Bengaluru Crime: ಯುವಕನ ಮೇಲೆ ಕಾಮುಕರಿಂದ ಲೈಂಗಿಕ ದೌರ್ಜನ್ಯ

By Girish Goudar  |  First Published Apr 6, 2022, 7:25 AM IST

*  ವಿದ್ಯಾರ್ಥಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ 
*  ಆರೋಪಿಗಳ‌‌‌ ಮೇಲೆ‌ ಪೊಲೀಸರಿಂದ ಗುಂಡೇಟು  
*  ಟೀ ಗರುಡಾ-900 ಹೆಸರಿನಲ್ಲಿ ದರೋಡೆ
 


ಬೆಂಗಳೂರು(ಏ.06): ವಿದ್ಯಾರ್ಥಿನಿಯನ್ನು(Student) ಅಡ್ಡಗಟ್ಟಿ ಅಪಹರಿಸಿ(Kidnap), ಹಣ ದರೋಡೆ ಮಾಡಿದಲ್ಲದೆ, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಉಡುಪಿ ಮೂಲದ ಇಬ್ಬರು ನಟೋರಿಯಸ್ ಸುಲಿಗೆಕೋರರಿಗೆ ಕೊತ್ತನೂರು ಠಾಣೆ ಪೊಲೀಸರು(Police) ಗುಂಡೇಟಿನ ರುಚಿ ತೋರಿಸಿದ್ದಾರೆ.

ಉಡುಪಿಯ(Udupi) ಕಾಪು ತಾಲೂಕಿನ ಮೊಹಮ್ಮದ್ ಆಶೀಕ್  ಮತ್ತು ಕುಂದಾಪುರ ತಾಲೂಕಿನ ಇಸಾಕ್  ಎಂಬವರಿಗೆ ಗುಂಡೇಟು ಬಿದ್ದಿದೆ. ಇಬ್ಬರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಹತ್ತು ಮೊಬೈಲ್‌ಗಳು, ಒಂದು ಕಾರು ವಶಕ್ಕೆಪಡೆಯಲಾಗಿದೆ. ಇದೇ ವೇಳೆ ಆರೋಪಿಗಳ(Accused) ಹಲ್ಲೆಯಿಂದ ಪಿಎಸ್‌ಐ ಉಮೇಶ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ ಅನೂಪ್ ಶೆಟ್ಟಿ ಮಾಹಿತಿ ನೀಡಿದರು.

Tap to resize

Latest Videos

Animal Cruelty: ಗರ್ಭಿಣಿ ಮೇಕೆ ಮೇಲೆ ಗ್ಯಾಂಗ್ ರೇಪ್.. ಕೊಂದೇ ಬಿಟ್ಟರು

ಮಾ.26 ರಂದು ಮುಂಜಾನೆ 5 ಗಂಟೆ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಮಾರುತಿ ರಿಟ್‌ಜ್‌ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು, ಮತ್ತೊಂದು ದೇವಾಸ್ಥನದಿಂದ ಮನೆಗೆ ಹೋಗುತ್ತಿದ್ದ ಕಾರಿನಲ್ಲಿ ಯುವಕನನ್ನು ಹಿಂಬಾಲಿಸಿ, ಕಾರು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಆತನ ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ಯುವಕನ ಬಳಿಯಿದ್ದ ಚಿನ್ನ ಉಂಗುರ ಕಸಿದುಕೊಂಡಿದ್ದಾರೆ. ಬಳಿಕ 50 ಸಾವಿರ ರೂ. ನಗದು ಕೊಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ(Threat) ಹಾಕಿದ್ದು,  ಬಲವಂತವಾಗಿ ಎಟಿಎಂ ಕಾರ್ಡ್ ಪಡೆದುಕೊಂಡು, ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾಾಮಾಡಿಕೊಂಡಿದ್ದಾರೆ. ನಂತರ ಬೆಳ್ಳಂದೂರು, ವೈಟ್‌ಫೀಲ್ಡ್‌ ಕಡೆಗೆ ಕರೆದೊಯ್ದು ತಾವು ಕೇಳಿದಷ್ಟು ಹಣ ಕೊಡಬೇಕು. ಇಲ್ಲವಾದರೆ ಲೈಂಗಿಕವಾಗಿ ಸಹಕರಿಸಬೇಕೆಂದಿದ್ದರು. ಬಳಿಕ ಯುವಕನಿಂದ ಒಂದಿಷ್ಟು ಹಣ ಕಸಿದುಕೊಂಡು, ಬಳಿಕ ಲೈಂಗಿಕ ದೌರ್ಜನ್ಯ(Sexual Harassment) ಎಸಗಿ, ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದರು.

ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಸಂಪಿಗೆಹಳ್ಳಿ ಎಸಿಪಿ ಟಿ.ರಂಗಪ್ಪ,  ಕೊತ್ತನೂರು ಠಾಣೆ ಇನ್‌ಸ್‌‌ಪೆಕ್ಟರ್ ಚನ್ನೇಶ್ ಹಾಗೂ ಪಿಎಸ್‌ಐ ಉಮೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಸಿಸಿಕ್ಯಾಮೆರಾ ದೃಶ್ಯಾಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮಂಗಳೂರು, ಉಡುಪಿ ಮತ್ತಿತರರ ಕಡೆ ಶೋಧ ನಡೆಸುತ್ತಿದ್ದರು.

ಬೆಂಗಳೂರಿಗೆ ಬಂದಾಗ ಗುಂಡೇಟು

ಆರೋಪಿಗಳು ನಗರದಲ್ಲಿ ಕೃತ್ಯ ಎಸಗಿದ ಬಳಿಕ ದಾವಣಗೆರೆಯಲ್ಲಿ ಸುಲಿಗೆ ಮಾಡಿದ್ದರು. ಮಂಗಳವಾರ ಮುಂಜಾನೆ ರಿಟ್‌ಜ್‌ ಕಾರಿನಲ್ಲಿ ಜಕ್ಕೂರು ಬಳಿ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಹಿಡಿಯಲು ಹೋದಾಗ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಡ್ರ್ಯಾಗರ್ ನಿಂದ ಪಿಎಸ್‌ಐ ಉಮೇಶ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಪಿಐ ಚನ್ನೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರೂ ಮತ್ತೊಮ್ಮೆ ಹಲ್ಲೆಗೆ ಮುಂದಾದಾಗ ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಸಾಧುವಿನ ರೂಪದಲ್ಲಿದ್ದ ರೇಪಿಸ್ಟ್‌, ಮದ್ಯ ಕುಡಿಸಿ ಅಪ್ರಾಪ್ತೆಯ ಅತ್ಯಾಚಾರ: ಗಣ್ಯರೇ ಈತನ ಭಕ್ತರು!

ಟೀ ಗರುಡಾ-900 ಹೆಸರಿನಲ್ಲಿ ದರೋಡೆ

ಚಿಕ್ಕ ವಯಸ್ಸಿನಿಂದಲೂ ಆರೋಪಿಗಳು ಸುಲಿಗೆ, ದರೋಡೆ, ಕಳ್ಳತನ(Theft), ಮನೆಗಳ್ಳತನ, ಹಸುಗಳ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾಾರೆ. ಮಂಗಳೂರು, ಉಡುಪಿ ಮತ್ತು ಕುಂದಾಪುರ ಕಡೆಗಳಲ್ಲಿ ‘ಟೀಂ ಗರುಡಾ-900’ ಹೆಸರಿನಲ್ಲಿ ಗುಂಪು ಮಾಡಿಕೊಂಡು ರಾತ್ರಿ ವೇಳೆ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. 

ಈ ಆರೋಪಿಗಳು ಈಗಾಗಲೇ ಉಡುಪಿ, ಮಣಿಪಾಲ್, ಕಾಪು, ಬೈಂದೂರು, ಬ್ರಹ್ಮಾವರ ಸೇರಿ ಮಂಗಳೂರು ಸುತ್ತ-ಮುತ್ತ 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದಿರುವ ಆರೋಪಿಗಳು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪರಿಣಾಮ ಇವರ ಬಂಧನಕ್ಕೆ ನಾನಾ ಠಾಣೆಗಳಲ್ಲಿ 10 ವಾರೆಂಟ್ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
 

click me!