ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಿಂದಲೇ ವಿದ್ಯಾರ್ಥಿನಿಯ ಕಿಡ್ನಾಪ್‌, ತಾಯಿಯಿಂದಲೇ ಕೃತ್ಯ!

Published : Sep 08, 2023, 01:32 PM IST
ದಾವಣಗೆರೆ ವಿಶ್ವವಿದ್ಯಾನಿಲಯದ  ಆವರಣದಿಂದಲೇ ವಿದ್ಯಾರ್ಥಿನಿಯ ಕಿಡ್ನಾಪ್‌, ತಾಯಿಯಿಂದಲೇ ಕೃತ್ಯ!

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯದ  ಆವರಣದಿಂದಲೇ ವಿದ್ಯಾರ್ಥಿನಿಯೊಬ್ಬಳನ್ನು ಕಿಡ್ನಾಪ್  ಮಾಡಲು ಯತ್ನ ನಡೆದಿದೆ. ತಾಯಿಯೇ ಕೃತ್ಯ ಎಸಗಿದ ವಿಡಿಯೋ ವೈರಲ್ ಆಗಿದೆ.

ದಾವಣಗೆರೆ (ಸೆ.8): ದಾವಣಗೆರೆ ವಿಶ್ವವಿದ್ಯಾನಿಲಯದ  ಆವರಣದಿಂದಲೇ ವಿದ್ಯಾರ್ಥಿನಿಯೊಬ್ಬಳನ್ನು ಕಿಡ್ನಾಪ್  ಮಾಡಲು ತಾಯಿಯೇ ಕೃತ್ಯ ಎಸಗಿದ ವಿಡಿಯೋ ವೈರಲ್ ಆಗಿದೆ. ತಾಯಿ ಮತ್ತು ಇಬ್ಬರು ಯುವಕರು ಸೇರಿ ಸಿನಿಮಿಯ  ಮಾದರಿಯಲ್ಲಿ  ಕಾರಿನಲ್ಲಿ ಕಿಡ್ನಾಪ್ ಮಾಡಲು ಮುಂದಾಗಿದ್ದು, ರಕ್ಷಣೆಗಾಗಿ  ಯುವತಿ ಚೀರಾಡಿದ್ದಾಳೆ. ಈ ವೇಳೆ ತಕ್ಷಣ ವಿವಿ ವಿದ್ಯಾರ್ಥಿಗಳು ಹಾಗೂ  ಅಧ್ಯಾಪಕ ವರ್ಗ ಸ್ಥಳಕ್ಕೆ ಓಡಿ ಬಂದು  ಕಾರ್ ಗೆ ಅಡ್ಡಲಾಗಿ ನಿಂತು ಯುವತಿಯ ರಕ್ಷಣೆ ಮಾಡಿದೆ. 

ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಿಗ್ EXCLUSIVE ಸುದ್ದಿ: ಬಿಟ್ ಕಾಯಿನ್ ಹಗರಣ..ಶ್ರೀಕಿಗೆ ಕೃಪಾಕಟಾಕ್ಷ..?

ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಇರುವ ದಾವಣಗೆರೆ ವಿಶ್ವವಿದ್ಯಾಲಯದ ಮುಂದೆ ಘಟನೆ ನಡೆದಿದ್ದು, ಬಳ್ಳಾರಿ ಮೂಲದ ಯುವತಿ ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿದ್ದಾಳೆ. ಅಪಹರಣದ ಬಗ್ಗೆ ಹೇಳಿಕೆ ಪಡೆದು ಯುವತಿಯನ್ನು  ದಾವಣಗೆರೆ   ಗ್ರಾಮಾಂತರ ಠಾಣೆ ಪೊಲೀಸರು ಮತ್ತೆ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ.

ಯುವತಿಗೆ ಬಾಲ್ಯವಿವಾಹ ಮಾಡಿಸಿದ್ದ ಪೋಷಕರು, ಮದುವೆಯಾದವನಿಗೆ ಅಫೇರ್:
ಈ ಅಪಹರಣಕ್ಕೆ ಕೌಟುಂಬಿಕ ಸಮಸ್ಯೆ ಕಾರಣ ಎಂದು  ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಾಲ್ಯವಿವಾಹವಾಗಿತ್ತು ಅದು ನನಗೆ ಇಷ್ಟವಿಲ್ಲ. ಅವನ ಜೊತೆ ನನಗೆ ಬಾಳಲು ಮನಸ್ಸಿಲ್ಲ. ಮಾತ್ರವಲ್ಲ ನನ್ನನ್ನು ಮದುವೆಯಾಗಿರುವವನು ಬೇರೆಯವರ ಜೊತೆ ಅಪೇರ್ ಇಟ್ಟುಕೊಂಡಿದ್ದಾನೆ. ಈ ಬಗ್ಗೆ ನನ್ನ ಪೋನ್‌ನಲ್ಲಿ ಎಲ್ಲಾ ಡಿಟೆಲ್ಸ್ ಇದೆ. ನನ್ನ ಪೋಷಕರು ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ. ಅದರಲ್ಲಿ ಎಲ್ಲಾ ಡಿಟೆಲ್ಸ್ ಇದೆ.  ಎಂದು ಯುವತಿ ಹೇಳಿಕೆ ನೀಡಿದ್ದಾಳೆ.

ನಿವೃತ್ತ ಯೋಧನ ಕತ್ತು ಸೀಳಿ ಕೊಲೆ: ತಂಗಿಯ ಅರಿಶಿಣ, ಕುಂಕುಮ ಅಳಿಸಿದ ಅಣ್ಣ..!

ದಾವಣಗೆರೆ ಗ್ರಾಮಾಂತರ ಪೊಲೀಸರ ಮಧ್ಯಸ್ಥಿಕೆ ನಡೆದು  ಮತ್ತೆ ಯುವತಿ ವಿಶ್ವವಿದ್ಯಾಲಯದ ಹಾಸ್ಟಲ್ ಗೆ ತೆರಳಿದ್ದಾಳೆ. ಠಾಣೆಯಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಪೋಷಕರ ಜೊತೆ ಹೋಗಲು ಯುವತಿ ಒಪ್ಪಲಿಲ್ಲ. ಮಾತ್ರವಲ್ಲ ಯುವತಿಯನ್ನು  ಮದುವೆಯಾಗಿರುವವನು ಬೇರೊಬ್ಬರ  ಜೊತೆ ಅಪೇರ್ ಇದೆ ಎಂದು ಯುವತಿಯ ದೂರು  ಕೂಡ ಕೊಟ್ಟಿದ್ದಾಳೆ. ನನ್ನ ಪೋನ್‌ನಲ್ಲಿ ಎಲ್ಲಾ ಡಿಟೆಲ್ಸ್ ಇದೆ. ಪೋನ್ ಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದಾಳೆ. ನಡೆದ ಘಟನೆಯನ್ನೆಲ್ಲಾ ವಿವರಿಸಿ ಪೋಷಕರ ಜೊತೆ ಹೋಗಲು ನಿರಾಕರಿಸಿದ ಕಾರಣ ದಾವಣಗೆರೆ ಗ್ರಾಮಾಂತರ ಪೊಲೀಸರ ಮಧ್ಯಸ್ಥಿಕೆಯಿಂದ ಮತ್ತೆ ಯುವತಿ ವಿಶ್ವವಿದ್ಯಾಲಯದ ಹಾಸ್ಟಲ್ ಗೆ ತೆರಳಿದ್ಧಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