ಬೆಂಗಳೂರು: ಕುಡಿಯಲು ನೀರು ಕೇಳಿ ಮಹಿಳೆ ಕೈ ಹಿಡಿದು ಎಳೆದ ಸ್ವಿಗ್ಗಿ ಬಾಯ್‌

Published : Mar 22, 2024, 05:59 AM IST
ಬೆಂಗಳೂರು: ಕುಡಿಯಲು ನೀರು ಕೇಳಿ ಮಹಿಳೆ ಕೈ ಹಿಡಿದು ಎಳೆದ ಸ್ವಿಗ್ಗಿ ಬಾಯ್‌

ಸಾರಾಂಶ

ಕಲಬುರಗಿ ಜಿಲ್ಲೆ ಚಿಂಚೋಳಿ ಮೂಲದ ಆಕಾಶ್‌ ಬಂಧಿತ. ಮಾ.17ರಂದು ಫುಡ್‌ ಡೆಲಿವರಿ ನೀಡಲು ಮಹಿಳೆಯೊಬ್ಬರ ಮನೆಗೆ ತೆರಳಿದ್ದಾಗ ಆಕೆಯ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 

ಬೆಂಗಳೂರು(ಮಾ.22):  ಕುಡಿಯಲು ನೀರು ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಫುಡ್‌ ಡೆಲಿವರಿ ಬಾಯ್‌ನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆ ಚಿಂಚೋಳಿ ಮೂಲದ ಆಕಾಶ್‌(27) ಬಂಧಿತ. ಮಾ.17ರಂದು ಫುಡ್‌ ಡೆಲಿವರಿ ನೀಡಲು ಮಹಿಳೆಯೊಬ್ಬರ ಮನೆಗೆ ತೆರಳಿದ್ದಾಗ ಆಕೆಯ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಗರದ 560 ಮೀ. ಎತ್ತರದ 'ಹಂದಿಗುಂದಿ ಬೆಟ್ಟ' ಹತ್ತಿದ ಮಂಕಿಮ್ಯಾನ್ ಖ್ಯಾತಿಯ 'ಜ್ಯೋತಿರಾಜ್' ಬಂಧನ

ಆರೋಪಿ ಆಕಾಶ್‌ ಕುಂದನಹಳ್ಳಿ ಕಾಲೋನಿಯ ಪೇಯಿಂಗ್‌ ಗೆಸ್ಟ್‌ವೊಂದರಲ್ಲಿ (ಪಿಜಿ) ವಾಸವಾಗಿದ್ದ. ಆನ್‌ಲೈನ್‌ ಫುಡ್‌ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಮಾ.17ರಂದು 30 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಸ್ವಿಗ್ಗಿಯಲ್ಲಿ ಆಹಾರ ಆರ್ಡರ್‌ ಮಾಡಿದ್ದಾರೆ.

ಸಂಜೆ 6.30ರ ಸುಮಾರಿಗೆ ಆಕಾಶ್‌ ಆ ಮಹಿಳೆಗೆ ಫುಡ್‌ ಡೆಲಿವರಿ ನೀಡಿದ್ದಾನೆ. ಬಳಿಕ ನಿಮ್ಮ ಮನೆಯ ವಾಶ್‌ ರೂಮ್‌ ಬಳಸಬಹುದೇ ಎಂದು ಮಹಿಳೆಯನ್ನು ಕೇಳಿದ್ದಾನೆ. ಇದಕ್ಕೆ ಮಹಿಳೆ ಅನುಮತಿ ನೀಡಿದ್ದಾರೆ. ವಾಶ್‌ ರೂಮ್‌ನಿಂದ ಹೊರಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಆಗ ಆ ಮಹಿಳೆ ನೀರು ತರಲು ಅಡುಗೆ ಮನೆ ಕಡೆಗೆ ಹೋಗುವಾಗ ಹಿಂದಿನಿಂದ ಏಕಾಏಕಿ ಆ ಮಹಿಳೆಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಆ ಮಹಿಳೆ ಜೋರಾಗಿ ಕಿರುಚಿ ಆಕಾಶ್‌ನ ಕಪಾಳಕ್ಕೆ ಜೋರಾಗಿ ಬಾರಿಸಿದ್ದಾರೆ. ಈ ವೇಳೆ ಗಾಬರಿಗೊಂಡ ಆಕಾಶ್‌ ಆ ಮನೆಯಿಂದ ಕಾಲ್ಕಿತ್ತಿದ್ದಾನೆ. ಈ ಸಂಬಂಧ ಸಂತ್ರಸ್ತೆ ಎಚ್‌ಎಎಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು  ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?