ಬೋಳಂತೂರು ಸಮೀಪದ ನಾರ್ಶ ನಿವಾಸಿ ಸಿಂಗಾರಿ ಬೀಡಿ ಸಂಸ್ಥೆಯ ಮಾಲೀಕ ಸುಲೈಮಾನ್ ಹಾಜಿ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ. ದಾಳಿಕೋರರು ನಕಲಿ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಪುತ್ರ ಮಹಮ್ಮದ್ ಇಟ್ಬಾಲ್ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ(ಜ.05): ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ 'ಸ್ಪೆಷಲ್ 26 ಸಿನೆಮಾ ಮಾದರಿಯಲ್ಲಿ ನಕಲಿ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ರು. ಲೂಟಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿ ನಡೆದಿದೆ. ಈ ಘಟನೆಯು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಬೋಳಂತೂರು ಸಮೀಪದ ನಾರ್ಶ ನಿವಾಸಿ ಸಿಂಗಾರಿ ಬೀಡಿ ಸಂಸ್ಥೆಯ ಮಾಲೀಕ ಸುಲೈಮಾನ್ ಹಾಜಿ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ. ದಾಳಿಕೋರರು ನಕಲಿ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಪುತ್ರ ಮಹಮ್ಮದ್ ಇಟ್ಬಾಲ್ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ ಭೀಕರ ದಾಳಿ; ತಾಯಿಯನ್ನ ಮನೆಗೆ ಕಳಿಸದ ಮಾವನ ಮೇಲೆ ಮಚ್ಚು ಬೀಸಿದ ಅಳಿಯ!
ಘಟನೆ ನಡೆದಿದ್ದು ಹೇಗೆ?:
ಶುಕ್ರವಾರ ರಾತ್ರಿ ತಮಿಳುನಾಡು ನೋಂದಣಿಯ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಬೀಡಿ ಸಂಸ್ಥೆಯ ಮಾಲೀಕ ಸುಲೈಮಾನ್ ಅವರ ಮನೆಗೆ ಆಗಮಿಸಿ, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಈ ಕೃತ್ಯವೆಸಗಿದ್ದಾರೆ. ಮನೆಯನ್ನು ಪರಿಶೀಲಿಸಲು ಆದೇಶ ಇರುವುದಾಗಿ ತಿಳಿಸಿ ವಂಚಕರು ಮನೆಯೊಳಗೆ ಮೊದಲು ಪ್ರವೇಶಿಸಿದ್ದಾರೆ. ಮನೆ ಮಂದಿಯ 5 ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದು ಬಳಿಕ ಮನೆಯನ್ನು ಹುಡುಕಾಡಿದ್ದಾರೆ. ಈ ವೇಳೆ ಸುಲೈಮಾನ್ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು ₹25 ರಿಂದ 30 ಲಕ್ಷವನ್ನು ಪಡೆದುಕೊಂಡು, 'ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳುತ್ತೇನೆ' ಎಂಬುದಾಗಿ ಹೇಳಿದ್ದಾರೆ. 'ವಶಕ್ಕೆ ಪಡೆದಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಹಣವನ್ನು ಬೆಂಗಳೂರಿ ನಲ್ಲಿರುವ ಕಚೇರಿಯಿಂದ ಪಡೆದುಕೊಳ್ಳಿ' ಎಂದು ಹೇಳಿದ್ದಾರೆ.
ವಶಕ್ಕೆ ಪಡೆದಿರುವ ಹಣಕ್ಕೆ ಸೂಕ್ತ ದಾಖಲೆ ನೀಡಿ, ಹಣವನ್ನು ಬೆಂಗಳೂರಿನಲ್ಲಿರುವ ಕಚೇರಿಯಿಂದ ಪಡೆದುಕೊಳ್ಳಿ' ಎಂದು ಹೇಳಿದ್ದಾರೆ. ಬಳಿಕ ನಕಲಿ ಇ.ಡಿ. ಅಧಿಕಾರಿಗಳ ತಂಡ ಚಿನ್ನಾಭರಣ ಎಷ್ಟಿದೆ ಎಂದು ತೋರಿಸಿ ಎಂದು ಹೇಳಿ, ಮುಂದಿನ ಮತ್ತು ಹಿಂದಿನ ಮನೆಯ ಬಾಗಿಲು ಬಂದ್ ಮಾಡಿ ಶೋಧ ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡನ ಬರ್ಬರ ಹತ್ಯೆ
ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟು ಹಣ ಹಾಗೂ ಮೊಬೈಲ್ ಅನ್ನು ತಮ್ಮಲ್ಲೇ ಇರಿಸಿಕೊಂಡು, 'ನಮ್ಮ ಜೊತೆ ಹಿಂದಿ ನಿಂದ ಬನ್ನಿ, ತನಿಖೆ ಬಳಿಕ ಮೊಬೈಲ್ ಕೊಡುತ್ತೇವೆ' ಎಂದು ನಂಬಿಸಿ ತೆರಳಿದ್ದಾರೆ. ಅವರ ಮಾತು ನಂಬಿದ ಸುಲೈಮಾನ್ ಕಾರಿನಲ್ಲಿ, ಅವರ ಪುತ್ರ ಸ್ಕೂಟರ್‌ನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ನಾರ್ಶದಿಂದ ಬೋಳಂತೂರು ರಸ್ತೆ ಮೂಲಕ ಕಲ್ಲಡ್ಕದ ಕಡೆಗೆ ಆರೋಪಿಗಳ ಕಾರು ಸಂಚರಿಸಿದೆ. ಬೋಳಂತೂರು ತುಳಸೀವನ ಭಜನಾ ಮಂದಿರ ತಲುಪುತ್ತಿದ್ದಂತೆ ಕಾರು ಕಾಣೆ ಆಗಿದೆ. ಕಾರು ಕಾಣದೇ ಇದ್ದಾಗ ಸುಲೈಮಾನ್ ಪುತ್ರ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದ್ದು, ಸಂಶಯಗೊಂಡು ಕಲ್ಲಡ್ಕದ ತನಕ ಹೋಗಿ ಹುಡುಕಾಡಿದರೂ ಕಾರು ಪತ್ತೆಯಾಗಿಲ್ಲ. ಈ ಬಗ್ಗೆ ಸುಲೈಮಾನ್ ಮಗ ಮಹಮ್ಮದ್ ಇಟ್ಬಾಲ್ ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ, ವಂಚಕರು ಇ.ಡಿ ಅಧಿಕಾರಿಗಳಂತೆ ನಟಿಸಿ ಲೂಟಿ ಮಾಡಿರುವುದು ಅರಿವಿಗೆ ಬಂದಿದೆ.
6 ಜನರ ತಂಡ:
ಇ.ಡಿ. ಹೆಸರಿನಲ್ಲಿ ನಕಲಿ ದಾಳಿ ನಡೆಸಿದ ತಂಡದಲ್ಲಿ 6 ಜನ ಇದ್ದರೆನ್ನಲಾಗಿದೆ. ಸುಲೈಮಾನ್ ಹಾಜಿ ಮನೆಯವರನ್ನು ನಿರಂತರ 2 ಗಂಟೆ ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದ ಕಾರಣ ಆರೋಪಿಗಳ ಪತ್ತೆ ಸವಾಲಾಗಿದೆ.