ಬೆಂಗಳೂರಿನ ನಕಲಿ ನೋಟು ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಾಸ್ಕ್ ಫೈನ್ ಹಾಕುವಾಗ ಸಿಕ್ಕಿಬಿದ್ದ ನಟೋರಿಯಸ್ ಕ್ರಿಮಿನಲ್ ಗಳು.
ಬೆಂಗಳೂರು: (ನ.14): ಮಾಸ್ಕ್ ಧರಿಸದ ಮೂವರಿಗೆ ದಂಡ ವಿಧಿಸುವಾಗ ನಕಲಿ ನೋಟು ಮಾರಾಟ ಮಾಡುವ ಜಾಲವನ್ನು ಮೈಕೋ ಲೇಔಟ್ ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಸುಮನ್, ದೇವರಾಜನ್, ಮುನಿಶೇಖರ್ ಬಂಧಿತ ಆರೋಪಿಗಳು. ಬಂಧಿತರಿಂದ 2 ಸಾವಿರ ಮುಖ ಬೆಲೆಯ 7.75 ಲಕ್ಷ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
undefined
ಐಪಿಎಲ್ ಬೆಟ್ಟಿಂಗ್: ಬಂಧಿತ ಆರೋಪಿಯಿಂದ ಜಪ್ತಿ ಮಾಡಿದ ಕಾರು ಬಿಜೆಪಿ ಶಾಸಕನ ಪತ್ನಿಯದ್ದು...!
ಮೂಲತಃ ತಮಿಳುನಾಡಿನವರಾದ ಇವರು ಕಾರಿನಲ್ಲಿ ಬರುತ್ತಿದ್ದರು. ಮೈಕೋ ಲೇಔಟ್ ಸಮೀಪ ಬಂದಾಗ ಪೊಲೀಸರು ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದರು. ಪೊಲೀಸರನ್ನು ನೋಡಿ ಸಂಶಯ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ಮಾಸ್ಕ್ ಹಾಕದ ಬಗ್ಗೆ ಪೊಲೀಸರು ವಿಚಾರಣೆ ನಡೆಸುವಾಗ ಎರಡು ಸಾವಿರ ಮುಖ ಬೆಲೆಯ ಖೋಟಾ ನೋಟುಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿದ್ದು, ಅವನ್ನು ಚಲಾವಣೆ ಮಾಡಲು ಮುಂದಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ್ದಾರೆ.