ಬೆಂಗಳೂರು: 1.5 ವರ್ಷದಲ್ಲಿ 117 ಕೋಟಿಯ ಡ್ರಗ್ಸ್‌ ಜಪ್ತಿ

Published : Jun 27, 2023, 05:33 AM IST
ಬೆಂಗಳೂರು: 1.5 ವರ್ಷದಲ್ಲಿ 117 ಕೋಟಿಯ ಡ್ರಗ್ಸ್‌ ಜಪ್ತಿ

ಸಾರಾಂಶ

ಬೆಂಗಳೂರು ನಗರದ ಪೊಲೀಸ್‌ ಠಾಣೆಗಳಲ್ಲಿ (2022 ಮತ್ತು 2023ರ ಜೂ.22ರವರೆಗೆ) 6,191 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 7,723 ಮಂದಿ ಭಾರತೀಯರು ಮತ್ತು 159 ಮಂದಿ ವಿದೇಶಿಗರನ್ನು ಬಂಧಿಸಲಾಗಿದೆ. ಈ ಪೈಕಿ 943 ಮಂದಿ ಡ್ರಗ್ಸ್‌ ಪೆಡ್ಲರ್‌ಗಳು ಹಾಗೂ 5,248 ಮಂದಿ ವಿರುದ್ಧ ಮಾದಕವಸ್ತು ಸೇವನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ: ದಯಾನಂದ್‌. 

ಬೆಂಗಳೂರು(ಜೂ.27): ನಗರದ ಪೊಲೀಸ್‌ ಠಾಣೆಗಳಲ್ಲಿ ಕಳೆದ 18 ತಿಂಗಳ ಅವಧಿಯಲ್ಲಿ ಮಾದಕವಸ್ತು ಸೇವನೆ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ಒಟ್ಟು 6,191 ಪ್ರಕರಣಗಳನ್ನು ದಾಖಲಿಸಿ, ಬಂಧಿತರಿಂದ ಸುಮಾರು 117 ಕೋಟಿ ಮೌಲ್ಯದ 6,261 ಕೆ.ಜಿ. ಮಾದಕ ವಸ್ತು ಜಪ್ತಿ ಮಾಡಲಾಗಿದೆ.

‘ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ’ ಪ್ರಯುಕ್ತ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ಬೆಂಗಳೂರು ನಗರದ ಪೊಲೀಸ್‌ ಠಾಣೆಗಳಲ್ಲಿ (2022 ಮತ್ತು 2023ರ ಜೂ.22ರವರೆಗೆ) 6,191 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 7,723 ಮಂದಿ ಭಾರತೀಯರು ಮತ್ತು 159 ಮಂದಿ ವಿದೇಶಿಗರನ್ನು ಬಂಧಿಸಲಾಗಿದೆ. ಈ ಪೈಕಿ 943 ಮಂದಿ ಡ್ರಗ್ಸ್‌ ಪೆಡ್ಲರ್‌ಗಳು ಹಾಗೂ 5,248 ಮಂದಿ ವಿರುದ್ಧ ಮಾದಕವಸ್ತು ಸೇವನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾದಕ ವ್ಯಸನಿ ಯುವಕನನ್ನು ಕೊಲೆ ಮಾಡಿ ದೇವರಮನೆಯಲ್ಲಿ ಎಸೆದ ದುಷ್ಕರ್ಮಿಗಳು

ಬಂಧಿತ ಆರೋಪಿಗಳಿಂದ 6,074 ಕೆ.ಜಿ. ಗಾಂಜಾ, 5 ಕೆ.ಜಿ. ಗಾಂಜಾ ಆಯಿಲ್‌, 2 ಕೆ.ಜಿ. 554 ಗ್ರಾಂ ಬ್ರೌನ್‌ ಶುಗರ್‌, 15 ಕೆ.ಜಿ. 689 ಗ್ರಾಂ ಅಫೀಲು, 52 ಕೆ.ಜಿ. 689 ಗ್ರಾಂ ಎಂಡಿಎಂ, 109 ಕೆ.ಜಿ. 914 ಗ್ರಾಂ ಸಿಂಥೆಟಿಕ್‌ ಡ್ರಗ್‌್ಸ, 3,406 ವಿವಿಧ ರೀತಿಯ ಮಾದಕ ಮಾತ್ರೆಗಳು ಹಾಗೂ 1,372 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು ಸೇರಿದಂತೆ ಒಟ್ಟು 6,261 ಕೆ.ಜಿ. ಮಾದಕವಸ್ತು ಜಪ್ತಿ ಮಾಡಲಾಗಿದೆ ವಿವರಿಸಿದರು.

