ವೇಣುಗೋಪಾಲ್ ತನ್ನ ವ್ಯವಹಾರದಲ್ಲಿ ನಷ್ಟವನ್ನುಂಟುಮಾಡುತ್ತಿದ್ದ ದುಷ್ಟ ಶಕ್ತಿಗಳನ್ನು ಓಡಿಸಲು ತನ್ನ 3 ವರ್ಷದ ಮಗಳ ಮೇಲೆ ವಾಮಾಚಾರ ನಡೆಸಿದ್ದಾನೆ. ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆ.
ಆಂಧ್ರಪ್ರದೇಶ (ಜೂ. 17): ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಮೇಲೆ ವಾಮಾಚಾರ (Black Magic) ನಡೆಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದು, ಇದರಿಂದಾಗಿ ಮಗು ಸಾವನ್ನಪ್ಪಿದೆ. ಪೋಲೀಸರ ಪ್ರಕಾರ, ತಂದೆ ವೇಣುಗೋಪಾಲ್ ತನ್ನ ವ್ಯಾಪಾರದಲ್ಲಿ ನಷ್ಟಕ್ಕೆ ಕಾರಣವಾದ ದುಷ್ಟಶಕ್ತಿಗಳನ್ನು ಓಡಿಸಲು ಪೆರಾರೆಡ್ಡಿಪಲ್ಲಿ ಗ್ರಾಮದ ತನ್ನ ಮನೆಯಲ್ಲಿ ಮಗಳ ಮೇಲೆ ವಾಮಾಚಾರ ನಡೆಸುತ್ತಿದ್ದನು ಎನ್ನಲಾಗಿದೆ.
ವೇಣುಗೋಪಾಲ್ ತಮ್ಮ ಮಗಳ ಮೇಲೆ ವಾಮಾಚಾರದ ಭಾಗವಾಗಿ ಅರಿಶಿನ ನೀರನ್ನು ಸುರಿದಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಮಗುವಿನ ಬಾಯಿಗೆ ಕುಂಕುಮ ತುಂಬಿ ಉಸಿರುಗಟ್ಟಿಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ ವೇಣುಗೋಪಾಲ್ ತನ್ನ ಕೈಯಿಂದಲೇ ಮಗುವಿನ ಕತ್ತು ಹಿಸುಕಿ ಕೊಂದಿದ್ದಾನೆ. ಇದನ್ನು ಅರಿತ ವೇಣುಗೋಪಾಲ್ ಅವರ ಹಿರಿಯ ಮಗಳು ಅಳುತ್ತಾ ಮನೆಯಿಂದ ಹೊರ ಬಂದಿದ್ದಾಳೆ. ಇದರಿಂದ ಎಚ್ಚೆತ್ತ ನೆರೆಹೊರೆಯವರು ಕಿರಿಯ ಮಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ, ಆಕೆಯನ್ನು ಚೆನ್ನೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು, ಆದರೆ ಅವಳು ಜೂನ್ 16 ರಂದು ಗುರುವಾರ ಬೆಳಿಗ್ಗೆ ಮೃತಳಾಗಿದ್ದಾಳೆ.
ಇದನ್ನೂ ಓದಿ: ಹೊತ್ತು ಊಟಕ್ಕಾಗಿ ಮೃತ ಸಹೋದರನನ್ನು ಕೊಂದೆ ಎಂದ ನಿರುದ್ಯೋಗಿ ತಮ್ಮ
ಆತ್ಮಕೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶಿವಶಂಕರ್ ಮಾತನಾಡಿ, ‘ಪ್ರಾಥಮಿಕ ತನಿಖೆಯಲ್ಲಿ ಈ ಘಟನೆಯಲ್ಲಿ ಯಾವುದೇ ದೇವಮಾನವನ ಪಾತ್ರ ಕಂಡುಬಂದಿಲ್ಲ, ತಂದೆ ಶನಿ ಗ್ರಹ ಚೆನ್ನಾಗಿಲ್ಲ ಎಂದು ಮನೆಯವರಿಗೆ ಹೇಳುತ್ತಿದ್ದರು. ಘಟನೆಯ ನಡೆದ ದಿನ ಕೂಡ ಅವರು ಅದೇ ಸಾಲನ್ನು ಮನೆಯವರಿಗೆ ಹೇಳಿದ್ದಾರೆ ಮತ್ತು ನಂತರ 'ಶನಿ'ಯನ್ನು ತೊಡೆದುಹಾಕಲು ಈ ರೀತಿ ಮಾಡಲು ಮಾಡಲು ನಿರ್ಧರಿಸಿದರು" ಎಂದು ಹೇಳಿದ್ದಾರೆ.
ಮಗುವಿನ ಸಾವಿನ ನಂತರ, ತಂದೆ ವೇಣುಗೋಪಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇಟ್ಟಿಗೆ ಮಾರಾಟದ ವ್ಯವಹಾರದಲ್ಲಿದ್ದ ವೇಣುಗೋಪಾಲ್ ವ್ಯಾಪರದಲ್ಲಿ ನಷ್ಟವನ್ನು ಅನುಭವಿಸಿದ್ದರು, ಇದು 'ದುಷ್ಟ ಶಕ್ತಿಗಳಿಂದ್ದಲೇ' ಸಂಭವಿಸಿದ್ದು ಎಂದು ಅವರು ನಂಬಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮದುವೆಗೆ ಅಡ್ಡಿಯಾದ ಕುಜದೋಷ: ವಿಷ ಸೇವಿಸಿದ್ದ ಮಹಿಳಾ ಪೇದೆ ಸಾವು!
ಆದ್ದರಿಂದ, ಅವರು ತಮ್ಮ 3 ವರ್ಷದ ಮಗಳ ಮೇಲೆ ವಾಮಾಚಾರ ಮಾಡಿ, ಇದು 'ದುಷ್ಟ ಶಕ್ತಿಗಳನ್ನು' ಓಡಿಸುತ್ತದೆ ಎಂದು ನಂಬಿದ್ದರು. ಆದರೆ ವಾಮಾಚಾರಕ್ಕೊಳಗಾದ ಮಗಳು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೇಣುಗೋಪಾಲ್‌ನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.