Koppal: ವಿದ್ಯುತ್ ತಗುಲಿ ರೈತ ಸ್ಥಳದಲ್ಲಿಯೇ ಸಾವು

Published : Jan 01, 2023, 08:28 PM IST
Koppal: ವಿದ್ಯುತ್ ತಗುಲಿ ರೈತ ಸ್ಥಳದಲ್ಲಿಯೇ ಸಾವು

ಸಾರಾಂಶ

ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ರೈತನೋರ್ವನಿಗೆ ವಿದ್ಯುತ್ ತಂತಿ  ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸ ವರ್ಷದ ಮೊದಲ ದಿನದಂದೇ ಈ ದುರ್ಘಟನೆ ನಡೆದಿದ್ದು, ಮೃತ ರೈತನನ್ನು ಸೋಮಪ್ಪ ವಾಲಿಕಾರ (ಬಾರಕೇರ) (40) ಎಂದು ತಿಳಿದು ಬಂದಿದೆ.

ಕೊಪ್ಪಳ (ಜ.01): ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ರೈತನೋರ್ವನಿಗೆ ವಿದ್ಯುತ್ ತಂತಿ  ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸ ವರ್ಷದ ಮೊದಲ ದಿನದಂದೇ ಈ ದುರ್ಘಟನೆ ನಡೆದಿದ್ದು, ಮೃತ ರೈತನನ್ನು ಸೋಮಪ್ಪ ವಾಲಿಕಾರ (ಬಾರಕೇರ) (40) ಎಂದು ತಿಳಿದು ಬಂದಿದೆ. ಎಂದಿನಂತೆ ತನ್ನ ಜಮೀನಿನಲ್ಲಿ ಇಂದು ಬೆಳಿಗ್ಗೆ ಭೇಟಿ ನೀಡಿದ್ದ ರೈತನು, ವಿದ್ಯುತ್ ತಂತಿ ಅದಲು ಬದಲು ಮಾಡುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಕರಡಿ ಗುಂಪು ದಾಳಿ: ಕರಡಿಗಳ ಗುಂಪು ಏಕಾಏಕಿ ಹೊಲಕ್ಕೆ ನುಗ್ಗಿ ದಾಳಿ ನಡೆಸಿದ ಪರಿಣಾಮ ರೈತನೋರ್ವನಿಗೆ ಗಂಭೀರ ಗಾಯಗಳಾದ ಘಟನೆ ಶುಕ್ರವಾರ ತಡ ರಾತ್ರಿ ತಾಲೂಕಿನ ಕುಣಿಹಳ್ಳಿ ಹೊರವಲಯದಲ್ಲಿ ನಡೆದಿದೆ. ಪಾವಗಡ ತಾಲೂಕು ಕುಣಿಹಳ್ಳಿ ಗ್ರಾಮದ ನಾಗೇಂದ್ರಪ್ಪ(48) ವ್ಯವಸಾಯದಲ್ಲಿ ನಿರತರಾಗಿದ್ದು, ರಾತ್ರಿ 8ಗಂಟೆ ಸಮಯದಲ್ಲಿ ತಮ್ಮ ನೀರಾವರಿ ಜಮೀನಿನ ಕಡಲೇ ಗಿಡಕ್ಕೆ ನೀರು ಹಾಯಿಸುತ್ತಿದ್ದ ವೇಳೆ, ಬೆಟ್ಟದಿಂದ ಇಳಿದು ಬಂದು ಹೊಲಕ್ಕೆ ನುಗ್ಗಿದ್ದ ಮೂರು ಕರಡಿಗಳ ಗುಂಪು ರೈತನ ಮೇಲೆ ಎರಗಿ ಎಳೆದಾಡಿವೆ. 

