ಶ್ರದ್ಧಾ ವಾಕರ್ ಕೊಲೆ ಕೇಸ್‌ನಲ್ಲಿ ದೆಹಲಿ ಪೊಲೀಸರು ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಫ್ತಾಭ್ ಪೂನಾವಾಲಾ ಮೇ ತಿಂಗಳಲ್ಲಿ ಮಾಡಿದ ಕೊಲೆ ಹಾಗೂ ನಂತರದ ದಿನಗಳಲ್ಲಿ ಅವನ ದಿನಚರಿ ಎಲ್ಲದರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ.
ನವದೆಹಲಿ (ನ.29): ಡೆಲ್ಲಿಯ ಕುಖ್ಯಾತ 35 ಪೀಸ್ ಮರ್ಡರ್ ಕೇಸ್‌ನಲ್ಲಿ ದೆಹಲಿ ಪೊಲೀಸರು ಆರೋಪಿ ಅಫ್ತಾಬ್ ಪೂನಾವಾಲಾನ ಇಂಚಿಂಚು ಮಾಹಿತಿ ಕಲೆಹಾಕುತ್ತಿದ್ದಾರೆ. ಕೇಸ್‌ಗೆ ಅದೆಲ್ಲಾ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಎನ್ನುವುದು ಗೊತ್ತಿಲ್ಲವಾದರೂ, ಪೊಲೀಸರು ಮೇ ತಿಂಗಳಿನಿಂದ ಇಲ್ಲಿಯವರೆಗೆ ಅಫ್ತಾಬ್ ಪೂನಾವಾಲಾ ಏನ್ ಮಾಡಿದ್ದ, ಏನ್ ತಿಂತಿದ್ದ, ಅವನ ವರ್ತನೆ ಏನು ಎಲ್ಲಾ ಮಾಹಿತಿಗಳನ್ನು ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಅದರ ನಿಟ್ಟಿನಲ್ಲಿ ದೆಹಲಿ ಪೊಲೀಸರು, ವಾಟ್ಸ್‌ಆಫ್, ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಗೂಗಲ್, ಗೂಗಲ್ ಪೇ, ಪೇಟಿಎಂ ಸೇರಿದಂತೆ ಬಹುತೇಕ ಎಲ್ಲಾ ಅಪ್ಲಿಕೇಶನ್‌ಗಳ ಇಂಟರ್ನೆಟ್ ಹಿಸ್ಟರಿಯ ಮಾಹಿತಿ ಕೇಳಿದ್ದಾರೆ. ಅಫ್ತಾಬ್ ಪೂನಾವಾಲಾದ ಇಂಟರ್ನೆಟ್ ಹಿಸ್ಟರಿಯನ್ನು ಕೂಡ ಕೇಸ್‌ಗೆ ದಾಖಲು ಮಾಡುವ ನಿಟ್ಟಿನಲ್ಲಿ ಪೊಲೀಸರು ಪ್ರಯತ್ನಿಸಿದ್ದಾರೆ. ಈ ನಡುವೆ ಫುಡ್ ಡೆಲಿವರಿ ಆಪ್ ಜೊಮಾಟೋ ಈಗಾಗಲೇ ಮಾಹಿತಿ ನೀಡಿದ್ದು, ಇದು ಕೂಡ ಪ್ರಕರಣದಲ್ಲಿ ಪೊಲೀಸರಿಗೆ ಸಹಾಯ ಮಾಡುವಂತಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಫ್ತಾಬ್ ಮೇ ತಿಂಗಳಿಗೂ ಮುನ್ನ ದಿನವವೂ ಇಬ್ಬರಿಗೆ ಆಹಾರವನ್ನು ಆರ್ಡರ್ ಮಾಡುತ್ತಿದ್ದ, ಅದರೆ, ಮೇ ತಿಂಗಳಿನ ಬಳಿಕ ಒಬ್ಬರಿಗೆ ಮಾತ್ರವೇ ಆತ ಆಹಾರವನ್ನು ಆರ್ಡರ್ ಮಾಡುತ್ತಿದ್ದ. ಅಫ್ತಾಬ್ ಹಾಗೂ ಶ್ರದ್ಧಾ ಮೇ 8 ರಂದು ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದರೆ, ಅದಾದ 10 ದಿನಗಳ ಬಳಿಕ ಆತ ಶ್ರದ್ಧಾಳನ್ನು ಕೊಲೆ ಮಾಡಿ 35 ಪೀಸ್ ಮಾಡಿ ಇಡೀ ನಗರದಾದ್ಯಂತ ಎಸೆದಿದ್ದ.
