Fraud; ವರ್ಕ್ ಫ್ರಾಂ ಹೋಂ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ವಂಚಿಸ್ತಾರೆ.. ಹುಷಾರ್!

By Suvarna News  |  First Published Nov 16, 2021, 12:46 AM IST

* ವರ್ಕ್ ಫ್ರಾಂ ಹೋಂ ಕೆಲಸ ಕೊಡಿಸುವುದಾಗಿ ವಂಚನೆ
* ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಬೆಟ್ಟಿಂಗ್ ಕೋರರು
* ಜಾಬ್ ಹುಡುಕುವ ಮುನ್ನ ಎಚ್ಚರಿಕೆ ಇರಲಿ
* ಮದ್ಯದ ಅಮಲಿನಲ್ಲಿ ಯುವಕನ ಹತ್ಯೆ ಮಾಡಿದರು


ಬೆಂಗಳೂರು(ನ. 15)   ಲಾಕ್ ಡೌನ್ (Lockdown) ತೆರವಾದ ನಂತರ ಕೆಲಸ (Job) ಹುಡುಕುತ್ತಿರುವ ಯುವಕರೇ ಅಲರ್ಟ್ ಆಗಿರಿ. ಹೌದು ಎಚ್ಚರಿಕೆ ಮಾತು ಹೇಳಲೇಬೇಕಿದೆ ವರ್ಕ್ ಫ್ರಂ ಹೋಮ್ ನೀಡುವುದಾಗಿ ಲಕ್ಷ ಲಕ್ಷ ವಂಚನೆ  ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

ದಕ್ಷಿಣ ವಿಭಾಗ ಹಾಗೂ ಅಗ್ನೇಯ ವಿಭಾಗ ಠಾಣೆಗಳಲ್ಲಿ‌ (Bengaluru Police) ಎಫ್ ಐ ಆರ್(FIR) ದಾಖಲಾಗಿದೆ. ಅಗ್ನೇಯ ಸಿಇಎನ್ ಠಾಣೆಗೆ ಪುನೀತ್ ಪೊನ್ನಪ್ಪ ಎಂಬುವರು ದೂರು ನೀಡಿದ್ದಾರೆ. ದಕ್ಷಿಣ ಸಿಇಎನ್ ಠಾಣೆಯಲ್ಲಿ ಹರ್ಷವರ್ಧನ್  ಎಂಬುವರು ದೂರು ದಾಖಲಿಸಿದ್ದಾರೆ.

Latest Videos

undefined

ಪುನೀತ್ ಪೊನ್ನಪ್ಪ ಗೆ ಇ ಕಾಮರ್ಸ್ ಕಂಪನಿಯಿಂದ ರಿಚಾರ್ಜ್ ಕೆಲಸ ನೀಡುವುದಾಗಿ ವಂಚನೆ ಮಾಡಲಾಗಿದೆ 5. 4 ಲಕ್ಷ ರೂ. ವಂಚನೆ ಮಾಡಲಾಗಿದೆ. ಹರ್ಷವರ್ಧನ್ ಗೆ ಅಮೇಜಾನ್ ನಿಂದ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ವಂಚಿಸಲಾಗಿದೆ. ಇವರಿಗೂ ಸುಮಾರು  5 ಲಕ್ಷ ರೂ. ವಂಚಿಸಲಾಗಿದೆ.  ನೀಡಿರುವ ಟಾಸ್ಕ್ ಗಳನ್ನ ಪೂರ್ಣಗೊಳಿಸುವಂತೆ ಸೂಚಿಸಿ ವಂಚಿಸಲಾಗಿದೆ. ಎರಡು ಠಾಣೆಗಳಲ್ಲಿ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ.

ಮನೆ ಮಾಲೀಕರೆ ಎಚ್ಚರ, ಹೀಗೂ ಟೋಪಿ ಹಾಕ್ತಾರೆ ಹುಷಾರ್

ಆನ್ ಲೈನ್ ನಲ್ಲಿ ಜಾಬ್ ಸರ್ಚ್ ಮಾಡುವ ಮುನ್ನ ಯಾವ ಸೈಟ್ ನಲ್ಲಿ  ಹುಡುಕುತ್ತಿದ್ದೇವೆ. ಹಿನ್ನೆಲೆ ಏನು.. ಕಂಪನಿ ನೋಂದಣಿ ಆಗಿದೆಯೋ ಇಲ್ಲವೋ ಎಂಬುದನ್ನು ಗಮನಿಸಿಕೊಳ್ಳಬೇಕಾಗುತ್ತದೆ.

