ಒಂದೇ ಫ್ಯಾಕ್ಟರಿಯಲ್ಲಿ ಇಬ್ಬರಿಗೂ ಕೆಲಸ. ಆಕೆಗೆ 16 ವರ್ಷ. ಆರೋಪಿ ಸಲ್ಮಾನ್‌ಗೆ 22 ವರ್ಷ. ಆದರೆ ಅಪ್ರಾಪ್ತೆಗೆ ಕೋಲ್ಡ್ ಡ್ರಿಂಕ್‌ನಲ್ಲಿ ಅಮಲಿನ ಔಷದಿ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇತ್ತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುಗಾಂವ್(ಜು.02) ಮಹಿಳೆಯರು, ಮಕ್ಕಳ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಂಡರೂ ಕಿರುಕುಳ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಅಪ್ರಾಪ್ತ ಬಾಲಕಿ ಮೇಲೆ 22ಹರೆಯ ಯುವಕ ಅತ್ಯಾಚಾರ ಎಸಗಿರುವ ಘಟನೆ ಗುರುಗಾಂವ್‌ನಲ್ಲಿ ನಡೆದಿದೆ. ಇಬ್ಬರು ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರಿಗೂ ಪರಿಚಯವಿತ್ತು. ಇದೇ ಸಂದರ್ಭ ಬಳಸಿಕೊಂಡ ಆರೋಪಿ ಸಲ್ಮಾನ್, ಕೋಲ್ಡ್ ಡ್ರಿಂಕ್‌ನಲ್ಲಿ ಅಮಲಿನ ಔಷದಿ ಹಾಕಿ ನೀಡಿ ಅತ್ಯಾಚಾರ ಎಸಗಿದ್ದಾನೆ. ಅಪ್ತಾಪ್ತೆ ಹಾಗೂ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಲ್ಮಾನ್ ಬಂಧಿಸಿದ್ದಾರೆ.
ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ತಾಪ್ತೆ ಹಾಗೂ ಆರೋಪಿ ಸಲ್ಮಾನ್ ಪರಿಚಯಸ್ಥರಾಗಿದ್ದರು. ನೆರವು, ಸಹಾಯದ ಮೂಲಕ ಅಪ್ತಾಪ್ತೆ ಜೊತೆ ಆತ್ಮೀಯನಂತೆ, ಸಂಕಷ್ಟಕ್ಕೆ ನೆರವಾಗುವ ಗೆಳೆಯನಂತ ನಾಟಕವಾಡಿದ್ದ. ಮನೆಯಿಂದ ತಂದಿರುವ ತಿಂಡಿ, ತಿನಿಸು ಎಂದು ಯಾವುದೋ ಫುಟ್‌ಪಾತ್ ವ್ಯಾಪಾರಿಗಳಿಂದ ತಿನಿಸು ಖರೀದಿಸಿ ಆಕೆಗೆ ನೀಡುತ್ತಿದ್ದ. ಈತನ ಆತ್ಮೀಯತೆಗೆ ಈಕೆ ಸಲ್ಮಾನನ್ನು ಸಂಪೂರ್ಣವಾಗಿ ನಂಬಿದ್ದಳು.
ರೇಪ್ ಆರೋಪಿ ಮನೆ ಮೇಲೆ ಬುಲ್ಡೋಜರ್, ಕ್ರಿಮಿನಲ್ ಎನ್‌ಕೌಂಟರ್; ಮತ್ತೆ ಸದ್ದು ಮಾಡಿದ ಯೋಗಿ!
