ಕೊಳೆತ ಸ್ಥಿತಿಯಲ್ಲಿ ಹಿರಿಯ ದಂಪತಿ ಶವ ಪತ್ತೆ, ಇತ್ತ ಸಾಕಿದ್ದ 50 ಪಾರಿವಾಳಗಳೂ ಸಾವು

By Mahmad RafikFirst Published Jun 23, 2024, 5:14 PM IST
Highlights

ಮನೆಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪೊಲೀಸರು ಬಂದು ಮನೆ ಬಾಗಿಲು ಒಡೆದು ಒಳಗೆ ಪರಿಶೀಲನೆ ನಡೆಸಿದಾಗ ದಂಪತಿಯ ಮೃತದೇಹ ಪತ್ತೆಯಾಗಿದೆ. ಜೊತೆಗೆ ಸಾಕಿದ್ದ ಎಲ್ಲಾ ಪಾರಿವಾಳಗಳು ಸಹ ಸತ್ತಿವೆ. 

ಬುಲಂದ್‌ಶಹರ್: ಕೊಳೆತ ಸ್ಥಿತಿಯಲ್ಲಿ ಹಿರಿಯ ದಂಪತಿ ಶವ ಪತ್ತೆಯಾಗಿದ್ದು, ಇತ್ತ ಸಾಕಿದ್ದ 50 ಪಾರಿವಾಳಗಳೂ ಸಹ ಸಾವನ್ನಪ್ಪಿವೆ. ಉತ್ತರ ಪ್ರದೇಶದ ಬುಲಂದ್‌ಶಹರ್ ನಗರದ ದಿಬೈ ಎಂಬಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮಣ್ ಸಿಂಗ್ (68) ಮತ್ತು ಶ್ಯಾಮವತಿ (66) ಎಂದು ಗುರುತಿಸಲಾಗಿದೆ. ಈ ದಂಪತಿ ಸಾಕಿದ್ದ 50 ಪಾರಿವಾಳಗಳೂ ಸಹ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಲಕ್ಷ್ಮಣ್ ಸಿಂಗ್ ಮತ್ತು ಶ್ಯಾಮವತಿ ದಿಬೈನ ತಮ್ಮ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ದಂಪತಿಯ ಓರ್ವ ಪುತ್ರ ದೆಹಲಿಯಲ್ಲಿ ವಾಸವಾಗಿದ್ದನು. ಮನೆಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪೊಲೀಸರು ಬಂದು ಮನೆ ಬಾಗಿಲು ಒಡೆದು ಒಳಗೆ ಪರಿಶೀಲನೆ ನಡೆಸಿದಾಗ ದಂಪತಿಯ ಮೃತದೇಹ ಪತ್ತೆಯಾಗಿದೆ. ಜೊತೆಗೆ ಸಾಕಿದ್ದ ಎಲ್ಲಾ ಪಾರಿವಾಳಗಳು ಸಹ ಸತ್ತಿವೆ. 

Latest Videos

ತುಮಕೂರು ಕಾಲೇಜು ವಿದ್ಯಾರ್ಥಿನಿ ಅಂಕಲ್‌ನೊಂದಿಗೆ ಪರಾರಿ; ನಾಲ್ಕು ದಿನದ ಬಳಿಕ ಶವವಾಗಿ ಪತ್ತೆಯಾದ ಕುವರಿ

ಲಕ್ಷ್ಮಣ್ ಸಿಂಗ್ ಮತ್ತು ಶ್ಯಾಮವತಿ ಮೃತರಾಗಿ ಎರಡರಿಂದ ನಾಲ್ಕು ದಿನಗಳು ಆಗಿರಬಹುದು. ಹಾಗಾಗಿ ದೇಹ ಕೊಳೆಯಲು ಆರಂಭಿಸಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ದೆಹಲಿಯಲ್ಲಿರೋ ಮಗನಿಗೆ ಪೋಷಕರು ಸಾವಿನ ಸುದ್ದಿ ತಿಳಿಸಲಾಗಿದೆ. ಪಾರಿವಾಳಗಳ ಸಾವಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪೊಲೀಸರ ಅನುಮಾನ ಏನು?

ಲಕ್ಷ್ಮಣ್ ಸಿಂಗ್ ದೀರ್ಘ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಲಕ್ಷ್ಮಣ್ ಸಿಂಗ್ ಮೃತರಾಗಿರಬಹುದು. ಇದನ್ನು ನೋಡಿದ ಶ್ಯಾಮವತಿ ಆಘಾತಕ್ಕೊಳಗಾಗಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಕ್ಕಪಕ್ಕದ ನಿವಾಸಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತರಿಬ್ಬರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಸಹ ಪತ್ತೆಯಾಗಿಲ್ಲ.

ಮದ್ವೆಯಾಗಿದ್ರೂ ಲಿವ್ ಇನ್ ರಿಲೇಶನ್‌ಶಿಪ್; ಹಾಲಿ ಗೆಳತಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಂದು ಜೈಲುಪಾಲು

click me!