಗುರುತು ಪರಿಶೀಲಿಸಲು ಬಟ್ಟೆ ಬಿಚ್ಚಲು ಹೇಳಿದ ಘಟನೆ ರಾಜಸ್ಥಾನದ ಹಿಂದ್ವಾನ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆದಿದೆ. ಜಡ್ಜ್ ವಿರುದ್ಧ ಸೆಕ್ಷನ್  345ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದ್ವಾನ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ರವೀಂದ್ರ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ. ಸೆಕ್ಷನ್ 345 ಜೊತೆಗೆ ದಲತಿ ದೌರ್ಜನ್ಯ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಮಾರ್ಚ್ 30ರಂದು ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Latest Videos

undefined

ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!

ಹಿಂದ್ವಾನಿ ಸಿಟಿ ಆವರಣದಲ್ಲಿನ ದಲಿತ ಮಹಿಳೆ ಮೇಲೆ ಮಾರ್ಚ್ 30ರ ಸಂಜೆ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕಾಮುಕರು ದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಾರ್ಚ್ 30 ರಾತ್ರಿ ಘಟನೆಯಿಂದ ಕುಗ್ಗಿಹೋದ ದಲಿತ ಮಹಿಳೆ ಕಾಮುಕರಿಗೆ ತಕ್ಕ ಪಾಠ ಕಲಿಸಲು ಧೈರ್ಯ ಮಾಡಿ ದೂರು ದಾಖಲಿಸಿದ್ದಾಳೆ. ಪ್ರಕರಣ ವಿಚಾರಣೆಯೂ ಆರಂಭಗೊಂಡಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಜಡ್ಜ್ ಮುಂದೆ ಮಹಿಳೆಯ ಹೇಳಿಕೆ ದಾಖಲಿಸಲು ಮಹಿಳೆಗ ಸೂಚಿಸಲಾಗಿತ್ತು.

ಜಡ್ಜ್ ಮುಂದೆ ಹೇಳಿಕೆ ದಾಖಲಿಸಿ ಹೊರಬಂದ ಮಹಿಳೆಯನ್ನು ಮತ್ತೆ ಕರೆಸಿಕೊಳ್ಳಲಾಗಿದೆ. ರೇಪ್ ವೇಳೆ ದೇಹದ ಮೇಲೆ ಆಗಿರುವ ಗಾಯವನ್ನು ಪರಿಶೀಲಿಸಬೇಕು ಎಂದ ಜಡ್ಜ್ ಬಟ್ಟೆ ಬಿಚ್ಚಲು ಹೇಳಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ನಾನು ಬಟ್ಟೆ ಬಿಚ್ಚಲು ನಿರಾಕರಿಸಿದೆ. ಮಹಿಳಾ ಸಿಬ್ಬಂದಿಗಳಿದ್ದರೆ ನಾನು ಬಚ್ಚೆ ಬಿಚ್ಚಿ ಗಾಯದ ಗುರುತು ತೋರಿಸುತ್ತಿದ್ದೆ, ಆದರೆ ಜಡ್ಜ್ ಮುಂದೆ ಗಾಯದ ಗುರುತು ತೋರಿಸಲು ನಿರಾಕರಿಸಿದ್ದೇನೆ ಎಂದು ಎಫ್ಐಆರ್‌ನಲ್ಲಿ ಹೇಳಿದ್ದಾರೆ. ಇದೀಗ ಜಡ್ಜ್ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ. 

click me!