* ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
* ವಿಡಿಯೋ ನಕಲಿ ಎಂದು ತಿಳಿಸಿದ ಸದಾನಂದ ಗೌಡ
* ಈ ಬಗ್ಗೆ ಸೈಬರ್ ವಿಭಾಗಕ್ಕೆ ದೂರು ನೀಡಿದ್ದೇನೆ
* ಫಾರ್ ವರ್ಡ್ ಮಾಡುವುದು ಶಿಕ್ಷಾರ್ಹ ಅಪರಾಧ
ಬೆಂಗಳೂರು(ಸೆ. 19) ತಮಗೆ ಸಂಬಂಧಿಸಿದ ಅವಹೇಳನಕಾರಿ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದ್ದು ಈ ಬಗ್ಗೆ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಸದಾನಂದ ಗೌಡ, ತಿರುಚಿದ , ನಕಲಿ ವಿಡಿಯೋ ಒಂದು ಹರಿದಾಡುತ್ತಿರುವುದು ತಿಳಿದು ಬಂದಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ನನ್ನ ತೇಜೋವಧೆ ಮಾಡಲು ಇಂಥ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ಹಿಂದಿನ ಕಾರಣ ತಿಳಿಸಿದ ಸದಾನಂದ ಗೌಡ
ಸೈಬರ್ ಅಪರಾಧ ದಳಕ್ಕೆ ದೂರು ನೀಡಿದ್ದೇನೆ. ಈ ಕೆಲಸ ಮಾಡಿದ ಕಿರಾತಕರ ಬಂಧಿಸಲಾಗುತ್ತದೆ ಎನ್ನುವ ನಂಬಿಕೆ ಇದೆ ಎಂಧು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಈ ವಿಡಿಯೋ ಅಪ್ ಲೋಡ್ ಮಾಡುವುದು ಮತ್ತು ಫಾರ್ವ್ ವರ್ಡ್ ಮಾಡುವುದು ಸಹ ಶಿಕ್ಷಾರ್ಯ ಅಪರಾಧವಾಗುತ್ತದೆ. ಇಮಥ ಕೃತ್ಯದಲ್ಲಿ ಯಾರಾದಾರೂ ತೊಡಗಿದ್ದು ಕಂಡರೆ ನನಗೆ ಮಾಹಿತಿ ನೀಡಿ ಎಂದು ಕೇಳಿಕೊಂಡಿದ್ದಾರೆ.
Dear well wishers,
A morphed (deep fake) video of mine has been making rounds on social media. I would like to inform that, it is not me in the video, its created to malign my impeccable image by my adversaries with vested interest. 1/3