ಬಿಟ್ಟು ಹೋಗುವ ಹೆದರಿಕೆಯಿಂದಾಗಿ ಕೊಂದಿದ್ದ: ಅಫ್ತಾಬ್ ಪೂನಾಲಾವಾ ತನ್ನ ಮೇಲೆ ಮಾಡುತ್ತಿದ್ದ ಹಲ್ಲೆಯಿಂದ ಶ್ರದ್ಧಾ ವಾಕರ್ ಸಂಪೂರ್ಣವಾಗಿ ಬೇಸರಗೊಂಡಿದ್ದಳು. ಆತನನ್ನು ಬಿಟ್ಟು ಬೇರೆ ಜೀವನ ನಡೆಸಬೇಕು ಎಂದು ಆಕೆ ಯೋಚನೆ ಮಾಡುತ್ತಿದ್ದಳು. ಮೇ 3 ಅಥವಾ 4 ರಂದು ಶ್ರದ್ಧಾ ಹಾಗೂ ಅಫ್ತಾಬ್ ಬೇರೆ ಬೇರೆಯಾಗಿ ಬದುಕಬೇಕು ಎಂದು ತೀರ್ಮಾಣ ಮಾಡಿದ್ದರು. ಆದರೆ, ಇದಕ್ಕೆ ಅಫ್ತಾಬ್ ಒಪ್ಪಿರಲಿಲ್ಲ ಎನ್ನುವ ಮಾಹಿತಿ ದೆಹಲಿ ಪೊಲೀಸರಿಗೆ ಗೊತ್ತಾಗಿದೆ. ಶ್ರದ್ಧಾ ನನ್ನನ್ನು ಬಿಟ್ಟು ಬೇರೆಯವನೊಂದಿಗೆ ಬದುಕಲು ಆರಂಭ ಮಾಡುತ್ತಾಳೆ ಎಂದು ಆತ ಯೋಚನೆ ಮಾಡಿದ್ದ. ಅದಕ್ಕಾಗಿ ಶ್ರದ್ಧಾಳನ್ನು ಕೊಲೆ ಮಾಡಿ 35 ಪೀಸ್ ಮಾಡಿದ್ದ ಎನ್ನಲಾಗಿದೆ.
ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಇಂದಿನ ಅಪ್‌ಡೇಟ್
Shraddha Walkar Murder: ನಡು ರಸ್ತೆಯಲ್ಲೇ ಖಡ್ಗ ಹಿಡಿದು ಅಫ್ತಾಬ್ ಮೇಲೆ ಹಲ್ಲೆಗೆ ಯತ್ನ!
ವಿಶ್ವಾಸದಿಂದ ವಿಚಾರಣೆ ಎದುರಿಸಿದ ಅಫ್ತಾಬ್: ವಿಚಾರಣೆ ವೇಳೆ ಅಫ್ತಾಬ್ ತುಂಬಾ ವಿಶ್ವಾಸದಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರಲ್ಲಿ ವಿಷಯದ ಕುರಿತಾಗಿ ಯಾವುದೇ ಪ್ರಶ್ನೆ ಮಾಡಿದರು ಅದಕ್ಕೆ ಬಹಳ ವೇಗವಾಗಿ ಹಾಗೂ ಶಾಂತವಾಗಿ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಅವರು ಪೂರ್ವಯೋಜಿತ ಉತ್ತರ ನೀಡುತ್ತಿದ್ದಾರೆ ಎನ್ನುವ ಭಾವನೆ ಮೂಡಿದೆ.
Shraddha Walkar Murder: ದೇಹವನ್ನು ಕತ್ತರಿಸಲು ಬಳಸಿದ್ದ ಆಯುಧ, ಶ್ರದ್ಧಾಳ ಉಂಗುರ ಪತ್ತೆ!
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮುಂಬೈ ಪೊಲೀಸರು ಅಫ್ತಾಬ್‌ನನ್ನು ವಿಚಾರಣೆಗೆ ಕರೆದಿದ್ದಾಗ ದೆಹಲಿಯ ಫ್ಲಾಟ್‌ನಲ್ಲಿ ಶ್ರದ್ಧಾಳ ದೇಹದ ಕೆಲವು ಭಾಗಗಳು ಇದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.