ಬಿಜೆಪಿ ಮುಖಂಡನ ಪುತ್ರ ಸೇರಿ ನಾಲ್ವರಿಂದ ಗ್ಯಾಂಗ್‌ ರೇಪ್‌, ಅಪ್ರಾಪ್ತೆ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯ!

Published : Jul 16, 2023, 01:21 PM IST
ಬಿಜೆಪಿ ಮುಖಂಡನ ಪುತ್ರ ಸೇರಿ ನಾಲ್ವರಿಂದ ಗ್ಯಾಂಗ್‌ ರೇಪ್‌, ಅಪ್ರಾಪ್ತೆ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯ!

ಸಾರಾಂಶ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವರದಿಯಾಗಿದೆ. ಈ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮಧ್ಯಪ್ರದೇಶ ಬಿಜೆಪಿ ನಾಯಕನ ಪುತ್ರನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. 

ಭೋಪಾಲ್ (ಜುಲೈ 16, 2023): ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವರದಿಯಾಗಿದೆ. ಅಲ್ಲದೆ, ಈ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮಧ್ಯಪ್ರದೇಶ ಬಿಜೆಪಿ ನಾಯಕನ ಪುತ್ರನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. 

ಈ ಹಿನ್ನೆಲೆ ಸಂತ್ರಸ್ತರ ಸಂಬಂಧಿಕರು ಮತ್ತು ಸ್ಥಳೀಯರು ಆರೋಪಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು, ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಅತ್ಯಾಚಾರ ನಡೆದ ಪ್ರದೇಶವು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರವಾದ್ದು, ಅವರು ದಾತಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಇದನ್ನು ಓದಿ: ಬೆಳಗಾವಿ ಜೈಲಿಂದಲೇ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಕರೆ: ಬೆದರಿಕೆ ಹಿಂದಿದೆ ಲಷ್ಕರ್‌ ಉಗ್ರರ ನಂಟು!

ಸಂತ್ರಸ್ತರಲ್ಲಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳೆಲ್ಲರೂ ಉನ್ನಾವೋ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳು. ಇನ್ನು, ಸಂತ್ರಸ್ತರು ಮತ್ತು ಆರೋಪಿಗಳು ವಿದ್ಯಾರ್ಥಿಗಳಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ದಾತಿಯಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ. 

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪ್ರದೀಪ್ ಶರ್ಮಾ ಹೇಳಿದರು. "ನಾನು ಮತ್ತು ಆಕೆಯ ಅಕ್ಕನನ್ನು ನಾಲ್ಕು ಜನರು ಅಪಹರಿಸಿದ್ದಾರೆ ಎಂದು ದೂರುದಾರರು ಹೇಳಿದ್ದಾಳೆ. ಆರೋಪಿಗಳು ತಮ್ಮನ್ನು ಮನೆಗೆ ಕರೆದೊಯ್ದು, ಅಲ್ಲಿ ಅವರು ತನ್ನ ಅಕ್ಕನನ್ನು ಅತ್ಯಾಚಾರ ಮಾಡಿದ್ದಾರೆ" ಎಂದು ದೂರುದಾರೆ ಮಾಹಿತಿ ನೀಡಿರುವ ಬಗ್ಗೆ ಪ್ರದೀಪ್ ಶರ್ಮಾ ಹೇಳಿದ್ದಾರೆ.
ಯುವತಿಯ ಕಿರಿಯ ಸಹೋದರಿ ದೂರು ದಾಖಲಿಸಿದ್ದಾಳೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: 10 ಸೆಕೆಂಡ್‌ಗೂ ಕಡಿಮೆ ಸಮಯ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿದ್ದು ದೌರ್ಜನ್ಯವಲ್ಲ: ಇಟಲಿ ಕೋರ್ಟ್‌ ತೀರ್ಪು

ಘಟನೆಯ ನಂತರ ಸಂತ್ರಸ್ತೆ ಮತ್ತು ಆಕೆಯ ತಂಗಿ ಮನೆಗೆ ಮರಳಿದ್ದು, ಅಲ್ಲಿ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದರು ಎಂದೂ ಅವರು ಹೇಳಿದರು. ನಂತರ ಅಕೆಯನ್ನು ನೆರೆಯ ಉತ್ತರ ಪ್ರದೇಶದ ಝಾನ್ಸಿಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪ್ರದೀಪ್‌ ಶರ್ಮಾ ಮಾಹಿತಿ ನೀಡಿದ್ದಾರೆ. 

ಆರೋಪಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ ಆರೋಪಿಯು ದೂರುದಾರಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಇನ್ನೊಂದೆಡೆ, ಯುಪಿಯಲ್ಲಿ ತನ್ನ ಮಾಲೀಕನ 10 ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಸೆಕ್ಸ್‌ ಹಾಗೂ ರೇಪ್‌ ಮಾಡಿದ ಆರೋಪದ ಮೇಲೆ 65 ವರ್ಷದ ವ್ಯಕ್ತಿಯನ್ನು ನಾಗ್ಪುರದ ಪೋಲೀಸರು ಬಂಧಿಸಿದ್ದಾರೆ. ಜುಲೈ 12 ರಂದು ನಡೆದ ಘಟನೆ ಇದಾಗಿದ್ದು, ಬಂಧಿತ ವ್ಯಕ್ತಿಯನ್ನು ಮೊಮಹದ್‌ ಇದ್ರೀಸ್‌ ಎಂದು ಗುರುತಿಸಲಾಗಿದೆ. ಈತನ ಕೃತ್ಯವನ್ನು ಗಮನಿಸಿದ ಮಗನೇ ಪೊಲೀಸರಿಗೆ ಮಾಹಿತಿ ಒಪ್ಪಿಸಿದ್ದಲ್ಲದೆ ತಂದೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಖಾಸಗಿ ಜಿನ್ನಿಂಗ್‌ ಘಟಕದಲ್ಲಿ (ಹತ್ತಿ ಬಿಡಿಸುವ ಘಟಕ) ಕೆಲಸ ಮಾಡುತ್ತಿದ್ದ ಇದ್ರಿಸ್‌, 10 ವರ್ಷದ ಮಗುವಿಗೆ ಚಾಕೋಲೇಟ್‌ ಕೊಡಿಸುವ ಆಮಿಷ ಒಡ್ಡಿದ್ದ ಎಂದು ತಿಳಿದುಬಂದಿದೆ. ಬಳಿಕ ಆಕೆಯನ್ನು ಬಲವಂತವಾಗಿ ಟೆರಸ್‌ಗೆ ಕರೆದುಕೊಂಡು ಹೋಗಿದ್ದ ಇದ್ರಿಸ್‌, ಅಲ್ಲಿ ಆಕೆಯ ಜೊತೆ ಅಸ್ವಾಭಾವಿಕ ಸೆಕ್ಸ್‌ ಹಾಗೂ ರೇಪ್‌ ಮಾಡುವಾಗ ಸ್ವಂತ ಮಗನ ಕೈಯಲ್ಲಿಯೇ ಸಿಕ್ಕಿಬಿದ್ದಿದ್ದ.

ಇದನ್ನೂ ಓದಿ: ಇವ್ರು ಏನು ಕುಡಿದಿದ್ರೋ ಏನೋ! ಸ್ಮಶಾನಕ್ಕೆ ಹೋಗಿ ಮೃತ ಯುವತಿಯ ಮಾಂಸವನ್ನೇ ತಿಂದ ಕುಡುಕರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!