Yadgir: ₹6.16ಕೋಟಿ ಹಣ ದುರ್ಬಳಕೆ: ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಸೇರಿ 19 ಜನರ ವಿರುದ್ಧ ಕೇಸ್

By Kannadaprabha News  |  First Published Apr 11, 2023, 10:46 PM IST

ನಗರದ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ .6.16 ಕೋಟಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ಸೇರಿದಂತೆ 19 ಜನರ ವಿರುದ್ಧ ಅಪರಾಧ ಕಲಂ 420, 463, 464, 468) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.


ಶಹಾಪುರ (ಏ.11) : ನಗರದ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ .6.16 ಕೋಟಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ಸೇರಿದಂತೆ 19 ಜನರ ವಿರುದ್ಧ ಅಪರಾಧ ಕಲಂ 420, 463, 464, 468) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬ್ಯಾಂಕಿನ ಆಡಳಿತ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳದೆ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿ(Krishna pattana Cooperative Bank )ನ ವ್ಯವಸ್ಥಾಪಕ ಚೆನ್ನಬಸಪ್ಪ ಬೆನಕಾ(Chennabasappa benaka) ಹಾಗೂ ಕ್ಯಾಶಿಯರ್‌ ಭೀಮಸಿಂಗ್‌ ರಜಪೂತ(Bheema singh rajputh) ಅವರು ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಆಡಳಿತ ಮಂಡಳಿ ಸಾಚಾ ಎಂದು ತೋರಿಸಿಕೊಳ್ಳಲು ಅಪರಾಧವನ್ನು ಅಮಾಯಕರ ತಲೆ ಮೇಲೆ ಹೊರಿಸಿ ಕೈ ತೊಳೆದುಕೊಂಡಿತ್ತು. ಆದರೆ, ಸತ್ಯ ಮರೆಮಾಚಲು ಸಾಧ್ಯವಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಹೆಸರೇಳಲಿಚ್ಛಿಸದ ಷೇರುದಾರರೊಬ್ಬರು ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಗಂಗಾವತಿ: ಬ್ಯಾಂಕ್ ಹೆಸರಲ್ಲಿ ಕರೆ ಮಾಡಿದವರಿಗೆ ಒಟಿಪಿ ಹೇಳಿದ ಗ್ರಾಹಕ; ಕ್ಷಣಾರ್ಧದಲ್ಲಿ ₹3 ಲಕ್ಷ ರು. ಗೋವಿಂದ!

ವಿಚಾರಣೆ:

ಯಾದಗಿರಿ ಜಿಲ್ಲಾ ಸಹಕಾರ ಸಹಾಯಕ ನೋಂದಣಾಧಿಕಾರಿ ವಿಚಾರಣೆ ನಡೆಸಿ 2020 ಜು.17ರಂದು ವರದಿ ನೀಡಿ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾದ ಉಪನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿರುತ್ತದೆ ಎಂದು ಉಲ್ಲೇಖಿಸಿರುವುದು ಇಲ್ಲಿ ಸ್ಮರಿಸಬಹುದು.

ಲೋಕಾಯುಕ್ತರಿಗೆ ವಂಚನೆ ದೂರು:

ಕೃಷ್ಣ ಪಟ್ಟಣ ಬ್ಯಾಂಕ್‌ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕು. ಆಡಳಿತ ಮಂಡಳಿಗೆ ಪ್ರಮುಖ ರಾಜಕೀಯ ವ್ಯಕ್ತಿಗಳ ಕೃಪಾಕಟಾಕ್ಷ ಇದೆ. ಯಾವ ಕ್ಷಣದಲ್ಲಾದರೂ ತನಿಖೆ ದಾರಿ ತಪ್ಪಿಸುವ ಸಂದರ್ಭಗಳು ಹೆಚ್ಚಿರುವ ಕಾರಣ 2022ರ ಆ.29 ರಂದು ಸಹಕಾರ ಸಂಘಗಳ ಇಲಾಖೆಯ ಪ್ರಿನ್ಸಿಪಲ್‌ ಸೆಕ್ರೆಟರಿ ಹಾಗೂ ಆಡಳಿತ ಮಂಡಳಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ದೂರುದಾರ ಮಾನಪ್ಪ ಹಡಪದ ತಿಳಿಸಿದ್ದಾರೆ.

