Bengaluru crime : ಕೈಕಾಲು ಸ್ವಾಧೀನವಿಲ್ಲದ ಪತ್ನಿಯನ್ನು ಕೊಂದ ಪತಿ

By Sathish Kumar KHFirst Published Dec 5, 2022, 12:30 PM IST
Highlights

ಕಳೆದ ಎರಡು ವರ್ಷಗಳಿಂದ ಸ್ವಾಧೀನವಿಲ್ಲದೇ ಕುಳಿತಲ್ಲಿಯೇ ಕುಳಿತುಕೊಂಡು ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದ ಹೆಂಡತಿಯ ಚಾಕರಿಯನ್ನು ಮಾಡುತ್ತಿದ್ದ ಗಂಡ, ಕೊನೆಗೆ ಬೇಸತ್ತು ಹೆಂಡತಿಯಲ್ಲಿ ಸಂಪ್‌ಗೆ ತಳ್ಳಿ ಕೊಲೆ ಮಾಡಿದ ಘಟನೆ ರಾಜಧಾನಿಯ ತಲಘಟ್ಟಪುರದಲ್ಲಿ ನಡೆದಿದೆ.

ಬೆಂಗಳೂರು (ಡಿ.5): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಕೊಲೆ ಪ್ರಕರಣಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ಕೈ-ಕಾಲುಗಳ ಸ್ವಾಧೀನ ಕಳೆದುಕೊಂಡು ಬಳಲುತ್ತಿದ್ದ ಹೆಂಡತಿಯನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಂಪ್‌ಗೆ ತಳ್ಳಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ತಲಘಟ್ಟಪುರ ಪೊಲೀಸ ಠಾಣೆಯಲ್ಲಿ ವ್ಯಾಪ್ತಿಯಲ್ಲಿಉ ನಡೆದಿದೆ.

ಶಿವಮ್ಮ (50) ಕೈ-ಕಾಲುಗಳು ಸ್ವಾಧೀನವಿಲ್ಲದೆ ಬಳಲುತ್ತಿದ್ದ ಹಾಗೂ ಕೊಲೆಗೀಡಾದ ಮಹಿಳೆಯಾಗಿದ್ದಾಳೆ. ಅವಳ ಗಂಡ ಶಂಕರಪ್ಪನಿಗೆ 60 ವರ್ಷವಾಗಿದ್ದು ವಾಚ್‌ಮ್ಯಾನ್‌ ಕೆಲಸ ಮಾಡುತ್ತಿದ್ದನು. ಆದರೆ, ತನ್ನ ಹೆಂಡತಿ ಎರಡು ವರ್ಷದ ಹಿಂದೆ ಕೈ-ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು, ಕುಳಿತಲ್ಲಿಯೇ ಕುಳಿತುಕೊಳ್ಳುತ್ತಿದ್ದಳು. ಅವರಿಗೆ ಊಟ ಮಾಡಿಸುವುದು, ಎಲ್ಲ ದಿನನಿತ್ಯ ಕಾರ್ಯಗಳನ್ನು ಮಾಡಿಸುವುದು ಹಾಗೂ ಅವರ ಕಾಳಜಿಯನ್ನು ಗಂಡನೇ ಮಾಡುತ್ತಿದ್ದರು. ಪ್ರತಿನಿತ್ಯ ದುಡಿಮೆಯ ಜೊತೆಗೆ ತನ್ನ ಪತ್ನಿಯನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಶಂಕರಪ್ಪನಿಗೆ ಬೇಸರ ಉಂಟಾಗಿತ್ತು. ಪ್ರತಿನಿತ್ಯ ಪತ್ನಿಯ ಸೇವೆ ಮಾಡಿ ಬೇಸತ್ತಿದ್ದ ಪತಿ ನಿನ್ನೆ ಮಧ್ಯಾಹ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

Crime news : ಪತ್ನಿ ಕೊಲೆ ಮಾಡಲು ಯತ್ನಿಸಿದ್ದ ಪತಿಗೆ 10 ವರ್ಷ ಕಠಿಣ ಶಿಕ್ಷೆ

ಬೆಳಗ್ಗೆ ಪ್ರಕರಣ ಪತ್ತೆ: ಪ್ರತಿನಿತ್ಯದಂತೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಆಗಮಿಸುತ್ತಿದ್ದ ಕಾರ್ಮಿಕರು ಬಂದು ನೋಡಿದಾಗ ಶಂಕರಪ್ಪನ ಪತ್ನಿಯ ಮೃತದೇಹ ಪತ್ತೆಯಾಗಿದೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಅವರು ವಿಚಾರಣೆ ನಡೆಸಿದಾಗ ಪತ್ನಿಯನ್ನು ತಾನೇ ಸಂಪ್‌ಗೆ ತಳ್ಳಿರುವುದಾಗಿ ಶಂಕರಪ್ಪ ಹೇಳಿದ್ದಾನೆ. ತನ್ನ ಪತ್ನಿ ಕುಳಿತಲ್ಲೇ ಕುಳಿತಿರುತ್ತಿದ್ದಳು. ಅವರ ಕಾಳಜಿಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ತಿಳಿಸಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. 

click me!