ಶಾಲಾ-ಕಾಲೇಜುಗಳಲ್ಲಿ ಜಾಗೃತಿ:

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ 388 ಶಾಲೆ, 253 ಕಾಲೇಜು ಮತ್ತು 51 ವೃತ್ತಿನಿರತ ಕಾಲೇಜುಗಳಿಗೆ ಭೇಟಿ ಕೊಟ್ಟು 1.95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದಾರೆ. ಕಳೆದೊಂದು ತಿಂಗಳಿಂದ ಶಿಕ್ಷಣ ಸಂಸ್ಥೆ ಬಳಿ ಮಾದಕ ವಸ್ತು ಮಾರಾಟ, ಸೇವನೆ ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 130 ಪೆಡ್ಲರ್‌ಗಳು ಹಾಗೂ 1,003 ವ್ಯಸನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇದೇ ವೇಳೆ 204 ಕೆ.ಜಿ. ಗಾಂಜಾ, 1.195 ಹೆರಾಯಿನ್‌, 171 ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

‘ಬಿಸಿಪಿ ಎನ್‌ಡಿಪಿಎಸ್‌’ ವೆಬ್‌ಸೈಟ್‌ ಬಿಡುಗಡೆ

ನಗರದಲ್ಲಿ ಮಾದಕವಸ್ತುಗಳ ಮಾರಾಟ ಮತ್ತು ಸಾಗಾಟಕ್ಕೆ ಕಡಿವಾಣ ಹಾಕಲು ನಗರ ಪೊಲೀಸರು, ಡ್ರಗ್‌್ಸ ಪೆಡ್ಲರ್‌ಗಳು ಮತ್ತು ವ್ಯಸನಿಗಳ ಮಾಹಿತಿ ಸಂಗ್ರಹಿಸಲು ‘ಬಿಸಿಪಿ ಎನ್‌ಡಿಪಿಎಸ್‌ ಪೋರ್ಟಲ್‌’ ತಂತ್ರಾಂಶ ಅನಾವರಣ ಮಾಡಿದ್ದಾರೆ. ಪೊಲೀಸ್‌ ಠಾಣೆಗಳಲ್ಲಿ ಪೆಡ್ಲರ್‌ಗಳು, ವ್ಯಸನಿಗಳ ವಿರುದ್ಧ ದಾಖಲಾಗುವ ಪ್ರಕರಣಗಳ ಮಾಹಿತಿ ಈ ತಂತ್ರಾಂಶದಲ್ಲಿ ದಾಖಲಾಗಲಿದೆ. ಪ್ರಕರಣ ದಾಖಲಾದ ಕೂಡಲೇ ಆರೋಪಿ ಹೊಸಬನೇ, ಹಳಬನೇ ಎಂಬುದು ಗೊತ್ತಾಗಲಿದೆ.

ಬೆಂಗಳೂರು: ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಡ್ರಗ್ಸ್‌ ಮಾರಾಟ..!

21 ಕೋಟಿಯ ಡ್ರಗ್ಸ್‌ ನಾಶ

ದಿನಾಚರಣೆ ಅಂಗವಾಗಿ ‘ಡ್ರಗ್ಸ್‌ ಡಿಸ್ಪೋಸಲ್‌ ಕಮಿಟಿ’ಗೆ ಬೆಂಗಳೂರು ನಗರ ಪೊಲೀಸರು ಎನ್‌ಡಿಪಿಎಸ್‌ ಪ್ರರಣಗಳಲ್ಲಿ ಜಪ್ತಿ ಮಾಡಿದ್ದ 2,117 ಕೆ.ಜಿ. ಮಾದಕವಸ್ತುಗಳನ್ನು ಹಸ್ತಾಂತರ ಮಾಡಲಾಗಿದೆ. ಇದರ ಒಟ್ಟು ಮೌಲ್ಯ .21 ಕೋಟಿಗಳಾಗಿದೆ. ನ್ಯಾಯಾಲಯದ ಅನುಮತಿ ಪಡೆದು ವೈಜ್ಞಾನಿಕವಾಗಿ ಭಸ್ಮ ಯಂತ್ರದಲ್ಲಿ ಹಾಕಿ ಮಾದಕ ವಸ್ತು ನಾಶಪಡಿಸಲಾಗಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ದಕ್ಷಿಣ ರಾಜ್ಯಗಳ ಮಾದಕವಸ್ತು ಕಳ್ಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಸಮಾವೇಶದ ಪ್ರಯುಕ್ತ .92 ಕೋಟಿ ಮೌಲ್ಯದ 4,397 ಕೆ.ಜಿ. ಮಾದಕವಸ್ತುಗಳನ್ನು ನಾಶಪಡಿಸಲಾಗಿತ್ತು.

ಇ-ಪ್ರತಿಜ್ಞೆ

ನಗರದಲ್ಲಿ ಮಾದಕವಸ್ತು ಮಾರಾಟ ಮತ್ತು ಕಳ್ಳ ಸಾಗಣೆ ವಿರುದ್ಧ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ ‘ಸೇ ಯಸ್‌ ಟು ಲೈಫ್‌, ನೋ ಟು ಡ್ರಗ್‌್ಸ’ ಧ್ಯೇಯವಾಕ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ಕೋರಲಾಗಿದೆ. ಈ ಕಾರ್ಯಕ್ಕೆ ಸಹಕರಿಸುವ ಸಾರ್ವಜನಿಕರು ಅಂತರ್ಜಾಲದ ಮುಖಾಂತರ https://pledge.cybersapiens.in ನೋಂದಣಿ ಮಾಡಿಕೊಂಡು ಪ್ರಮಾಣ ಪತ್ರ ಪಡೆಯಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!