ಕೇರಳದ ಒಂದು ಮೊಟ್ಟೆಯ ಕಥೆ: ಕೂದಲು ಬರಲಿಲ್ಲವೆಂದು ವೈದ್ಯನ ಹೆಸರು ಬರೆದಿಟ್ಟು ಸೂಸೈಡ್‌..!

Published : Nov 08, 2022, 07:37 PM IST
ಕೇರಳದ ಒಂದು ಮೊಟ್ಟೆಯ ಕಥೆ: ಕೂದಲು ಬರಲಿಲ್ಲವೆಂದು ವೈದ್ಯನ ಹೆಸರು ಬರೆದಿಟ್ಟು ಸೂಸೈಡ್‌..!

ಸಾರಾಂಶ

ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೂ ತನ್ನ ಕಣ್ಣಿನ ಹುಬ್ಬಿನ ಕೂದಲು ಸಹ ಕಡಿಮೆಯಾಗುತ್ತಿತ್ತು. ಇದರಿಂದ ತನ್ನನ್ನು ಮದುವೆಯಾಗಲು ಸಹ ಯಾರೂ ಮುಂದಾಗುತ್ತಿಲ್ಲ. ಈ ಹಿನ್ನೆಲೆ ಬೇಸತ್ತು ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದೂ ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರಶಾಂತ್‌ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾನೆ. 

ಕೂದಲು ಉದುರುವಿಕೆ ಸಮಸ್ಯೆ (Hair Fall Problem) ಹಲವರಿಗೆ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಇತ್ತೀಚಿನ ಯುವ ವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಯಾವ ಔಷಧಿ (Medicines), ಚಿಕಿತ್ಸೆ (Treatment) ತೆಗೆದುಕೊಂಡರೂ ಸಮಸ್ಯೆ ನಿವಾರಣೆಯಾಗ್ತಿಲ್ಲ ಅನ್ನೋ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇದೇ ರೀತಿ, ಕೇರಳದ ಕೋಯಿಕ್ಕೋಡ್‌ನಲ್ಲಿ ಕೂದಲು ಉದುರುವಿಕೆ ಸಮಸ್ಯೆಗೆ ಬೇಸತ್ತ ಯುವಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಉಳಿಯೇರಿ ಬಳಿಯ ಮನೆಯಲ್ಲಿ ಪ್ರಭಾಕರನ್‌ ಅವರ ಪುತ್ರ ಪ್ರಶಾಂತ್‌ ನೇಣು (Hanging) ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

ಬಹಳ ಸಮಯದಿಂದ ಔಷಧಿ ಸೇವಿಸಿದರೂ ಹುಬ್ಬು ಸೇರಿ ದೇಹದ ಇತರೆ ಭಾಗದಲ್ಲಿ ಕೂದಲು ಉದುರಿದ ಹಿನ್ನೆಲೆಯಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್‌ ನೋಟ್‌ನಲ್ಲಿ ತನಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧವೇ ಆತ ದೂಷಿಸಿದ್ದಾನೆ. ಕೋಯಿಕ್ಕೋಡ್ ನಿವಾಸಿ ಪ್ರಶಾಂತ್ ತನ್ನ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. 

ಇದನ್ನು ಓದಿ: ಶಾಕಿಂಗ್! ಸ್ಮೋಕ್ ಮಾಡೋದ್ರಿಂದ ಹೀಗೂ ಆಗುತ್ತಾ?

