ಬನಶಂಕರಿ ಮೂರನೇ ಹಂತದ ನಿವಾಸಿ ಚಲನಚಿತ್ರ ನಿರ್ಮಾಪಕ ಟಿ.ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಪತ್ನಿ ನಮಿತಾ ಮತ್ತು ಲಕ್ಷ್ಮೇಶ ಪ್ರಭು ಎಂಬುವವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು
ಬೆಂಗಳೂರು(ಜೂ.27): ಮಾದಕ ವ್ಯಸನಿಯಾಗಿರುವ ತನ್ನ ಪತ್ನಿ ಡ್ರಗ್ಸ್ ಪೆಡ್ಲರ್‌ನೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪೆಡ್ಲರ್ ಜತೆಗೆ ಸೇರಿಕೊಂಡು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಚಲನಚಿತ್ರ ನಿರ್ಮಾಪಕರೊಬ್ಬರು ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬನಶಂಕರಿ ಮೂರನೇ ಹಂತದ ನಿವಾಸಿ ಚಲನಚಿತ್ರ ನಿರ್ಮಾಪಕ ಟಿ.ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಪತ್ನಿ ನಮಿತಾ ಮತ್ತು ಲಕ್ಷ್ಮೇಶ ಪ್ರಭು ಎಂಬುವವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿಸಿ ಎಸ್‌ಡಿಎಂ ಮಾಡಿದ ಗಂಡನನ್ನೇ ಜೈಲಿಗಕಿದ್ಲಾ ನ್ಯಾಯಾಧೀಶೆ : ಏನಿದು ಪ್ರಕರಣ?
‘ಎರಡು ವರ್ಷದ ಹಿಂದೆ ನಮಿತಾಳನ್ನು ವಿವಾಹವಾಗಿದ್ದಾನೆ. ನಮಗೆ ಮಕ್ಕಳಿಲ್ಲ. ಪತ್ನಿ ನಮಿತಾ ಮಾದಕ ವ್ಯಸನಿಯಾಗಿದ್ದು, ಇದನ್ನು ಬಿಡಿಸಲು ಸಾಕಷ್ಟುಬಾರಿ ಪ್ರಯತ್ನಿಸಿದ್ದೇನೆ. ಆದರೂ ಆಕೆ ಕದ್ದು ಮುಚ್ಚಿ ಸೇವಿಸುತ್ತಿರುತ್ತಾಳೆ. ಇತ್ತೀಚೆಗೆ ಲಕ್ಷ್ಮೇಶ ಪ್ರಭು ಎಂಬ ಡ್ರಗ್ಸ್ ಪೆಡ್ಲರ್ ಜತೆಗೆ ಸ್ನೇಹ ಬೆಳೆಸಿರುವ ನಮಿತಾ, ಆತನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ. ಎಷ್ಟೇ ಬುದ್ಧಿ ಹೇಳಿದರೂ ಆಕೆ ಆತನೊಂದಿಗೆ ಅನೈತಿಕ ಸಂಬಂಧ ಮುಂದುವರೆಸಿದ್ದಾಳೆ. ಆತನೇ ಈಕೆಗೆ ಮಾದಕವಸ್ತು ಕೊಡುತ್ತಿದ್ದಾನೆ’ ಎಂದು ಚಂದ್ರಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ.
ಲೈಂಗಿಕ ಸಂಪರ್ಕದ ಪ್ರತ್ಯಕ್ಷದರ್ಶಿ ನಾನೇ!
‘ಪತ್ನಿ ನಮಿತಾ ಜೂ.16ರಂದು ಮಧ್ಯಾಹ್ನ 12.30ರ ಸುಮಾರಿಗೆ ಲಕ್ಷ್ಮೇಶ ಪ್ರಭುವನ್ನು ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸುವುದನ್ನು ನಾನೇ ಪ್ರತ್ಯಕ್ಷವಾಗಿ ನೋಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಲಕ್ಷ್ಮೇಶ ಪ್ರಭು ಮತ್ತು ನಮಿತಾ ಇಬ್ಬರೂ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿರುವ ಚಂದ್ರಶೇಖರ್, ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.
‘ಸ್ನೇಹಿತನ ನಗ್ನಗೊಳಿಸಿ ವಿಡಿಯೋ ಮಾಡಿದ್ರು’
ಹಲ್ಲೆ ಹಾಗೂ ಬೆದರಿಕೆ ಆರೋಪದಡಿ ಪತಿ ಚಂದ್ರಶೇಖರ್ ಹಾಗೂ ಆತನ ಸ್ನೇಹಿತರಾದ ಹೇಮಂತ್, ಅರುಣ್ ವಿರುದ್ಧ ನಮಿತಾ ಸಿ.ಕೆ.ಅಚ್ಚುಕಟ್ಟು ಠಾಣೆಗೆ ಪ್ರತಿ ದೂರು ನೀಡಿದ್ದಾರೆ. ‘ಪತಿ ಚಂದ್ರಶೇಖರ್ ಮದುವೆಯಾಗುವಾಗ ಮೊದಲ ಪತ್ನಿಗೆ ಎರಡು ಮಕ್ಕಳಿವೆ. ಆಕೆಗೆ ವಿಚ್ಛೇದನ ನೀಡಿರುವುದಾಗಿ ಪತ್ರ ತೋರಿಸಿದ್ದರು. ಜೂ.16ರಂದು ಮಧ್ಯಾಹ್ನ ನಾನು ಮನೆಯಲ್ಲಿ ಇರುವಾಗ, ಹೊರಗೆ ಕೂಗಾಟದ ಸದ್ದು ಕೇಳಿಸಿತು. ಹೊರಗೆ ಬಂದು ನೋಡಿದಾಗ, ಪತಿ ಚಂದ್ರಶೇಖರ್ ಹಾಗೂ ಆತನ ಸ್ನೇಹಿತರು, ನನ್ನ ಸ್ನೇಹಿತ ಲಕ್ಷ್ಮೇಶ ಪ್ರಭುನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಮುಂದಾದರು. ಲಕ್ಷ್ಮೇಶ ಪ್ರಭು ಜತೆ ನಿನಗೆ ಅಕ್ರಮ ಸಂಬಂಧವಿದೆ.
ಪರಪುರುಷನ ಜೊತೆ ಅನೈತಿಕ ಸಂಬಂಧ, ಪ್ರಿಯಕರನಿಂದಲೇ ಹೆಣವಾದ್ಲು ಪ್ರಿಯತಮೆ!
ನಿನ್ನನ್ನು ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಇದೇ ವೇಳೆ ನನ್ನ ಸ್ನೇಹಿತ ಲಕ್ಷ್ಮೇಶ ಪ್ರಭುವಿನ ಬಟ್ಟೆಬಿಚ್ಚಿಸಿ ವಿಡಿಯೋ ಮಾಡಿಕೊಂಡರು. ಹೀಗಾಗಿ ಪತಿ ಚಂದ್ರಶೇಖರ್ ಹಾಗೂ ಆತನ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಮಿತಾ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪತಿ ಮತ್ತು ಪತ್ನಿಯಿಂದ ದೂರು-ಪ್ರತಿದೂರು ಸ್ವೀಕರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.