ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ ನಡೆದಿದ್ದು ಈಗಾಗಲೇ ಹುಕ್ಕೇರಿ ಪೋಲಿಸರು ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಚಿಕ್ಕೋಡಿ (ಮಾ.30): ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕರೊಬ್ಬರು (Ex Army Man) ಗಾಳಿಯಲ್ಲಿ ಗುಂಡು ಹಾರಿಸಿದ (Bullet Fire) ನಡೆದಿದ್ದು ಈಗಾಗಲೇ ಹುಕ್ಕೇರಿ ಪೋಲಿಸರು ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹುಕ್ಕೇರಿ ತಾಲೂಕಿನ ಎಲಿಮನ್ನೋಳಿ ಗ್ರಾಮದ ಆಯಾಜ ಮಲ್ಲಿಕ ತಹಸಿಲ್ದಾರ್ ಎಂಬುವವರ ಮದುವೆ ಸಮಾರಂಭದಲ್ಲಿ (Marriage Function) ಈ ಘಟನೆ ನಡೆದಿದೆ.
ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸೈನಿಕ ರಫೀಕಸಾಹೆಬ್ ತಹಸಿಲ್ದಾರ ಎಂಬಾತ ತನ್ನ ಪೀಸ್ತೂಲಿನಿಂದ ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಹುಚ್ಚಾಟ ಪ್ರದರ್ಶನ ಮಾಡಿದ್ದಾನೆ. ಇನ್ನೂ ಗನ್ ಲೈಸನ್ಸ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆ ಈಗಾಗಲೇ ಸ್ವಯಂ ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೋಲಿಸರು ಮಹಮ್ಮದ ರಫೀಕ್ ತಹಸಿಲ್ದಾರ್ ಬಂಧಿಸಿದ್ದಾರೆ.
3 ತಿಂಗಳ ಹೆಣ್ಣು ಮಗುವನ್ನು 7 ಬಾರಿ ಮಾರಾಟ: ಆರೋಪಿಗಳ ಬಂಧನ
ಮಾಡೆಲಿಂಗ್ ಆಸೆಯಿಂದ ಲಕ್ಷಾಂತರ ರೂ. ಕಳ್ಕೊಂಡು ಬಕ್ರಾ ಆದ ಟೆಕ್ಕಿ: ಸಾಫ್ಟ್‌ವೇರ್ ಎಂಜಿನಿಯರ್ (Software Engineer) ಸೆಡ್ರಿಕ್ ಕುಟಿನ್ಹೊ ಎಂಬವರು ಮಾಡೆಲಿಂಗ್ ಮಾಡುವ ಆಸೆಯಿಂದ 27,95,000 ರು.ಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅವರು 2019ರಿಂದ ವರ್ಕ್ ಫ್ರಮ್ ಹೋಮ್(Work From Home) ಮಾಡುತ್ತಿದ್ದರು. ಈ ಮಧ್ಯೆ ಮುಂಬೈಯ ಪ್ರಿಯಾಂಕ, ಪೂನಮ್, ಜೆನ್ನಿಫರ್, ಮುಖೇಶ್ ಮತ್ತು ಮೋಹನ್ ಜಿ. ಎಂಬವರು ಅವರ ಮೊಬೈಲಿಗೆ ಕರೆ ಮಾಡಿ ಮಾಡೆಲಿಂಗ್ (Modeling) ಮಾಡಿದರೆ 2-3 ದಿನಕ್ಕೆ 2-3 ಲಕ್ಷ ರು. ಗಳಿಸಬಹುದೆಂದು ಹೇಳಿದ್ದರು.
ಅದಕ್ಕೆ 20 ಸಾವಿರ ರು.ಗಳನ್ನು ಕೋಆರ್ಡಿನೇಟರ್ ಶುಲ್ಕವಾಗಿ ಕಳುಹಿಸುವಂತೆ ತಿಳಿಸಿ ಅಕೌಂಟ್ ನಂಬರ್ ನೀಡಿದ್ದರು. ಅದನ್ನು ನಂಬಿದ ಸೆಡ್ರಿಕ್ ಹಣವನ್ನು (Money) ಪಾವತಿಸಿದ್ದರು. ಇದೇ ರೀತಿ ಪದೇ ಪದೇ ಕರೆ ಮಾಡಿದ ಆರೋಪಿ ಯುವತಿಯರು, ಆಸೆ ಹುಟ್ಟಿಸಿ, ಸ್ಟುಡಿಯೋ ವೆಚ್ಚ, ಫೋಟೋಶೂಟ್, ವಿಮಾನ ಟಿಕೇಟ್ ಎಂದೆಲ್ಲಾ ಹೇಳಿ, ಫೆ. 2ರಿಂದ ಮಾ.23ರ ವರೆಗೆ ಹತ್ತಾರು ಕಂತುಗಳಲ್ಲಿ ಒಟ್ಟು 27,95,000 ರು.ಗಳನ್ನು ಬೇರೆಬೇರೆ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾರೆ.
ಮಧ್ಯೆ ಮುಂಬೈಯ ವಿಮಾನ ಟಿಕೇಟನ್ನೂ ಕಳುಹಿಸಿ, ಮಾ.12ರಂದು ಮುಂಬೈಯ (Mumbai) ಅಂಧೇರಿಗೆ ಬರುವಂತೆ ಹೇಳಿದ್ದರು. ಅಲ್ಲಿ ಹೋದಾಗ ಮುಖೇಶ್ ಮತ್ತು ಮೋಹನ್ ಜಿ. ಎಂಬುವರ ಸ್ಟುಡಿಯೋದಲ್ಲಿ ಫೋಟೋಶೂಟ್ (Photoshoot) ಮಾಡಿಸಿದ್ದರು. ಇದೀಗ ಆರೋಪಿತರು ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಆರೋಪಿಗಳು ಸೇರಿ ತಮಗೆ ಮೋಸ ಮಾಡಿದ್ದಾರೆ ಎಂದು ಸೆಡ್ರಿಕ್ ಅವರು ಪಡುಬಿದ್ರಿ ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಆನ್‌ಲೈನ್ ಆ್ಯಪ್‌ನಿಂದ ಸಾಲ ಡೇಂಜರ್: ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್..!
1 ಲಕ್ಷ ರು. ಬಹುಮಾನ: ಇಬ್ಬರಿಗೂ ಗೂಂಡಾ ಕಾಯ್ದೆ ಜಾರಿಗೊಳಿಸಿ, ಹೈಕೋರ್ಚ್‌ನಲ್ಲಿ ದೃಢಗೊಳ್ಳಲು ಕಾರಣಕರ್ತರಾದ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದ ತಂಡಕ್ಕೆ 1 ಲಕ್ಷ ರು. ಬಹುಮಾನವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಘೋಷಿಸಿದ್ದಾರೆ. ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್, ಉತ್ತರ ವಿಭಾಗ ಎಸಿಪಿ ಮಹೇಶ್ ಕುಮಾರ್, ಸಿಸಿಆರ್‌ಬಿ ಎಸಿಪಿ ರವೀಶ್, ಕಾವೂರು ಇನ್‌ಸ್ಪೆಕ್ಟರ್ ರಾಘವ್ ಪಡೀಲ್, ಸುರತ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಪ್ಪ ಮತ್ತು ತಂಡ ಗೂಂಡಾ ಕಾಯಿದೆ ಜಾರಿಗೆ ಪೂರಕ ದಾಖಲೆ ಸಂಗ್ರಹಿಸಲು ಸಹಕರಿಸಿದ್ದರು.