ದೆಹಲಿಯ 35 ಪೀಸ್ ಮರ್ಡರ್ ಕುಖ್ಯಾತಿಯ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲ ಸುಳ್ಳುಪತ್ತೆ ಪರೀಕ್ಷೆ ವೇಳೆ ಶ್ರದ್ಧಾಳನ್ನು ಕೊಂದಿರುವುದಕ್ಕೆ ಯಾವುದೇ ಪಶ್ಚಾತಾಪವಿಲ್ಲ. ಇದಕ್ಕಾಗಿ ನನಗೆ ಗಲ್ಲುಶಿಕ್ಷೆ ವಿಧಿಸಿದರೂ ಸ್ವರ್ಗದಲ್ಲಿ ನಾನು ಖುಷಿಯಾಗಿರುತ್ತೇನೆ ಎಂದು ಹೇಳಿಕೆ ನೀಡಿದ್ದಾನೆಂದು ಪೊಲೀಸ್ ವರದಿ ಹೇಳಿದೆ.
ನವದೆಹಲಿ (ನ.30): ದೆಹಲಿಯ 35 ಪೀಸ್ ಮರ್ಡರ್ ಕುಖ್ಯಾತಿಯ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲ ಸುಳ್ಳುಪತ್ತೆ ಪರೀಕ್ಷೆ ವೇಳೆ ಶ್ರದ್ಧಾಳನ್ನು ಕೊಂದಿರುವುದಕ್ಕೆ ಯಾವುದೇ ಪಶ್ಚಾತಾಪವಿಲ್ಲ. ಇದಕ್ಕಾಗಿ ನನಗೆ ಗಲ್ಲುಶಿಕ್ಷೆ ವಿಧಿಸಿದರೂ ಸ್ವರ್ಗದಲ್ಲಿ ನಾನು ಖುಷಿಯಾಗಿರುತ್ತೇನೆ ಎಂದು ಸುಳ್ಳು ಪತ್ತೆ ಪರೀಕ್ಷೆ ವೇಳೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಜೊತೆಗೆ ಶ್ರದ್ಧಾ ಸೇರಿದಂತೆ ಇನ್ನೂ 20 ಹಿಂದೂ ಯುವತಿಯರ ಜೊತೆ ನನಗೆ ಸಂಪರ್ಕ ಇತ್ತು ಎಂದು ಹೇಳಿರುವುದು ಆತನ ಉದ್ದೇಶದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
ಶ್ರದ್ಧಾಳನ್ನು ಕೊಲೆ ಮಾಡಿರುವ ಕುರಿತಾಗಿ ನನಗೆ ಯಾವುದೇ ಬೇಸರವಿಲ್ಲ. ನನ್ನನ್ನು ಹೀರೋ ಎಂದೇ ನಾನು ಭಾವಿಸುತ್ತೇನೆ. ಅಲ್ಲದೇ ಇದಕ್ಕಾಗಿ ಸ್ವರ್ಗಕ್ಕೆ ಹೋದಾಗ ಅಲ್ಲಿ ನೀಡಲಾಗುವ ಅಪ್ಸರೆಯರ ಜೊತೆ ಸಂತೋಷವಾಗಿರುತ್ತೇನೆ. ಶ್ರದ್ಧಾಳ ಜೊತೆ ಇದ್ದಾಗಲೇ ಇನ್ನೂ 20ಕ್ಕೂ ಹೆಚ್ಚು ಹಿಂದೂ ಮಹಿಳೆಯರೊಂದಿಗೆ ನನಗೆ ಸಂಪರ್ಕ ಇತ್ತು ಎಂದು ಹೇಳಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದೈನಿಕ್ ಜಾಗರಣ್’ ವರದಿ ಮಾಡಿದೆ.
Shraddha Walker Murder: ಜೊಮಾಟೋ, ಸೋಶಿಯಲ್ ಮೀಡಿಯಾ ಮಾಹಿತಿ ಕೇಳಿದ ಪೊಲೀಸ್!
ಬಂಬಲ್ ಆ್ಯಪ್ ಬಳಸಿ ಹಿಂದು ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ. ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ ಮನೋವೈದ್ಯೆಯನ್ನು ಮನೆಗೆ ಕರೆಸಿಕೊಂಡಿದ್ದೆ. ಆಕೆಯೊಂದಿಗೆ ಸಂಬಂಧ ಬೆಳೆಸಲು ಶ್ರದ್ಧಾಳ ಉಂಗುರವನ್ನು ಆಕೆಗೆ ನೀಡಿದ್ದೆ. ಆಕೆ ಸಹ ಹಿಂದೂ. ಅಲ್ಲದೇ ಮತ್ತಷ್ಟುಹಿಂದೂ ಮಹಿಳೆಯರ ಜೊತೆ ನಾನು ಮಾತನಾಡುತ್ತಿದ್ದೆ ಎಂದು ಹೇಳಿದ್ದಾನೆ. ಸುಳ್ಳುಪತ್ತೆ ಪರೀಕ್ಷೆ ವೇಳೆ ಅಫ್ತಾಬ್ ನೀಡಿರುವ ಮಾಹಿತಿಯಿಂದಾಗಿ ತನಿಖೆಗೆ ಬಹಳ ಸಹಕಾರಿಯಾಗಿದೆ. ಪರೀಕ್ಷೆಯ ಬಳಿಕ ಆತನ ಮನೆಯಿಂದ 5 ಚಾಕುಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಕೊಲೆಗೆ ಸಂಬಂಧಿಸಿದಂತೆ ಉಳಿದ ಸಾಕ್ಷ್ಯಗಳನ್ನು ಶೀಘ್ರ ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.