ಹೊಸ ವರ್ಷಾಚರಣೆಗೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

ದಾಳಿಯಿಂದ ಗಾಬರಿಗೊಂಡ ಆತ ಕಿರಾಚಾಡುತ್ತಿದ್ದಂತೆ ಕರಡಿಗಳು ಪರಾರಿಯಾಗಿದ್ದು, ಘಟನೆಯಿಂದ ಆತನ ಕೈ ಮತ್ತು ಕಾಲು ಹಾಗೂ ದೇಹದ ಭಾಗಗಳಿಗೆ ಗಂಭೀರ ಸ್ವರೊಪದ ಗಾಯಗಳಾಗಿವೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಆತನನ್ನು ಸ್ಥಳೀಯರು ಕೂಡಲೇ ತುರ್ತು ವಾಹನವೊಂದರಲ್ಲಿ ಕರೆ ತಂದು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಘಟನೆ ಕುರಿತು ತಾಲೂಕಿನ ವೈ.ಎನ್‌ ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಕುಣಿಹಳ್ಳಿ, ಪೊತಗಾನಹಳ್ಳಿ, ಇಂದ್ರಬೆಟ್ಟಚಿಕ್ಕಹಳ್ಳಿ, ಸುತ್ತಮುತ್ತ ಗ್ರಾಮಗಳ ಬಳಿ ಬೃಹತ್‌ ಪ್ರಮಾಣದ ಬೆಟ್ಟಗುಟ್ಟಗಳಿದ್ದು ಭಾರಿ ಪ್ರಮಾಣದ ಮರಗಿಡಗಳಿಂದ ಅರಣ್ಯ ವ್ಯಾಪಿಸಿದೆ. ಈ ಬೆಟ್ಟಗಳಲ್ಲಿ ಕರಡಿ, ಚಿರತೆ ಇತರೆ ವನ್ಯಮೃಗಗಳು ಹೆಚ್ಚು ವಾಸವಾಗಿದ್ದು ಆಹಾರ ಮತ್ತು ನೀರಿಗಾಗಿ ಸಂಜೆ 6 ಗಂಟೆ ಬಳಿಕ, ಕರಡಿ ಇತರೆ ಕಾಡುಪ್ರಾಣಿಗಳು ಸಮೀಪದ ಹೊಲಗದ್ದೆಗಳಿಗೆ ಬರುತ್ತಿದ್ದು, ರೈತರು ಮತ್ತು ಕೂಲಿಕಾರರು ಆತಂಕದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಜನ ಭಯಭೀತರಾಗಿದ್ದು, ಸೂಕ್ತ ರಕ್ಷಣೆ ಕಲ್ಪಿಸುವಂತೆ ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಆ ಭಾಗದ ಅನೇಕ ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಬೂತ್ ವಿಜಯ ಅಭಿಯಾನ ಘೋಷಿಸಿದ ಪ್ರಹ್ಲಾದ್ ಜೋಶಿ

ಬಸ್‌-ಸ್ಕೂಟಿ ಡಿಕ್ಕಿ, ಯುವತಿ ಸಾವು: ತಾಲೂಕಿನ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಖಾಸಗಿ ಬಸ್‌ ಹಾಗೂ ಸ್ಕೂಟಿ ನಡುವೆ ಅಪಘಾತವಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಖಾಸಗಿ ಬಸ್‌ ಚಾಲಕ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಮ್ಮದ್‌ ಸಾಧಿಕ್‌ (29) ಆರೋಪಿಯಾಗಿದ್ದು, ಬಿಣಗಾದ ಚಚ್‌ರ್‍ ರಸ್ತೆಯ ನಿವಾಸಿ ಲವಿಟಾ ಫರ್ನಾಂಡಿಸ್‌ (12) ಮೃತಪಟ್ಟವಳು. ಆಕೆಯ ತಂದೆ ಜಾಜ್‌ರ್‍ ಫರ್ನಾಂಡಿಸ್‌ ಅವರಿಗೆ ಗಂಭೀರ ಗಾಯವಾಗಿದೆ. ಮಂಗಳೂರಿನಿಂದ ಗೋವಾ ರಾಜ್ಯದ ಪಣಜಿ ಕಡೆಗೆ ಖಾಸಗಿ ಬಸ್‌ ಸಾಗುತ್ತಿತ್ತು. ಈ ವೇಳೆ ಬಿಣಗಾದ ಚರ್ಚ್‌ ಕ್ರಾಸ್‌ ಬಳಿ ತಂದೆ, ಮಗಳು, ರಾಷ್ಟ್ರೀಯ ಹೆದ್ದಾರಿಗೆ ಬರುವಾಗ ಬಸ್‌ ಬಡಿದಿದೆ. ಯುವತಿ ರಸ್ತೆಯ ಮೇಲೆ ಬಿದ್ದಿದ್ದು, ಆಕೆಯ ತಲೆ ಮೇಲೆ ಬಸ್‌ನ ಬಲಭಾಗದ ಚಕ್ರ ಹತ್ತಿದೆ. ಹೀಗಾಗಿ ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಜಾಜ್‌ರ್‍ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