ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
\ಚಿತ್ರದುರ್ಗ (ನ.5) : ಮುರುಘಾ ಶ್ರೀ ವಿರುದ್ಧದ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಶ್ರೀಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಮೂರು ದಿನಗಳ ವಿಚಾರಣೆ ಮುಗಿದು ಇಂದು ಶ್ರೀಗಳನ್ನು ಕೋರ್ಟ್ ಆದೇಶದಂತೆ ಇಂದು ಸಂಜೆ ಜಿಲ್ಲಾ ಕಾರಾಗೃಹಕ್ಕೆ ಬಿಡಲಾಯಿತು.
undefined
ಮುರುಘಾ ಶ್ರೀಯನ್ನು ಮೂರು ದಿನ ಕಸ್ಟಡಿಗೆ ಪಡೆದ ಪೊಲೀಸರು, ತನಿಖೆ ಚುರುಕುಗೊಳಿಸಿದ ಇಲಾಖೆ
ನವೆಂಬರ್ 4ರ ಸಂಜೆ 5ಗಂಟೆಯಿಂದ 2 ತಾಸುಕಾಲ ಮುರುಘಾಶ್ರೀ(murughashree)ಗೆ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು 'ಫಿಟ್ ಅಂಡ್ ಫೈನ್' ಎಂಬ ಮಾಹಿತಿ ಜಿಲ್ಲಾಸ್ಪತ್ರೆಯ ಮೂಲಗಳಿಂದ ಸಿಕ್ಕಿದೆ. ಇನ್ನು ಇಂದು 10:30 ರಿಂದ ಸುಮಾರು 2ತಾಸು ಕಾಲ ಮುರುಘಾಮಠ(Murugha matha)ದಲ್ಲಿ ಸ್ಥಳ ಮಹಜರು ನಡೆಸಲಾಯಿತು. ಮುರುಘಾಶ್ರೀ ಕಚೇರಿ, ಬೆಡ್ ರೂಮ್, ಬಾತ್ ರೂಮ್ ಗೆ ತೆರಳಿ ಸ್ಥಳ ಮಹಜರು ನಡೆಸಲಾಯಿತು. ಸ್ಥಳ ಮಹಜರು ವೇಳೆ ಮುರುಘಾಶ್ರೀ ಬಟ್ಟೆ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು 2ಬ್ಯಾಗ್ ಗಳಲ್ಲಿ ತೆಗೆದೊಯ್ದರು.
ಇನ್ನು ಮುರುಘಾಶ್ರೀಗಳನ್ನು ಮೂರು ದಿನಗಳಲ್ಲಿ ಸುಮಾರು 12ಕ್ಕೂ ಹೆಚ್ಚು ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಪಿ ಕೆ. ಪರಶುರಾಮ್, ಸಿಪಿಐ ಬಾಲಚಂದ್ರ ನಾಯ್ಕ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮಠದ ಅಡುಗೆ ಸಹಾಯಕಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ದೂರು ಹಿನ್ನೆಲೆ. ಮಠದ ಕೆಲ ನೌಕರರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದೀರಂತೆ ಎಂಬ ಪ್ರಶ್ನೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಸಾಹೇಬರೇ ಎಂದು ಮುರುಘಾಶ್ರೀ ಉತ್ತರಿಸಿದ್ದಾರೆ. ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಸರದಿಯಂತೆ ಬೆಡ್ ರೂಮ್ ಗೆ ಕರೆಸುತ್ತಿದ್ದಿರಂತೆ ಎಂಬ ಪ್ರಶ್ನೆಗೆ ಯಾವುದೇ ಮಕ್ಕಳ ಮೇಲೆ ದೌರ್ಜನ್ಯ ಮಾಡಿಲ್ಲ ಸಾಹೇಬರೆ ಎಂದು ಮುರುಘಾಶ್ರೀ ಉತ್ತರಿಸಿದ್ದಾರೆ.
ಮಠದ ಬಳಿ ಪತ್ತೆಯಾದ ಮಕ್ಕಳಿಗೆ ನೀವೇ ಜನ್ಮದಾತರಂತೆ ಎಂಬ ಪ್ರಶ್ನೆಗೆ ಸಾಹೇಬರೆ ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ ಎಲ್ಲಾ ಸುಳ್ಳು ಎಂದಿದ್ದಾರೆ. ವಿನಾಕಾರಣ ಇಂಥ ಗಂಭೀರ ಆರೋಪ ಬರಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸುತ್ತ ಮಠದ ಆಸ್ತಿ, ಅಧಿಕಾರಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಏಕ ಸದಸ್ಯ ಟ್ರಸ್ಟಿ ಆಗಿರುವ ಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. 'ನನ್ನ ಕಥೆ ಮುಗಿಯಲಿ' ಎಂಬುದು ನನ್ನ ವಿರೋಧಿಗಳ ಉದ್ದೇಶವಾಗಿದ್ದು ಸುಳ್ಳು ದೂರು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮುರುಘಾಶ್ರೀ ಹೇಳಿದ್ದಾರೆ. ಸೇಬು, ಚಾಕೋಲೇಟ್ ನೀಡಿ ಮಕ್ಕಳನ್ನು ಕರೆಸಿಕೊಳ್ಳುವ ಆರೋಪದ ಬಗ್ಗೆ ಉತ್ತರಿಸಿ ಭೇಟಿಗೆ ಬಂದ ಭಕ್ತರಿಗೆ ನಮ್ಮ ಬಳಿಯಿದ್ದ ಹಣ್ಣು, ಕಲ್ಲು ಸಕ್ಕರೆ ನೀಡುವ ಪದ್ಧತಿಯಿದೆ ಆದ್ರೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು ಎಂದಿದ್ದಾರೆ.
ಚಿತ್ರದುರ್ಗಕ್ಕೆ ADGP ಅಲೋಕ್ ಕುಮಾರ್ ಭೇಟಿ; ಹೊಟ್ಟೆಬಾಕ ಪೊಲೀಸರಿಗೆ ಕ್ಲಾಸ್!
ಸೇಬು, ಚಾಕೋಲೇಟ್ ತಿಂದ ಬಳಿಕ ಮಕ್ಕಳಿಗೆ ಮತ್ತು ಬರುತ್ತಿತ್ತು ಎಂಬ ಪ್ರಶ್ನೆ ಎದುರಾದಾಗ ಇವೆಲ್ಲಾ ಸುಳ್ಳು ಆರೋಪ ಸಾಹೇಬರೇ ನನ್ನ ವಿರುದ್ಧದ ಷಡ್ಯಂತ್ರ ನಡೆದಿದೆ. ಕೂಲಂಕಷ ತನಿಖೆ ಮಾಡಿ ಷಡ್ಯಂತ್ರವು ಬಯಲಾಗುತ್ತದೆ ಸಾಹೇಬ್ರೆ ಎಂದಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.