ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ವೃದ್ಧೆಯೊಬ್ಬರು ಬುಧವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಬೆಂಗಳೂರು (ಆ.29): ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ವೃದ್ಧೆಯೊಬ್ಬರು ಬುಧವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ. ಜಾಲಹಳ್ಳಿ ಏರ್‌ಫೋರ್ಸ್ ಕ್ಯಾಂಪಸ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ರಾಜ್ ದುಲಾರಿ ಸಿನ್ಹಾ (76) ಮೃತಪಟ್ಟ ಮಹಿಳೆಯಾಗಿದ್ದಾರೆ. ಜಾಲಹಳ್ಳಿಯ ಏರ್‌ಫೋರ್ಸ್ ಈಸ್ಟ್ 7ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಪುಟ್‌ಬಾಲ್ ಮೈದಾನದಲ್ಲಿ ಬೆಳಗ್ಗೆ 6.30 ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಮಹಿಳೆ ಮೇಲೆ 10-12 ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ನಾಯಿಗಳ ಹಿಂಡು ವೃದ್ದೆಯ ತಲೆ ಭಾಗದ ಚರ್ಮವನ್ನು ಕಿತ್ತು ಹಾಕಿವೆ. ಮುಖದ ಭಾಗವನ್ನು ಕಚ್ಚಿವೆ, ಬಲಗೈಗೆ ಕಚ್ಚಿ ಗಾಯಗೊಳಿಸಿವೆ.
ಈ ವೇಳೆ ವಾಯುವಿಹಾರ ಮಾಡುತ್ತಿದ್ದ ಏರ್‌ಪೋರ್ಸ್ ಅಧಿಕಾರಿ ಹೇಮಚಂದ್ ಎಂಬುವವರು ಬಂದು ನಾಯಿಗಳನ್ನು ಓಡಿಸಿದ್ದಾರೆ. ಮಹಿಳೆಯ ಅಳಿಯ ಎ.ಕೆ.ಸಿಂಗ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಹೇಮಚಂದ್ ಹಾಗೂ ಎ.ಕೆ.ಸಿಂಗ್ ಅವರು ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಿವೃತ್ತ ಶಿಕ್ಷಕಿಯಾಗಿರುವ ಮಹಿಳೆ ಅಳಿಯ-ಮಗಳನ್ನು ಭೇಟಿಯಾಗಲು ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
undefined
Bengaluru: ಮನೆ ಮಾರಾಟಕ್ಕೆ ಒಪ್ಪದ ಎರಡನೇ ಪತ್ನಿಯ ಕೊಂದು, ಕತೆ ಕಟ್ಟಿದ ಗಂಡ!
ದಾಳಿ ನಡೆಸಿದ ನಾಯಿಗಳು ಎಬಿಸಿ ಕೇಂದ್ರದಲ್ಲಿ ನಿಗಾ: ಘಟನೆ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ದಾಳಿ ನಡೆಸಿದ ನಾಯಿಗಳನ್ನು ಹಿಡಿದು ಎಬಿಸಿ ಕೇಂದ್ರದಲ್ಲಿ ನಿಗಾ ವಹಿಸಲಾಗುತ್ತಿದೆ. ಮೃತ ಮಹಿಳೆಗೆ ಬಿಬಿಎಂಪಿಯಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಆನ್ಲೈನ್ ಗೇಮಿಂಗ್ ಹುಚ್ಚಾಟ, 1 ಲಕ್ಷ ಸಮೇತ ಯುವಕ ಪರಾರಿ: ಇಲ್ಲಿನ ನಿವಾಸಿ ವರುಣ್ (18) ಆನ್ಲೈನ್ ಗೇಮ್ನಲ್ಲಿ ₹20 ಸಾವಿರ ಕಳೆದು, ಮನೆಯಿಂದ ಪರಾರಿಯಾಗಿದ್ದಾನೆ. ಗೌರಮ್ಮ ಮತ್ತು ನಾಗರಾಜ್ ದಂಪತಿ ಪುತ್ರ ವರುಣ್ ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ. ಈತನಿಗೆ ವಿಪರೀತ ಆನ್ಲೈನ್ ಗೇಮ್ ಹುಚ್ಚಿತ್ತು. ಒಂದು ತಿಂಗಳ ಹಿಂದೆ ಆನ್ಲೈನ್ ಗೇಮ್ನಲ್ಲಿ ₹20 ಸಾವಿರ ಕಳೆದಿದ್ದಲ್ಲದೆ, ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು ಸಮೇತ ನಾಪತ್ತೆಯಾಗಿದ್ದಾನೆ. ತಿಂಗಳಿಂದ ಮನೆಗೆ ಬಾರದ ಮಗನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದಾರೆ.
Gadag: ಬುದ್ದಿ ಮಾತು ಹೇಳಿದ ತಾಯಿಯನ್ನೇ ಕೊಂದು ಹಾಕಿದ ಪಾಪಿ ಮಗ!
ತಂದೆ ನಾಗರಾಜ್ ಆಟೋ ಚಾಲಕನಾಗಿದ್ದು, ತಾಯಿ ಗೌರಮ್ಮ ಗೃಹಿಣಿ. ಏಕೈಕ ಪುತ್ರ ವರುಣ್ ನಾಪತ್ತೆ ಆದಾಗಿನಿಂದ ದಂಪತಿ ಮಗನ ಚಿಂತನೆಯಲ್ಲಿ ಕೊರಗುತ್ತಿದ್ದಾರೆ. ಮಗ ಮನೆಗೆ ಬಂದರೆ ಸಾಕು, ಯಾವುದೇ ಹಣದ ವಿಷಯ ಎತ್ತುವುದಿಲ್ಲ, ಮಗ ಕಣ್ಮುಂದೆ ಇದ್ದರೆ ಸಾಕು. ಯಾರಾದರು ನನ್ನ ಮಗನನ್ನು ನೋಡಿದ್ದರೆ, ನಮಗೆ ತಿಳಿಸಿ ಎಂದು ಗೌರಮ್ಮ ಕಣ್ಣೀರು ಹಾಕುತ್ತಿದ್ದಾರೆ. ಮಗನನ್ನು ಹುಡುಕಿಕೊಡುವಂತೆ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.