ಮಳವಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, 10 ಜನರಿಗೆ ಗಂಭೀರ ಗಾಯ

By Sathish Kumar KHFirst Published Apr 11, 2023, 7:02 PM IST
Highlights

ಶಿಂಷಾದ ಮಾರಮ್ಮ ದೇವಸ್ಥಾನ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಳವಳ್ಳಿ ಬಳಿ ಮಹೀಂದ್ರಾ ಶೈಲೋ ಕಾರು -ಬೊಲೊರೊ ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಮಂಡ್ಯ (ಏ.11): ಮಂಡ್ಯ ಜಿಲ್ಲೆಯ ಶಿಂಷಾದ ಮಾರಮ್ಮ ದೇವಸ್ಥಾನ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಳವಳ್ಳಿ ಬಳಿ ಮಹೀಂದ್ರಾ ಶೈಲೋ ಕಾರು -ಬೊಲೊರೊ ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಈ ದುರ್ಘಟನೆಯಲ್ಲಿ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಮಳವಳ್ಳಿಯಲ್ಲಿ ಇಂದು ಸಂಜೆ ಮಹೀಂದ್ರಾ ಶೈಲೋ ಕಾರು -ಬೊಲೊರೊ ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಉಳಿದಂತೆ ಕಾರಿನಲ್ಲಿ ಹಾಗೂ ಬುಲೇರೋದಲ್ಲಿದ್ದ ವಾಹನ ಚಾಲಕ ಸೇರಿದಂತೆ 10ಕ್ಕೂ ಅಧಿಕ ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನು ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇನ್ನು ಬುಲೇರೋ ಸರಕು ಸಾಗಣೆ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ.

Latest Videos

ಬೆಂಗಳೂರು ಮನೆಮುಂದೆ ನಾಯಿ ಗಲೀಜು ಮಾಡಿಸಬೇಡಿ ಎಂದಿದ್ದಕ್ಕೆ ಮಾಲೀಕನನ್ನೇ ಕೊಲೆಗೈದ ಪಾಪಿಗಳು 

ಮನೆ ಮುಟ್ಟುವ ಮೊದಲೇ ಮಸಣ ಸೇರಿದರು: ಈ ಘಟನೆಯಲ್ಲಿ ಮದಲಿಯಮ್ಮ(50), ಜೋಸ್ಮಿನ್ ಮೇರಿ(60) ಮೃತ ಮಹಿಳೆಯರಾಗಿದ್ದಾರೆ. ಇವರು ಕೊಳ್ಳೇಗಾಲ ತಾಲ್ಲೂಕಿನ ಶಿಂಷಾ ಬಳಿಯ ಜಾಗೇರಿ ಗ್ರಾಮದವರು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ‌ಹೆದ್ದಾರಿ 209 ರಲ್ಲಿ ದುರ್ಘಟನೆ ನಡೆದಿದೆ. ಇನ್ನು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಶಿಂಷಾದ ಮಾರಮ್ಮ ದೇವಸ್ಥಾನ ಮುಗಿಸಿ ವಾಪಸ್ಸಾಗುತ್ತಿದ್ದರು. ಆದರೆ, ಈ ಮನೆಯನ್ನು ಮುಟ್ಟುವ ಮೊದಲೇ ಮಸಣವನ್ನು ಸೇರಿದ್ದಾರೆ.

ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಅಪಘಾತ ನಡೆದ ಕೂಡಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್‌ ಮೂಲಕ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ನಂತರ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆ ಮುಂದೆ ನಾಯಿ ಗಲೀಜು ಮಾಡಿಸಬೇಡಿ ಎಂದವನನ್ನೇ ಕೊಂದ ದುಷ್ಕರ್ಮಿಗಳು: ಪ್ರತಿನಿತ್ಯ ಮನೆಯ ಮುಂದೆ ಬಂದು ನಾಯಿಯನ್ನು ಕರೆತಂದು ಮಲ ವಿಸರ್ಜನೆ ಮಾಡಿಸುತ್ತಿದ್ದವರಿಗೆ ಬುದ್ಧಿ ಹೇಳಿದ ಮನೆ ಮಾಲೀಕನನ್ನೇ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ ದುರ್ಘಟನೆ ಬೆಂಗಳೂರಿನ ಸೂಲದೇವನಹಳ್ಳಿಯಲ್ಲಿ ನಡೆದಿದೆ.  ನಾಯಿಗಳನ್ನು ಸಾಕುವುದು ಪ್ರಾಣಿ ಪ್ರಿಯರ ಹವ್ಯಾಸವಾಗಿರುತ್ತದೆ. ಇದಕ್ಕೆ ಯಾರದ್ದೂ ವಿರೋಧವಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ನಾಯಿಗಳ ಮಾಲೀಕರು ರಸ್ತೆ, ಬೀದಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ತಮ್ಮ ನಾಯಿಗಳನ್ನು ಮಲ ವಿಸರ್ಜನೆ ಮಾಡಿಸಿದರೆ ಸಂಬಂಧಪಟ್ಟ ನಾಯಿಗಳ ಮಾಲೀಕರೇ ಅದನ್ನು ಸ್ವಚ್ಛಗೊಳಿಸಬೇಕು ಎಂದು ನಿಯಮವಿದೆ. ಆದರೆ, ಯಾರೊಬ್ಬರೂ ಕೂಡ ಈ ನಿಯಮವನ್ನು ಪಾಲಿಸುವುದಿಲ್ಲ. ಇನ್ನು ಇಲ್ಲೊಬ್ಬ ನಾಯಿ ಸಾಕಿದ ಮಾಲೀಕ ಬೇರೊಬ್ಬರ ಮನೆಮುಂದೆ ಹೋಗಿ ಮಲ ವಿಸರ್ಜನೆ ಮಾಡಿಸುತ್ತಿದ್ದನು. ಇದಕ್ಕಾಗಿ ಅವರನ್ನು ಕರೆದು ಬುದ್ಧಿ ಹೇಳಿದ ವೃದ್ಧನನ್ನೇ ಕೊಲೆಗೈದು ವಿಕೃತಿ ಮೆರೆದಿದ್ದಾರೆ.

ಅಪ್ರಾಪ್ತರ ಲವ್ವಿ-ಡವ್ವಿ, ಪರೀಕ್ಷೆಯೆಂದು ದೂರವಿಟ್ಟ ಪ್ರಿಯತಮೆ, ಸೂಸೈಡ್‌ನಲ್ಲಿ ಪ್ರೀತಿ ಅಂತ್ಯಗೊಳಿಸಿದ ಯುವಕ!

ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ: ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುನಿರಾಜು ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಇದೇ ಘಟನೆಯಲ್ಲಿ ಮತ್ತೊರ್ವ ವ್ಯಕ್ತಿ ಮುರುಳಿ ಎಂಬಾತನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಎಂಬ ಮೂವರು ಮುನಿರಾಜು ಅವರನ್ನು ಕೊಲೆ ಮಾಡಿದ ಅರೋಪಿಗಳಾಗಿದ್ದಾರೆ. ಪ್ರತಿನಿತ್ಯ ಮುನಿರಾಜು ಅವರ ಮನೆಮುಂದೆ ಪ್ರಮೋದ್ ಎಂಬಾತ ತನ್ನ ನಾಯಿ ಕರೆದುಕೊಂಡು ಬರುತ್ತಿದ್ದನು. ಅಲ್ಲಿ ನಾಯಿಯಿಂದ ವಿಸರ್ಜನೆ ಮಾಡಿಸಿ ಗಲೀಜು ಮಾಡಿ ಹೋಗುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದೇ ತಪ್ಪಾಗಿ ಹೋಯಿತು.

click me!