ಮಂಡ್ಯ ಜಿಲ್ಲೆಯಲ್ಲಿ ಗಂಡ ಹೆಂಡತಿಯ ಜಗಳದಲ್ಲಿ ತಂದೆಯೇ ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಂಡ್ಯ (ಜೂ.22): ಮನೆಯಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯನ್ನು ಕೇಳಿದ್ದೇವೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಗಂಡ ಹೆಂಡತಿಯ ಜಗಳದಲ್ಲಿ ತಂದೆಯೇ ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಇಬ್ಬರು ಮಕ್ಕಳನ್ನು ಕೊಂದು, ಪತ್ನಿ ಮೇಲೂ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಲಗಾಲ ಗ್ರಾಮದಲ್ಲಿ ನಡೆದಿದೆ. ಮರಲಗಾಲ ಗ್ರಾಮದ ಬಳಿಯ ಫಾರ್ಮ್ ಹೌಸ್‌ನಲ್ಲಿ ವಾಸವಿದ್ದ ಕುಟುಂಬದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡಲು ಇಟ್ಟುಕೊಂಡಿದ್ದ ಸುತ್ತಿಗೆಯಿಂದ ಪುಟ್ಟ ಕಂದಮ್ಮಗಳನ್ನ ಅಪ್ಪನೇ ಕೊಲೆ ಮಾಡಿದ್ದಾನೆ.
undefined
ಹೋಮ್ ವರ್ಕ್ ಮಾಡಿಸದ ಗಂಡನ ಮೇಲಿನ ಕೋಪಕ್ಕೆ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ
ಗುಲ್ಬರ್ಗಾ ಮೂಲದ ಕುಟುಂಬ: ಆದರ್ಶ (4) ಮತ್ತು ಅಮೂಲ್ಯ (2) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳು. ಗುಲ್ಬರ್ಗ ಮೂಲದ ಶ್ರೀಕಾಂತ್ (29) ಮಕ್ಕಳನ್ನ ಕೊಂದು ಪತ್ನಿ ಕೊಲೆಗೂ ಯತ್ನಿಸಿರುವ ಪಾಪಿಯಾಗಿದ್ದಾನೆ. ಕೌಟುಂಬಿಕ ಕಲಹದಿಂದ ಮೊದಲು ಪತ್ನಿ ಲಕ್ಷ್ಮಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಸುತ್ತಿಗೆ ಏಟು ಬಿದ್ದ ತಕ್ಷಣ ಲಕ್ಷ್ಮೀ ಮೂರ್ಛೆ ಹೋಗಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಮಕ್ಕಳಿಗೆ ಅದೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಮಕ್ಕಳು ಸ್ಥಳದಲ್ಲಿಯೇ ರಕ್ತಕಾರಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ:
ಕೋಲಾರ: ಮತ್ತೊಂದೆಡೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಮಕ್ಕಳಿಗೆ ಗಂಡ ಶಾಲೆಯಲ್ಲಿ ಕೊಟ್ಟಿದ್ದ ಹೋಮ್ ವರ್ಕ್ ಮಾಡಿಸಿಲ್ಲವೆಂದು ಕೋಪಗೊಂಡ ಹೆಂಡತಿ, ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದ ಘಟನೆ ನಡೆದಿತ್ತು, ಇದಾದ ಎರಡೇ ದಿನದಲ್ಲಿ ಈಗ ಮಂಡ್ಯದಲ್ಲಿ ಮಕ್ಕಳನ್ನು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಮೃತರನ್ನು ಇಬ್ಬರು ತಾಯಿ ಸುಗುಣ (26), ಮಕ್ಕಳಾದ ಪ್ರೀತಂಗೌಡ (9) ಹಾಗೂ ನಿಶಿತಾಗೌಡ (6) ಸಾವಿಗೆ ಶರಣಾಗಿದ್ದಾರೆ.
ಶಾಲಾ ಬಾಲಕಿಯ ಮೈ ಮುಟ್ಟಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು
ಸಾರಿಗೆ ಸಂಸ್ಥೆಯಲ್ಲಿ ನೌಕರಿ: ಸರ್ಕಾರಿ ಸಾರಿಗೆ ಸಂಸ್ಥೆ ಕೋಲಾರದಲ್ಲಿ ಪತಿ ಮುರಳಿ ಸೆಕ್ಯೂರಿಟಿ ಗಾರ್ಡ್ ಹಾಗೂ ಪತ್ನಿ ಸುಗುಣ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. 13 ವರ್ಷಗಳ ಹಿಂದೆ ಉಪ್ಪುಕುಂಟೆ ಗ್ರಾಮದ ಮುರಳಿಯನ್ನ ಗಿರನಹಳ್ಳಿಯ ಸುಗುಣ ವಿವಾಹವಾಗಿದ್ದರು. ಅನೋನ್ಯವಾಗಿಯೇ ಇದ್ದವರ ಮಧ್ಯೆ ಆಗಾಗ ಸಣ್ಣ ಪುಟ್ಟ ಗಲಾಟೆ, ಮನಸ್ತಾಪಗಳು ಇತ್ತು. ಹಿರಿಯರು ಹಲವು ಬಾರಿ ಸರಿಮಾಡಿಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು. ಆದರೆ ನಿನ್ನೆ ಅದೇನಾಯ್ತೋ ಗೊತ್ತಿಲ್ಲ ಡೆತ್ ನೋಟ್ ಬರೆದಿಟ್ಟು ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬ ಕಲಹದ ಕಾರಣ (ಮಕ್ಕಳಿಗೆ ಗಂಡ ಶಾಲಾ ಹೋಮ್‌ವರ್ಕ್ ಮಾಡಿಸಿಲ್ಲವೆಂದು ಜಗಳ ಮಾಡಿದ ಮಹಿಳೆ) ಪತಿಯೊಂದಿಗೆ ಗಲಾಟೆ ಮಾಡಿಕೊಂಡ ಪತ್ನಿ ಡೆತ್ ನೋಟ್ ಬರೆದಿಟ್ಟು ತನ್ನಿಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲ್ಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ನಡೆದಿದೆ.