ವಿಜಯನಗರ: ಸಾಲಬಾಧೆ ತಾಳದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು

By Ravi Janekal  |  First Published Jul 16, 2023, 1:36 PM IST

: ಸಾಲ ಬಾಧೆ ತಾಳದೆ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಎರಡನೇ ಸೀಗನಹಳ್ಳಿಯಲ್ಲಿ ನಡೆದಿದೆ. ಕುಳ್ಳಿ ಅನ್ನಕ್ಕ  ಗಂಡ ಸೋಮಪ್ಪ (60) ಮೃತ ಮಹಿಳೆ


ವಿಜಯನಗರ (ಜು.16) : ಸಾಲ ಬಾಧೆ ತಾಳದೆ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಎರಡನೇ ಸೀಗನಹಳ್ಳಿಯಲ್ಲಿ ನಡೆದಿದೆ.

ಕುಳ್ಳಿ ಅನ್ನಕ್ಕ  ಗಂಡ ಸೋಮಪ್ಪ (60) ಮೃತ ಮಹಿಳೆ. ತಂಬ್ರಹಳ್ಳಿಯ ಎಸ್‌ಬಿಐ ಬ್ಯಾಂಕಿನಲ್ಲಿ 4 ಲಕ್ಷ ರೂಗಳಿಗೂ ಹೆಚ್ಚು ಸಾಲ ಪಡೆದಿದ್ದ ಮಹಿಳೆ. ಇದರ ಜೊತೆಗೆ ಖಾಸಗಿಯಾಗಿಯೂ ಕೆಲ ಕಡೆ ಸಾಲವನ್ನು ಪಡೆದಿದ್ದ ಅನ್ನಕ್ಕ. 4 ಎಕರೆ ಕೃಷಿ  ಭೂಮಿಯಲ್ಲಿ ಸತತ ಮೂರು ವರ್ಷಗಳ ಕಾಲ ಈರುಳ್ಳಿ ಬೆಳೆ ಕ ಕೊಟ್ಟಿತ್ತು.  ಈ ವರ್ಷವೂ ಸಕಾಲಕ್ಕೆ ಮಳೆ ಬಾರದ ಬ್ಯಾಂಕ್ ಸಾಲ ತೀರಿಸಲಾಗದೆ ಕೊರಗಿದ್ದ ಅನ್ನಕ್ಕ ತೀವ್ರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಕುಡಿದು ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 

Latest Videos

undefined

ಸಾಲಬಾಧೆ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಯತ್ನ, ಮಹಿಳೆ ಸಾವು, 6 ಮಂದಿ ಚಿಂತಾಜನಕ

ಮನೆ ಕೊಡಿ ಇಲ್ಲವೇ ವಿಷ ನೀಡಿ ಪ್ರಧಾನಿ ಗ್ರಾಪಂಗೆ ಲಕ್ಷ್ಮೇ ಶೇಖಪ್ಪ ಚಲವಾದಿ ಮನವಿ

ಜೋಯಿಡಾ:  ಆಶ್ರಯ ಮನೆಗಾಗಿ ಕಳೆದ 8 ವರ್ಷಗಳಿಂದ ಪರಿತಪಿಸಿಕೊಂಡು ಬರುತ್ತಿರುವ ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಪಂ ವ್ಯಾಪ್ತಿಯ ಮಾನಾಯಿ ಗ್ರಾಮದ ಪರಿಶಿಷ್ಟಜಾತಿಗೆ ಸೇರಿದ ಬಡ ಮಹಿಳೆ ಲಕ್ಷ್ಮೇ ಶೇಖಪ್ಪ ಚಲವಾದಿ ‘ಆಶ್ರಯ ಮನೆ ಕೊಡಿ ಇಲ್ಲವೇ ವಿಷ ಕೊಟ್ಟು ಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶ್ರಯ ಮನೆ ಮಂಜೂರಾಗಿದೆ ಎಂದು ಇದ್ದ ಮನೆಯನ್ನು ಬಲವಂತವಾಗಿ ನಮ್ಮಿಂದ ನೆಲಸಮಗೊಳಿಸಿ 8 ವರ್ಷ ಕಳೆದಿದೆ. ಆದರೆ ಮನೆ ಮಾತ್ರ ಇನ್ನೂ ನೀಡಿಲ್ಲ. ಗ್ರಾಪಂ ಕಂಪ್ಯೂಟರ್‌ನಲ್ಲಿ ನಮ್ಮ ಹಳೆ ಮನೆಯ ಪೊಟೋ ತೋರಿಸಿ, ನಿಮಗೆ ಮನೆಯಿದೆ ಎಂದು ಹೇಳುತ್ತಿದ್ದಾರೆ. ಈಗಲೂ ಗ್ರಾಪಂ ಕಂಪ್ಯೂಟರ್‌ನಲ್ಲಿ ನಮ್ಮ ಹಳೆ ಮನೆ ಇದೆ. ಹೊಸಮನೆ ಮಾತ್ರ ಇನ್ನೂ ಆಗಿಲ್ಲ. ಪಂಚಾಂಗ ಹಾಕಿಟ್ಟಿದ್ದೇವೆ. ಶೆಡ್‌ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಂತಹ ಮನೆಯಲ್ಲಿ ಹೆಣ್ಮಕ್ಕಳು ಇರಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಸಾಲಬಾಧೆ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಂದೆ ಆತ್ಮಹತ್ಯೆ

ಇನ್ನಾದರೂ ನಮ್ಮ ಕಷ್ಟವನ್ನು ನೋಡಿ ಪ್ರಧಾನಿ ಗ್ರಾಮ ಪಂಚಾಯಿತಿಯವರು ಮನೆ ನೀಡಬೇಕು. ಮನೆ ನೀಡಲು ಆಗದೇ ಇದ್ದರೇ ಕೊನೆಪಕ್ಷ ವಿಷವನ್ನಾದರೂ ಕೊಡಿ ಎಂದು ಲಕ್ಷ್ಮೇ ಶೇಖಪ್ಪ ಚಲವಾದಿ ಗ್ರಾಪಂಗೆ ಮನವಿ ಮಾಡಿದ್ದಾರೆ.

click me!