
ಬೆಂಗಳೂರು (ನ. 13) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ನಂತರ ರಾಜಧಾನಿಯಲ್ಲಿ ಪ್ರತಿದಿನ ಮಾದಕ ವಸ್ತು ಸಾಗಾಟ ಪ್ರಕರಣಗಳು ದಾಖಲಾಗುತ್ತಲೇ ಇವೆ ಎಂಬ ಪರಿಸ್ಥಿತಿ ಬಂದು ನಿಂತಿದೆ.
ರಾಜಗೋಪಾಲನಗರ ಪೊಲೀಸು ಕಾರ್ಯಾಚರಣೆ ನಡೆಸಿದ್ದು ಗಾಂಜಾ ಮಾರಾಟ ಮಾಡ್ತಿದ್ದ ಶಿವಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 110 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.
ಚಾಲಕನ ಸೀಟಿನಡಿ ಹ್ಯಾಶ್ ಆಯಿಲ್ ಸಾಗಿಸುತ್ತಿದ್ದುದ್ದು ಎಲ್ಲಿಗೆ?
ಮನೆಯಲ್ಲೇ ಗಾಂಜಾ ಇಟ್ಟಿಕೊಂಡು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ. ಮನೆಯನ್ನ ಪರಿಶೀಲಿಸಿದಾಗ 93 ಕೆಜಿ ಗಾಂಜಾ ಪತ್ತೆಯಾಗಿದೆ. ಬಂಧಿತನಿಂದ 110 ಕೆಜಿ ಗಾಂಜಾ, 1 ಬೈಕ್ ಹಾಗೂ 3 ಸಾವಿರ ನಗದು ವಶಕ್ಕೆ ಪಡೆದಿದ್ದು ಈ ದಂಧೆಯ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಟೋಲ್ ಗೇಟ್ ಬಳಿ ಪೊಲೀಸರು ಗುರುವಾರ ಅಂತರ್ ರಾಜ್ಯ ಮಾದಕ ಸರಬರಾಜುಗಾರರ ಬಂಧನ ಮಾಡಿತ್ತು. ಚಾಲಕನ ಸೀಟಿನಡಿ 3 ಕೆ.ಜಿ.ಹ್ಯಾಶ್ ಆಯಿಲ್ ಬಚ್ಚಿಡಲಾಗಿತ್ತು. ವಿಶಾಖಪಟ್ಟಣಂನಿಂದ ಬೆಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ ಮಾಹಿತಿ ಆಧಾರದಲ್ಲಿ ದಾಳಿ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