ಆನ್‌ಲೈನ್ ಹ್ಯಾಕರ್‌ಗಳು ಪೊಲೀಸ್ ಇಲಾಖೆಯನ್ನೂ ಬಿಡುತ್ತಿಲ್ಲ. ವಿಜಯನಗರ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಮೆಸೇಂಜರ್‌ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ!
ಹೊಸಪೇಟೆ (ಮೇ.22) : ಆನ್‌ಲೈನ್ ಹ್ಯಾಕರ್‌ಗಳು ಪೊಲೀಸ್ ಇಲಾಖೆಯನ್ನೂ ಬಿಡುತ್ತಿಲ್ಲ. ವಿಜಯನಗರ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಮೆಸೇಂಜರ್‌ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ!
ಹೌದು, ನೂತನ ವಿಜಯನಗರ ಎಸ್ಪಿ ಫೇಸ್‌ಬುಕ್ ಖಾತೆ ಹೊಂದಿದ್ದಾರೆ. ಈ ಖಾತೆ ‘ಎಸ್ಪಿ ವಿಜಯನಗರ ಡಿಸ್ಟ್’ ಎಂದು ಇಂಗ್ಲಿಷ್ ಒಕ್ಕಣೆ ಹೊಂದಿದೆ. ಆದರೆ, ಈ ಖಾತೆಯ ನಕಲಿ ಸೃಷ್ಟಿಸಿದ ಹ್ಯಾಕರ್‌ಗಳು ಮೆಸೇಂಜರ್‌ನಲ್ಲಿ ಸಾರ್ವಜನಿಕರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಮೇ 21ರ ಬೆಳಗ್ಗೆ 10.30ರ ಹೊತ್ತಿಗೆ ಎಸ್ಪಿ ಶ್ರೀಹರಿಬಾಬು(SP Harishbabu) ಅವರಿಗೆ ಸಾರ್ವಜನಿಕರೊಬ್ಬರಿಂದ ಕರೆ ಬಂದಿದೆ.
ಪರಿಶೀಲಿಸಲಾಗಿದ್ದು, ನಕಲಿ ಖಾತೆ ಸೃಷ್ಟಿಸಲಾಗಿದೆ ಎಂಬುದು ದೃಢಪಟ್ಟತಕ್ಷಣವೇ ಗ್ರಾಮೀಣ ಠಾಣೆಯಲ್ಲಿ ಅನಾಮಿಕ ಹ್ಯಾಕರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ನಕಲಿ ಖಾತೆಯನ್ನು ಬಂದ್ ಮಾಡಲಾಗಿದೆ.
IPS ಅಧಿಕಾರಿಯನ್ನೂ ಬಿಡದ ಸೈಬರ್ ಖದೀಮರು: Belagavi SP ಹೆಸರಲ್ಲಿ ನಕಲಿ Instagram ಖಾತೆ!
ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿ ಸಾರ್ವಜನಿಕರಿಗೆ ಹಣದ ಬೇಡಿಕೆ ಇಟ್ಟಿರುವುದು ಗಮನಕ್ಕೆ ಬಂದಿದ್ದು, ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಯಾರೂ ಹಣ ಕಳುಹಿಸಿ, ಮೋಸ ಹೋಗಿಲ್ಲ. ಜತೆಗೆ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ಶ್ರೀಹರಿಬಾಬು ಎಸ್ಪಿ, ವಿಜಯನಗರ