ತನ್ನ ಸಾವಿಗೆ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಎಂದು ಪ್ರಶಾಂತ್‌ ಹೇಳಿದ್ದಾನೆ. ಈ ಸಮಸ್ಯೆಯಿಂದ ತಾನು ಮನೆಯಿಂದ ಹೊರಬರಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಶಾಂತ್ ಅವರು 2014 ರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಂಡರೂ ಹುಬ್ಬುಗಳು ಮತ್ತು ಮೂಗಿನೊಳಗಿನ ಕೂದಲನ್ನು ಕಳೆದುಕೊಂಡರು. ಕೂದಲು ಉದುರುವುದು ನಿಲ್ಲುತ್ತದೆ ಎಂಬ ಭರವಸೆಯಿಂದ ಅವರು 2020 ರವರೆಗೆ ಅಂದರೆ 6 ವರ್ಷಗಳ ಕಾಲ ಔಷಧಿಗಳನ್ನು ತೆಗೆದುಕೊಂಡ ಎಂದು ತಿಳಿದುಬಂದಿದೆ.

ಆದರೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೂ ತನ್ನ ಕಣ್ಣಿನ ಹುಬ್ಬಿನ ಕೂದಲು ಸಹ ಕಡಿಮೆಯಾಗುತ್ತಿತ್ತು. ಇದರಿಂದ ತನ್ನನ್ನು ಮದುವೆಯಾಗಲು ಸಹ ಯಾರೂ ಮುಂದಾಗುತ್ತಿಲ್ಲ. ಈ ಹಿನ್ನೆಲೆ ಬೇಸತ್ತು ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದೂ ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರಶಾಂತ್‌ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾನೆ. 

ಇದನ್ನೂ ಓದಿ: ರೇಷ್ಮೆಯಂಥ ಕೂದಲು ನಿಮ್ಮದಾಗಬೇಕಾ? ಈ tips ಫಾಲೋ ಮಾಡಿ

ಪ್ರಶಾಂತ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ರಫೀಕ್ ವಿರುದ್ಧ ಅಥೋಲಿ ಪೊಲೀಸರಿಗೆ ದೂರು ನೀಡಿದ್ದರೂ, ತನಿಖೆಯಿಂದ ತಾವು ತೃಪ್ತರಾಗಿಲ್ಲ ಎಂದು ಪ್ರಶಾಂತ್ ಕುಟುಂಬಸ್ಥರು ಹೇಳಿದ್ದಾರೆ. ಹಾಗೂ, ಪೆರಂಬ್ರಾ ಎಎಸ್‌ಪಿಗೂ ದೂರು ನೀಡಿದ್ದಾಗಿಯೂ ಕುಟುಂಬಸ್ಥರು ತಿಳಿಸಿದ್ದಾರೆ. 

ಈ ನಡುವೆ, ಮೇಲ್ನೋಟಕ್ಕೆ ಯಾವುದೇ ಅಪರಾಧ ಪತ್ತೆಯಾಗಿಲ್ಲ ಎಂದು ಅಥೋಲಿ ಎಸ್‌ಐ ತಿಳಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ. ಅಲ್ಲದೆ,, ನಾವು ವೈದ್ಯರನ್ನು ವಿಚಾರಣೆ ನಡೆಸಿದ್ದು, ಆದರೆ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಹಾಗೂ, ಪೋಸ್ಟ್‌ಮಾರ್ಟಂ ವರದಿಗಾಗಿ ನಾವಿನ್ನೂ ಕಾಯುತ್ತಿದ್ದೇವೆ ಎಂದೂ ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ಮೊಟ್ಟೆ ಮಾತ್ರವಲ್ಲ, ಅದರ ಸಿಪ್ಪೆಗಳಲ್ಲಡಗಿದೆ ಆರೋಗ್ಯ…. ಕೂದಲಿಗೆ ಬೆಸ್ಟ್

ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪ್ರಶಾಂತ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಆತ ವಿಚಿತ್ರವಾದ ಸ್ಥಿತಿಯಿಂದ ಬಳಲುತ್ತಿದ್ದ ಮತ್ತು ಸರಿಯಾದ ಚಿಕಿತ್ಸೆಯನ್ನೇ ನೀಡಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. 

ಇದನ್ನೂ ಓದಿ: Hair Health : ಕೂದಲು ಉದುರಲು ಅತಿಯಾದ ಹಸ್ತಮೈಥುನವೂ ಒಂದು ಕಾರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