Andhra Pradesh: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೇಲೆ 4 ಸಹಪಾಠಿಗಳಿಂದ ಹಲ್ಲೆ: ಐರನ್‌ ಬಾಕ್ಸ್‌ನಿಂದ ಸುಟ್ಟ ಪಾಪಿಗಳು..!

By BK AshwinFirst Published Nov 5, 2022, 3:29 PM IST
Highlights

ಅಂಕಿತ್‌ಗೆ ಬರೆ ಹಾಕಲು ಆ ನಾಲ್ವರು ವಿದ್ಯಾರ್ಥಿಗಳು ಐರನ್‌ ಬಾಕ್ಸ್‌ ಬಳಸಿದ್ದಾರೆ ಹಾಗೂ ಕೋಲುಗಳು, ಪಿವಿಸಿ ಪೈಪ್‌ಗಳಿಂದ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೂ, ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಆಂಧ್ರ ಪ್ರದೇಶದ (Andhra Pradesh) ಪಶ್ಚಿಮ ಗೋದಾವರಿ (West Godavari) ಜಿಲ್ಲೆಯ ಭೀಮಾವರಂನ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನಲ್ಲಿ (Engineering College Hostel)  ವಿದ್ಯಾರ್ಥಿಯೊಬ್ಬನ (Student)  ಮೇಲೆ ಮನಬಂದಂತೆ ಹಲ್ಲೆ (Beaten) ಮಾಡಲಾಗಿದೆ. ತನ್ನನ್ನು ಬಿಟ್ಟುಬಿಡಿ ಎಂದು ಆತ ಬೇಡಿಕೊಳ್ಳುತ್ತಿದ್ದರೂ, ನಾಲ್ವರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಈ ಸಂಬಂಧದ ವಿಡಿಯೋ ವೈರಲ್‌ (Video Viral) ಆಗುತ್ತಿದೆ. ಈ ಹಿನ್ನೆಲೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.  ಈ ವಿಡಿಯೋದಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ತನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿದ್ದ ಹಾಗೂ ಕ್ಷಮೆ ಕೇಳುತ್ತಿದ್ದರೂ, ಕೋಲುಗಳಲ್ಲಿ ಆತನನ್ನು ಇತರ ವಿದ್ಯಾರ್ಥಿಗಳು ಹೊಡೆಯುತ್ತಿದ್ದಾರೆ. ಇನ್ನು, ಆತನ ಶರ್ಟ್‌ ಹರಿದುಹೋದಂತೆ ಕಾಣಿಸುತ್ತಿದ್ದು, ಅಲ್ಲದೆ ಅದನ್ನು ಬಿಚ್ಚುವಂತೆ ಹಲ್ಲೆ ಮಾಡುತ್ತಿರುವ ವಿದ್ಯಾರ್ಥಿಗಳು ಒತ್ತಾಯಿಸುತ್ತಿರುವುದನ್ನು ನೋಡಬಹುದಾಗಿದೆ. 

ಹಲ್ಲೆಗೊಳಗಾದ ವಿದ್ಯಾರ್ಥಿನಿ ಹಾಗೂ ಹಲ್ಲೆ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಆಂಧ್ರದ ಎಸ್‌ಆರ್‌ಕೆಆರ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಅಧ್ಯಯನ ಮಾಡುತ್ತಿದ್ದಾರೆ. ಈ ಘಟನೆ 2 ದಿನಗಳ ಹಿಂದೆ ನಡೆದಿದೆ ಎಂದೂ ವರದಿಯಾಗಿದೆ. ಇನ್ನು, ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದನ್ನು ಓದಿ: ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವು: ಶಿಕ್ಷಕರೇ ಕಾರಣ ಎಂದು ಪೋಷಕರ ಆರೋಪ
 

student Beaten, Burnt With iron box by college mates in Andhrapradesh pic.twitter.com/wKA4mrpZ4G

— VISHAL SAVANE (@VISHALSAVANE)

ಆತನ ಮೈಮೇಲೆಲ್ಲ ಗಾಯಗಳಾಗಿರುವ ಗುರುತುಗಳಿದ್ದು, ಆತನ ಎದೆ ಹಾಗೂ ಕೈಗಳ ಮೇಲೆ ಬರೆ ಹಾಕಿರುವ ಗುರುತು ಸಹ ಇದೆ. ಅಂಕಿತ್‌ಗೆ ಬರೆ ಹಾಕಲು ಆ ನಾಲ್ವರು ವಿದ್ಯಾರ್ಥಿಗಳು ಐರನ್‌ ಬಾಕ್ಸ್‌ ಬಳಸಿದ್ದಾರೆ ಹಾಗೂ ಕೋಲುಗಳು, ಪಿವಿಸಿ ಪೈಪ್‌ಗಳಿಂದ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೂ, ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. 

ಇದನ್ನೂ ಓದಿ: ಮಣಿಪಾಲ್‌ನಲ್ಲಿ ನೈತಿಕ ಪೊಲೀಸ್‌ ಗಿರಿ: ಕುಡಿದ ಕಾರಣಕ್ಕೆ ಯುವತಿಯ ಮೇಲೆ ಸಾಮೂಹಿಕ ಹಲ್ಲೆ
 
ಘಟನೆ ಖಾಸಗಿ ಹಾಸ್ಟೆಲ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಆದರೂ, ಈ ಸಂಬಂಧ ಎಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್‌ ಹಾಗೂ ಆಡಳಿತ ಮಂಡಳಿಯನ್ನು ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ.   

ಇದನ್ನು ಓದಿ: Chhattisgarh: ಗೋಮಾಂಸ ಮಾರಾಟ ಮಾಡಿದ್ದಕ್ಕೆ ಇಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ

ಬೆಂಗಳೂರಿನಲ್ಲಿ ಶಾಲೆಯಲ್ಲೇ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ನಾಗೇಂದ್ರ ಅವರು, ತಮ್ಮ ಪತ್ನಿ ಹಾಗೂ ಇಬ್ಬರ ಮಕ್ಕಳ ಜತೆ ರಾಮಚಂದ್ರಪುರದಲ್ಲಿ ನೆಲೆಸಿದ್ದಾರೆ. ಮನೆ ಸಮೀಪದ ಶಾಲೆಯಲ್ಲಿ ಅವರ ಪುತ್ರಿ ನಿಶ್ಚಿತಾ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಸಮೀಪದ ಆಸ್ಪತ್ರೆಗೆ ನಿಶ್ಚಿತಾಳನ್ನು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾಳೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ನಿಶ್ಚಿತಾ ತಂದೆ ನಾಗೇಂದ್ರ ಅವರು ದೂರು ನೀಡಿದ್ದಾರೆ.

ಇನ್ನು, ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ನಿಶ್ಚಿತಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೋಷಕರಿಂದ ದೂರು ದಾಖಲಾಗಿದೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ವಸಂತರಾವ್‌ ಪಾಟೀಲ್‌ ತಿಳಿಸಿದ್ದಾರೆ.  

click me!