ಜೂನ್ 29ರಂದು ಸಲ್ಮಾನ್ ತನ್ನ ಸಹೋದರನ ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಆರೋಪಿ ಸಲ್ಮಾನ್‌ನ ಮೇಲಿನ ವಿಶ್ವಾಸದಿಂದ ಈಕೆ ಮರು ಪ್ರಶ್ನೆ ಮಾಡದೆ ಸಹೋದರನ ಮನೆಗೆ ತೆರಳಿದ್ದಾಳೆ. ಆದರೆ ಸಲ್ಮಾನ್ ತನ್ನ ಸಹೋದರ ಮನೆಯಲ್ಲಿ ಕೋಲ್ಡ್ ಡ್ರಿಂಕ್ ನೀಡಿದ್ದಾನೆ. ಈ ಕೋಲ್ಡ್ ಡ್ರಿಂಕ್‌ನಲ್ಲಿ ಅಮಲಿನ ಔಷದ ಹಾಕಿದ್ದಾನೆ. ಕೋಲ್ಡ್ ಡ್ರಿಂಕ್ ಕುಡಿದ ಅಪ್ತಾಪ್ತೆ ಪ್ರಜ್ಞೆ ತಪ್ಪಿದ್ದಾಳೆ.
ಇದೇ ಸಂದರ್ಭವನ್ನು ಬಳಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಇತ್ತ ಸಲ್ಮಾನ್ ಸಹೋದರ ಈ ಕೃತ್ಯವನ್ನು ವಿಡಿಯೋ ಚಿತ್ರೀಕರಿಸಿದ್ದಾನೆ. ಪ್ರಜ್ಞೆ ಮರುಕಳಿಸಿದಾಗ ತನ್ನ ಮೇಲೆ ಅತ್ಯಾಚಾರವಾಗಿರುವುದು ಅರಿವಾಗಿದೆ. ಇದೇ ವೇಳೆ ವಿಡಿಯೋ ತೋರಿಸಿ ಬೆದರಿಸಿದ್ದಾನೆ. ಈ ವಿಚಾರ ಬಾಯ್ಬಿಟ್ಟರೆ, ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಇದೇ ವಿಡಿಯೋ ತೋರಿಸಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ.
ಸಲ್ಮಾನ್ ಕಿರುಕುಳ ಹೆಚ್ಚಾದ ಕಾರಣ ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಯುವತಿ ಹಾಗೂ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಹಿತಿ ಆಧರಿಸಿ ಆರೋಪಿ ಸಲ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಇದೀಗ ಗಂಭೀರವಾಗಿದೆ. ಅಪ್ತಾಪ್ತೆ ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ಗದಗ: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ 25 ವರ್ಷ ಜೈಲು
ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಸಜೆ
ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ್ದರಿಂದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20ಸಾವಿರ ರು.ದಂಡ ವಿಧಿಸಿ ಕರ್ನಾಟಕದ ಕಲಬುರಗಿ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ ಎಫ್ಟಿಎಸ್ಸಿ -1 ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ಅವರು ಆದೇಶಿಸಿದ್ದರು.
ಶಹಬಾದ ಪಟ್ಟಣದ ಅಬ್ದುಲ್ ಇಮ್ರಾನ್ ಅಬ್ದುಲ್ ಶಮೀಮ ಇನಾಂದಾರ ಶಿಕ್ಷೆಗೊಳಗಾದ ಆರೋಪಿ. ಸಂತ್ರಸ್ತ ಬಾಲಕಿಯನ್ನು ಕೆಲಸವಿದೆ ಬಾ ಅಂತ ಮನೆಗೆ ಕರೆದುಕೊಂಡು ಹೋದ, ಆರೋಪಿ ನಂ 2 ಮಹಿಳೆ ನನ್ನ ತಮ್ಮ ನಿನ್ನನ್ನು ತುಂಬಾ ಪ್ರೀತಿಸುತ್ತಾನೆ. ಆತನಿಗೆ ಸಹಕರಿಸು ಅಂತ ಹೇಳಿದಾಗ ಅಪ್ರಾಪ್ತೆ ನಿರಾಕರಿಸಿದ್ದಾಳೆ. ಆಗ ಆರೋಪಿ ನಂ.2 ಮಹಿಳೆ ಅಪ್ರಾಪ್ತೆಗೆ ಜೀವ ಬೆದರಿಕೆ ಹಾಕಿದ್ದಾಳೆ. ನಂತರ ಪ್ರಮುಖ ಆರೋಪಿ ಬಾಲಕಿಯನ್ನು ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಆತನೂ ಜೀವ ಬೆದರಿಕೆ ಹಾಕಿದ್ದಾನೆ. ಶಹಬಾದ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.