ತಲಾತಲಾಂತರದಿಂದ ವಾಸ ಮಾಡುತ್ತಿರುವ ರೈತರಿಗೆ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.
ಹನೂರು (ಜು.6) : ತಲಾತಲಾಂತರದಿಂದ ವಾಸ ಮಾಡುತ್ತಿರುವ ರೈತರಿಗೆ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿ ಹಾಗೂ ಕಾವೇರಿ ವನ್ಯಧಾಮ ಅರಣ್ಯದಂಚಿನಲ್ಲಿ ಬರುವ ರೈತರ ಜಾನುವಾರು ದೊಡ್ಡಿಗಳಿಗೆ ಅರಣ್ಯವಲಯದ ಅಧಿಕಾರಿಗಳಾದ ಸಂತೋಷ್‌ಕುಮಾರ್ ಮತ್ತು ನಂದೀಶ್ ಬೆಂಕಿ ಹಚ್ಚಿ ಜಾನುವಾರು ಓಡಿಸಿದ್ದಾರೆ. ಇದರಿಂದಾಗಿ ರೈತರು ಭಯಬೀತರಾಗಿದ್ದಾರೆ.
ಚಿಕ್ಕಮಗಳೂರು: ಬಿಸಿಲ ಧಗೆ ಆರಂಭವಾಗ್ತಿದ್ದಂತೆ ಕಾಫಿನಾಡಲ್ಲಿ ಅರಣ್ಯ ಸಂಪತ್ತು ಬೆಂಕಿಗಾಹುತಿ
ರೈತರು ತಮ್ಮ ಜಾನುವಾರು ರಕ್ಷಿಸಲು ದೊಡ್ಡಿಗಳನ್ನು ಹಾಕಿ ನಿರ್ವಹಣೆ ಮಾಡುತ್ತಾರೆ. ಆದರೆ, ಇಬ್ಬರು ಅಧಿಕಾರಿಗಳು ರೈತರ ಹಾಡಿಯಲ್ಲಿರುವ ಜಾನುವಾರು ದೊಡ್ಡಿಗಳಿಗೆ ಬೆಂಕಿ ಹಾಕಿ ರೈತರು ಹೆಂಗಸರು ಮಕ್ಕಳನ್ನು ಭಯ ಬೀಳಿಸುತ್ತಿದ್ದಾರೆ. ಇದನ್ನು ಶಾಸಕರ ಗಮನಕ್ಕೂ ತರಲಾಗಿದೆ.
ಒಂದು ವಾರ ಕಾಲ ಸಮಯ ಕೇಳಿದ್ದಾರೆ. ಆದರೆ, ಅರಣ್ಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ. ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ಮಾಡಿ ಇಬ್ಬರು ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಕೂಡಲೇ ಸಂಬಂಧಪಟ್ಟಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ರೈತರ ದೊಡ್ಡಿಗಳಿಗೆ ಬೆಂಕಿ ಹಚ್ಚಿರುವವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ತಡೆ ಒಡ್ಡುವ ಮೂಲಕ ಜನಪ್ರತಿನಿಧಿಗಳನ್ನು ಬರಲು ಬಿಡುವುದಿಲ್ಲ ಎಂದು ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದ್ದಾರೆ.
25 ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ಬೆಂಕಿಗಾಹುತಿ, ಹೆದ್ದಾರಿಯಲ್ಲೇ ದುರ್ಘಟನೆ!
2ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಪಾವಗಡ (ಜು.6): ಯಾರು ಇಲ್ಲದ ವೇಳೆ ಮನೆಯೊಂದಕ್ಕೆ ಬೆಂಕಿ ವ್ಯಾಪಿಸಿ ಆಹಾರ ಪದಾರ್ಥ ಮತ್ತು ಬಟ್ಟೆಇತರೆ ಬೆಲೆಬಾಳುವ ಸಾಮಗ್ರಿ ಸೇರಿದಂತೆ ಸುಮಾರು ಎರಡು ಲಕ್ಷ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಂಗಳವಾರ ತಡ ರಾತ್ರಿ ತಾಲೂಕಿನ ರಂಗಸಮುದ್ರ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.
ಸೋಮಶೇಖರಪ್ಪಗೆ ಸೇರಿದ್ದ ಮನೆ ಬೆಂಕಿಗೆ ಆಹುತಿಯಾಗಿದೆ. ರಂಗಸಮುದ್ರ ಗ್ರಾಮದ ಸೋಮಶೇಖರಪ್ಪರ ಮನೆಗೆ ವಿದ್ಯುತ್ ಇಲ್ಲದ ಹಿನ್ನೆಲೆ ಎಣ್ಣೆ ದೀಪ ಹಚ್ಚಿದ್ದರು. ಇವರ ಕುಟುಂಬ ಊರಿಗೆ ಹೋಗಿದ್ದರೆ, ಸೋಮಶೇರಪ್ಪ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದ ವೇಳೆ ದೀಪದ ಬೆಂಕಿ ತೆಂಗಿನಗರಿಯೊಂದಕ್ಕೆ ತಗುಲಿ ಬೆಂಕಿ ಹರಡಿ ವ್ಯಾಪಿಸಿಕೊಂಡಿದೆ. ಇದರ ಪರಿಣಾಮ ಮೇಲ್ಚಾವಣಿ ಸೇರಿದಂತೆ ಮನೆಪೂರಾ ಬೆಂಕಿ ಹರಡಿ, ಭತ್ತ,ರಾಗಿ, ಜೋಳ, ಆಹಾರ ಪದಾರ್ಥ, ಬಟ್ಟೆ, ನೀರಾವರಿ ಪಂಪುಸೆಟ್‌ಗಳ ಸಾಮಗ್ರಿಗಳು ಸಂಪೂರ್ಣ ಸುಟ್ಟು ನಾಶವಾಗಿವೆ. ಮನೆಗೆ ಬೆಂಕಿ ಹರಡಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ, ಬೆಂಕಿ ನಂದಿಸಿದ್ದಾರೆ. ಅರಸೀಕೆರೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿಕೊಂಡಿದ್ದು ನಷ್ಟದ ಬಗ್ಗೆ ತಹಸೀಲ್ದಾರ್ ಕಚೇರಿಗೆ ವರದಿ ಸಲ್ಲಿಸಿದ್ದಾರೆ.