ಬ್ಯಾಂಕ್‌ 26 ವಷÜರ್‍ದ ಹಿಂದೆ ಸ್ಥಾಪನೆಯಾಗಿದ್ದು, 4086 ಷೇರುದಾರ ಸದಸ್ಯರಿದ್ದಾರೆ. ಯಾದಗಿರಿ ಸಹಕಾರಿ ಸಂಘದ ಉಪ ನಿಬಂಧಕರು ವಿಚಾರಣೆ ನಡೆಯಿಸಿ 2022 ಜು.2ರಂದು ಸಹಕಾರಿ ಸಂಘಗಳ ಜಂಟಿ ನಿಬಂಧಕರು ಬೆಂಗಳೂರು ಅವರಿಗೆ ಸಲ್ಲಿಸಿದ ವಿಚಾರಣೆ ವರದಿಯಲ್ಲಿ 6.16ಕೋಟಿ ಹಣವು ಕೃಷಿ ಭೂಮಿಗೆಹಾಗೂ ಮಾರ್ಚ್‌ ಗೇಜ್‌ ಮಾಡದೆ ಸಿಬ್ಬಂದಿಗಳು ಸಾಲ ಮಂಜೂರು ಮಾಡಿದ್ದು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಣ ದುರ್ಬಳಕೆ ಮಾಡಿಕೊಳ್ಳುವಲ್ಲಿ ಶಾಮೀಲಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

Fraud case: ನಾಲ್ಕು ಜಿಲ್ಲೆಯ ರೈತರಿಗೆ ವಂಚಿಸಿದ ಬ್ಯಾಂಕ್‌ ಮ್ಯಾನೇಜರ್‌ ಸೇರಿ 3 ಮಂದಿ ಸೆರೆ

ಮೇಲಧಿಕಾರಿಗೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಬ್ಯಾಂಕಿನ ಷೇರುದಾರ ಸದಸ್ಯ ಬಸವರಾಜ ಅರುಣಿ ಅವರು ಶಹಾಪುರ ನ್ಯಾಯಾಲಯದಲ್ಲಿ (ಪಿ.ಸಿ.ನಂ.162/2022) ಖಾಸಗಿ ದೂರು ದಾಖಲಿಸಿದ್ದರು.

ಆರೋಪಿತರು:

ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಸವರಾಜ ಹಿರೆಮಠ, ಉಪಾಧ್ಯಕ್ಷ ಚನ್ನಪ್ಪಗೌಡ ಪಾಟೀಲ್‌ ಹಾಗೂ ಬ್ಯಾಂಕಿನ ನಿರ್ದೇಶಕರಾದ Nೕವರಚಂದ ಜೈನ್‌, ಮಾಂಗಿಲಾಲ್‌ ಜೈನ್‌, ಬಸವರಾಜ ಹೇರುಂಡಿ, ಬಸವರಾಜ ಆನೇಗುಂದಿ, ಮಲ್ಲಿಕಾರ್ಜುನ ಮುದನೂರ, ಗೂಳಪ್ಪ ಬಾಳಿ, ಮಲ್ಲಿಕಾರ್ಜುನ ಬುಕಿಷ್ಟಗಾರ, ಶರಣಗೌಡ ಕಟ್ಟಿಮನಿ, ಎಂ.ಡಿ. ಹಸನ, ಮನೋಹರ ಅಲಬನೂರ, ಮಲ್ಲಿಕಾರ್ಜುನ ಯಕ್ಷಿಂತಿ, ವಿಮಲಾ ಕಲಬುರಗಿ, ಕಲಾವತಿ ಬೊನೇರ ಹಾಗೂ ಬ್ಯಾಂಕಿನ (ಅಮಾನತುಗೊಂಡಿರುವ) ವ್ಯವಸ್ಥಾಪಕ ಚನ್ನಬಸಪ್ಪ ಬೆನಕ, ಗುರಲಿಂಗಪ್ಪ ಪಾಟೀಲ್‌, ಭೀಮಸಿಂಗ್‌ ರಜಪೂತ, ಯಂಕಣ್ಣ ಕರಣಗಿ ಆರೋಪಿಗಳಾಗಿದ್ದಾರೆ.

ಇದು ಷೇರುದಾರರ ಮತ್ತು ಸಾರ್ವಜನಿಕರ ಮೇಹನತಿನಿಂದ ದುಡಿದ ಹಣವಾಗಿದೆ. ಸಾರ್ವಜನಿಕರ ಬೆವರಿನ ಹಣ ವಂಚಿಸಿರುವ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು.

- ಹೆಸರೇಳಲಿಚ್ಛಿಸದ ಕೃಷ್ಣ ಪಟ್ಟಣ ಬ್ಯಾಂಕಿನ ಷೇರುದಾರ.

click me!