Gadag: ಬುದ್ದಿ ಮಾತು ಹೇಳಿದ ತಾಯಿಯನ್ನೇ ಕೊಂದು ಹಾಕಿದ ಪಾಪಿ ಮಗ!

By Kannadaprabha News  |  First Published Aug 29, 2024, 11:22 AM IST

ಸರಿಯಾಗಿ ಜೀವನ ನಡೆಸು, ಎಲ್ಲರೊಂದಿಗೂ ಯಾಕೆ ತಂಟೆ ತಕರಾರು ಮಾಡುತ್ತೀಯಾ ಎಂದು ಬುದ್ದಿವಾದ ಹೇಳಿದ ತಾಯಿಯನ್ನೇ ಪಾಪಿ ಮಗನೊಬ್ಬ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಗರದ ದಾಸರ ಓಣಿಯಲ್ಲಿ ನಡೆದಿದೆ. 


ಗದಗ (ಆ.29): ಸರಿಯಾಗಿ ಜೀವನ ನಡೆಸು, ಎಲ್ಲರೊಂದಿಗೂ ಯಾಕೆ ತಂಟೆ ತಕರಾರು ಮಾಡುತ್ತೀಯಾ ಎಂದು ಬುದ್ದಿವಾದ ಹೇಳಿದ ತಾಯಿಯನ್ನೇ ಪಾಪಿ ಮಗನೊಬ್ಬ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಗರದ ದಾಸರ ಓಣಿಯಲ್ಲಿ ನಡೆದಿದೆ. ದಾಸರ ಓಣಿಯ ನಿವಾಸಿ ಶಾರದಮ್ಮ ಅಗಡಿ (85) ಕೊಲೆಯಾದ ವೃದ್ಧೆ. ಸಿದ್ಧಲಿಂಗಪ್ಪ ಅಗಡಿ ಕೊಲೆ ಆರೋಪಿ. ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಘಟನೆ ವಿವರ: ಮಂಗಳವಾರ ರಾತ್ರಿ ಸಿದ್ದಲಿಂಗಪ್ಪ ಪಕ್ಕದ ಮನೆಯವರ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಈ ವೇಳೆ ಮಧ್ಯಪ್ರವೇಶಿಸಿದ ವೃದ್ಧ ತಾಯಿ ಶಾರದಮ್ಮ, ನನ್ನ ಮಗನ ವರ್ತನೆ ಸರಿಯಿಲ್ಲ, ದಯವಿಟ್ಟು ಬಿಟ್ಟು ಬಿಡಿ ಎಂದು ವಿನಂತಿಸಿ ಮಗನಿಗೆ ಬುದ್ಧಿವಾದ ಹೇಳಿ ಮನೆಗೆ ಕರೆ ತಂದಿದ್ದಳು. ಇದರಿಂದ ಆಕ್ರೋಶಗೊಂಡ ಸಿದ್ಧಲಿಂಗಪ್ಪ, ವೃದ್ಧೆ ಶಾರದಮ್ಮಳನ್ನು ಶಿವದಾರದಿಂದ (ತೆಳುವಾದ ನೂಲಿನ ದಾರ) ಉಸಿರು ಗಟ್ಟುವಂತೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ವಿಷಯ ತನ್ನ ಸಹೋದರಿಯರಿಗೆ ಫೋನ್ ಮಾಡಿಯೂ ತಿಳಿಸಿದ್ದಾನೆ.

Latest Videos

undefined

ಪರಪ್ಪನ ಅಗ್ರಹಾರದಲ್ಲಿ ನನಗೆ ಸಿಂಗಲ್‌ ಇಡ್ಲಿ ಕೊಟ್ಟಿರಲಿಲ್ಲ: ಕರವೇ ನಾರಾಯಣಗೌಡ

ಆದರೆ ಸಹೋದರನ ಮಾತು ನಂಬದ ಸಹೋದರಿಯರೂ ಸುಮ್ಮನಾಗಿದ್ದಾರೆ. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವೃದ್ಧೆ ಮೃತಪಟ್ಟಿರುವುದನ್ನು ಖಚಿತಪಡಿಸಿದ ನಂತರ ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದಾರೆ. ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!