ಕೊರೋನಾ ನಿಯಮ ಮೀರಿ ಸರಿಗಮಪ ಫಿನಾಲೆ: ಚಾನಲ್‌ ವಿರುದ್ಧ ಎಫ್‌ಐಆರ್‌ ದಾಖಲು

Published : Dec 22, 2020, 07:51 AM IST
ಕೊರೋನಾ ನಿಯಮ ಮೀರಿ ಸರಿಗಮಪ ಫಿನಾಲೆ: ಚಾನಲ್‌ ವಿರುದ್ಧ ಎಫ್‌ಐಆರ್‌ ದಾಖಲು

ಸಾರಾಂಶ

ಭಾನು​ವಾರ ರಾತ್ರಿ ನಡೆದ​ ಜೀ ಟಿವಿಯ ‘ಸರಿಗ​ಮಪ’ ಫಿನಾಲೆ ಸ್ಪರ್ಧೆ| ಕೇವಲ 100 ಮಂದಿ ಭಾಗ​ವ​ಹಿ​ಸಲು ಮಾತ್ರ ಅನು​ಮತಿ ಪಡೆ​ದು​ಕೊಂಡಿ​ದ್ದ ಆಯೋ​ಜ​ಕರು| ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಂದಿ ಕಾರ್ಯ​ಕ್ರ​ಮ​ದಲ್ಲಿ ಭಾಗಿ​| 

ಬೆಂಗಳೂರು(ಡಿ.22): ಕೊರೋನಾ ನಿಯಮ ಉಲ್ಲಂಘನೆ ಆರೋ​ಪದ ಮೇಲೆ ಕನ್ನ​ಡದ ಖಾಸಗಿ ಮನ​ರಂಜನಾ ವಾಹಿ​ನಿಯ ವಿರುದ್ಧ ಬ್ಯಾಟ​ರಾ​ಯ​ನ​ಪುರ ಪೊಲೀ​ಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮೈಸೂರು ರಸ್ತೆಯ ಬ್ಯಾಟ​ರಾ​ಯ​ನ​ಪುರ ವ್ಯಾಪ್ತಿ​ಯಲ್ಲಿ ಭಾನು​ವಾರ ರಾತ್ರಿ ಕನ್ನ​ಡ​ದ ಖಾಸಗಿ ಮನ​ರಂಜನಾ ವಾಹಿ​ನಿ​ ಜೀ ಟಿವಿಯ ‘ಸರಿಗ​ಮಪ’ ಫಿನಾಲೆ ಸ್ಪರ್ಧೆ ಆಯೋ​ಜಿ​ಸ​ಲಾ​ಗಿತ್ತು. ಈ ವೇಳೆ ಕೇವಲ 100 ಮಂದಿ ಭಾಗ​ವ​ಹಿ​ಸಲು ಮಾತ್ರ ಆಯೋ​ಜ​ಕರು ಅನು​ಮತಿ ಪಡೆ​ದು​ಕೊಂಡಿ​ದ್ದರು. ಆದರೆ, ನೂರಕ್ಕೂ ಅಧಿಕ ಮಂದಿ ಕಾರ್ಯ​ಕ್ರ​ಮ​ದಲ್ಲಿ ಭಾಗಿ​ಯಾ​ಗಿದ್ದರು. ಕೊರೋನಾ ಸಂದರ್ಭದಲ್ಲಿ ಮಾಸ್ಕ್‌ ಧರಿಸದೆ, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ. ಕೊರೋನಾ ನಿಯಮ ಉಲ್ಲಂಘಿ​ಸಿ​ದ್ದಾರೆ.

'ಸರಿಗಮಪ ಸೀಸನ್ 17 ' ವಿಜಯದ ಕಿರೀಟ ಮುಡಿಗೇರಿಸಿಕೊಂಡ ಶ್ರೀನಿಧಿ ಶಾಸ್ತ್ರಿ!

ಈ ಸಂಬಂಧ ಸ್ವಯಂಪ್ರೇ​ರಿ​ತ ದೂರು ದಾಖ​ಲಿ​ಸಿ​ಕೊಂಡು, ಪ್ರಾಥ​ಮಿಕ ವರ​ದಿ​ಯನ್ನು ಸಿದ್ಧಪ​ಡಿಸಿ ಕೋರ್ಟ್‌ಗೆ ಸಲ್ಲಿ​ಸ​ಲಾ​ಗಿದೆ. ಈ ವರದಿಯಾಧ​ರಿಸಿ ಕೋರ್ಟ್‌ ನೀಡುವ ಸೂಚನೆ ಅನ್ವಯ ಮುಂದಿನ ಕ್ರಮ​ ಕೈ​ಗೊ​ಳ್ಳ​ಲಾ​ಗು​ವುದು ಎಂದು ಪೊಲೀ​ಸರು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!