ಜಾಬ್ ಸರ್ಚ್ ಗೆಂದು ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದಾಗ ಅದರ ಮೂಲಗಳನ್ನು, ಸೆಕ್ಯೂರ್ಡ್ ಆಗಿದೆಯಾ ಇಲ್ಲವೋ ಎಂಬುದನ್ನು ನೋಡಿಕೊಂಡು ಹೆಜ್ಜೆ ಮುಂದಕ್ಕೆ ಇಡುವುದು ಉತ್ತಮ.

ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳಿಂದ  ವ್ಯಕ್ತಿ ಕೊಲೆ:  ಕಳೆದ ರಾತ್ರಿ ಬೆಂಗಳೂರಿನ ನ್ಯೂ ಬೈಯಪ್ಪನಹಳ್ಳಿಯಲ್ಲಿ ಘಟನೆ ನಡೆದಿದೆ ಮಧ್ಯಪ್ರದೇಶ ಮೂಲದ ಭೂಪತ್ ಸಿಂಗ್ (25) ಕೊಲೆಯಾದ(Murder) ವ್ಯಕ್ತಿ. ಸ್ನೇಹಿತನ ಜೊತೆ ಹೊರಗೆ ಹೊರಟಿದ್ದ ಭೂಪತ್ ಸಿಂಗ್ ಜತೆ ದುಷ್ಕರ್ಮಿಗಳು ಜೊತೆ  ಗಲಾಟೆ ತೆಗೆದಿದ್ದಾರೆ ಭೂಪತ್ ಸಿಂಗ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದ ಆರೋಪಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ ಫಲಕಾರಿಯಾಗದೆ ಭೂಪತ್ ಸಾವು ಕಂಡಿದ್ದಾರೆ.

ಬೈಯಪ್ಪನಹಳ್ಳಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.  ಮಣಿ, ಡೋರಿ, ವಿಷ್ಣು , ಸೀನ , ಅಭಿ ಮೇಲೆ ಕೊಲೆ ಆರೋಪ ಕೇಳಿಬಂದಿದೆ.

ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯ ಬಂಧನ; ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದವರನ್ನು ಸಿಸಿಬಿ(CCB) ಪೊಲೀಸರು ಬಂಧಿಸಿದ್ದಾರೆ. ಅನ್ಲೈನ್ ನಲ್ಲಿ(Online) ಅವ್ಯಾಹತವಾಗಿ ಬೆಟ್ಟಿಂಗ್ ನಡೆಸುತ್ತಿದ್ದರು. ಹೇಮಂತ್ ಬಂಧಿತ ಆರೋಪಿ.

ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ  ಟಿ ಟ್ವೆಂಟಿ ವಿಶ್ವಕಪ್(T20 World Cup) ಫೈನಲ್ ಪಂದ್ಯದ‌ ಮೇಲೆ‌ ಬೆಟ್ಟಿಂಗ್ ನಡೆಸುತ್ತಿದ್ದ. ವಿಜಯನಗರದ ಆರ್ ಪಿಸಿ ಲೇಔಟ್ ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ ಸೆರೆ ಸಿಕ್ಕಿದ್ದಾನೆ ಬಂಧಿತನಿಂದ  ಬರೋಬ್ಬರಿ ಆರು ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ವಿಜಯನಗರ‌ (Vijayanagar)ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ ಡೌನ್ ತೆರೆವಾದ ಮೇಲೆ ನಿಧಾನಕ್ಕೆ ಅಪರಾಧ ಚಟುವಟಿಕೆಗಳು ಏರಿಕೆ ಕಾಣುತ್ತಿವೆ. ಆನ್ ಲೈನ್ ಮೂಲಕವೇ ವಂಚಕರು ಗಾಳ ಹಾಕುತ್ತಿದ್ದಾರೆ. ನೀವು ಲಾಟರಿ ಗೆದ್ದಿದ್ದೀರಿ, ನಿಮಗೆ ಬಹುಮಾನ ಬಂದಿದೆ. ನಿಮ್ಮ ಬ್ಯಾಂಕ್ (Bank)ಖಾತೆ ಬ್ಲಾಕ್ ಆಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ, ನಿಮ್ಮ ಖಾತೆ ಕೆವೈಸಿ ಮಾಡಿಸಬೇಕಿದೆ ಹೀಗೆ ಹಲವಾರು ನೆಪ ಹೇಳಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಓಟಿಪಿ (OTP) ಶೇರ್ ಮಾಡುವಂತೆಯೂ ಕೇಳಿಕೊಳ್ಳುತ್ತಾರೆ. ಅವರ ದಾಳಕ್ಕೆ ಸಿಕ್ಕಿ ಒಟಿಪಿ ಶೇರ್ ಮಾಡಿದರೆ ನಿಮ್ಮ ಖಾತೆಯಿಂದ ಹಣ ಗೊತ್ತಿಲ್ಲದೇ ಮಂಗಮಾಯವಾಗುತ್ತದೆ. 

 

click me!